ಪುತ್ತೂರು: ಭಾರತೀಯ ಜೈನ್ ಮಿಲನ್ ಪುತ್ತೂರು ಘಟಕದ ವತಿಯಿಂದ ಇಲ್ಲಿನ ಮಹಾವೀರ ವೆಂಚರ್ ಸಭಾಂಗಣದಲ್ಲಿ ‘ಆಟಿದ ಅಟಿಲ್ ದ ಲೇಸ್’ ಕಾರ್ಯಕ್ರಮ ನಡೆಯಿತು.
ಪುತ್ತೂರು: ಭಾರತೀಯ ಜೈನ್ ಮಿಲನ್ ಪುತ್ತೂರು ಘಟಕದ ವತಿಯಿಂದ ಇಲ್ಲಿನ ಮಹಾವೀರ ವೆಂಚರ್ ಸಭಾಂಗಣದಲ್ಲಿ ‘ಆಟಿದ ಅಟಿಲ್ ದ ಲೇಸ್’ ಕಾರ್ಯಕ್ರಮ ನಡೆಯಿತು.
ಮಹಾವೀರ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾಕ್ಟರ್ ರಾಜೇಶ್ವರಿ ಪಡಿವಾಲ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜೈನ್ ಮಿಲನ್ ವಲಯ 8 ರ ನಿರ್ದೇಶಕ ವೀರ್ ಬಿ. ಸೋಮ ಶೇಖರ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರತಿಯೊಬ್ಬ ಶ್ರಾವಕ, ಶ್ರಾವಕಿ, ಹಾಗೂ ಯುವ ಪೀಳಿಗೆ ಈ ಬಗ್ಗೆ ಆಸಕ್ತಿ ತೋರಿಸಿ, ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಮಿಲನ್ ಸಂಘಟನೆಯನ್ನು ಉಳಿಸಿ, ಬೆಳೆಸುವ ಬಗ್ಗೆ ಕಾರ್ಯ ಪ್ರವತ್ತರಾಗುವಂತೆ ವಿನಂತಿಸಿದರು. ಆಟಿ ಸಮಯದಲ್ಲಿ ಬಳಸುವ ಆಹಾರದ ಕುರಿತು ಮಾಹಿತಿ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಬಿ.ಪ್ರಮೋದ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಅವರವರ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ. ದೇಶ ಸೇವೆ, ಪಾರದರ್ಶಕತೆ, ಪ್ರಾಮಾಣಿಕತೆ, ಮತ್ತು ನಿಷ್ಠೆ , ನಮ್ಮ ಬದುಕಿನ ಧ್ಯೇಯ ವಾಗಿರಬೇಕು. ಜೈನ ಧರ್ಮದ ತತ್ವ ವಾದ ಬದುಕು, ಬದುಕಲು ಬಿಡು, ಇದನ್ನು ನಾವು ಅನುಷ್ಠಾನಕ್ಕೆ ತರಬೇಕು, ಶಿಕ್ಷಣ, ಸಂಘಟನೆ, ಹೋರಾಟ ಇದರ ಮಹತ್ವದ ಬಗ್ಗೆ ವಿವರಿಸಿದರು. ಜೈನ್ ಮಿಲನ್ ನಿರ್ದೇಶಕರಾದ ವೀರಾಂಗಣ ರಾಜಶ್ರೀ ಯಸ್ ಹೆಗ್ಡೆ ಮಾತನಾಡಿ ಕಾರ್ಯಕ್ರಮದ ಮಹತ್ವ, ಮಿಲನ್ ಗೆ ನೂತನ ಸದಸ್ಯರ ಸೇರ್ಪಡೆ, ಆಹಾರೋತ್ಸವದ ಕುರಿತು ಮಾಹಿತಿ ನೀಡಿ ಅಭಿನಂದಿಸಿದರು. ವೀರ್ ಪ್ರಕಾಶ್ಚಂದ್ರ ರೈ, ವೀರ್ ಕಿರಣ್ ಪಡಿವಾಲ್, ವೀರ್ ಸುದರ್ಶನ್ ಹೆಗ್ಡೆ, ವೀರ್ ನವೀನ ಪಡಿವಾಲ್ ಇವರು ಸಂದರ್ಭೋಚಿತವಾಗಿ ಹಾಡಿದರು. ಮಿಲನ್‌ನ ಕಾರ್ಯದರ್ಶಿ ರಾಜೇಸ್ ಬಿ ಶೆಟ್ಟಿ ವರದಿ ವಾಚಿಸಿ, ಸಭಾಂಗಣದ ಸ್ಥಳಾವಕಾಶ ನೀಡಿದ ಮಹಾವೀರ ವೆಂಚರ್‌ನ ಆಡಳಿತ ನಿರ್ದೇಶಕ ವೀರ್ ಅಜೇಯ್ ಪಡಿವಾಲ್ ಅವರನ್ನು ಗೌರವಿಸಲಾಯಿತು. ಪುತ್ತೂರು ಮಿಲನ್ ಮಾರ್ಗದರ್ಶಕರಾದ ವಿ.ಕೆ.ಜೈನ್, ಮಹಾವೀರ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ವೀರ್ ಅಶೋಕ್ ಪಡಿವಾಲ್, ವೀರ್ ಅಶೋಕ್ ಆರಿಗ, ವೀರ್ ಹರ್ಷ ವರ್ಧನ್ ಪಡಿವಾಲ್, ವೀರ್ ಹರ್ಷ ಕುಮಾರ್ ಪಚ್ಚಾಡಿ, ವೀರ್ ರಾಜ ಶೇಖರ್ ಜೈನ್, ಹಾಗೂ ಪೂರ್ವಾಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಿಲನ್ ಅಧ್ಯಕ್ಷ ವೀರ್ ಸತೀಶ್ ಪಡಿವಾಲ್ ಅವರು ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೀರ್ ಯಶೋಧರ ಜೈನ್ ನಿರ್ವಹಿಸಿದರು. ವೀರಾಂಗಣ ರಶ್ಮಿ ರಾಜೇಶ್ ಸಹಕರಿಸಿದರು. ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಇಚಿಲಂಪಾಡಿ ಮಿಲನನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.