ಸಾರಾಂಶ
ಕೊಪ್ಪಳ: ಮನುಷ್ಯ ಜನ್ಮ ಸರ್ವೋತ್ತವಾದುದು. ಪ್ರತಿಯೊಬ್ಬರು ಕಾಯಕದಲ್ಲಿ ಭಗವಂತನ ಸ್ಮರಣೆ ಮಾಡಬೇಕು ಎಂದು ದದೇಗಲ್ ಗ್ರಾಮದ ಸಿದ್ದಾರೂಢ ಮಠದ ಆತ್ಮಾನಂದ ಭಾರತಿ ಶ್ರೀ ಹೇಳಿದರು.ತಾಲೂಕಿನ ಮಂಗಳಾಪೂರ ರಸ್ತೆ ಬಳಿ ಇರುವ ಗವಿಗುಮ್ಮಣ್ಣೇಶ್ವರ ದೇವಸ್ಥಾನದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಬೇಕಾದರೆ ಉತ್ತಮ ಸಂಸ್ಕಾರ ತಾಳಬೇಕು. ತಂದೆ, ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸಬೇಕು ಎಂದರು.ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ ಅಧ್ಯಕ್ಷತೆ ವಹಿಸಿದ್ದರು.ನಗರಸಭೆ ಸದಸ್ಯೆ ಲತಾ ಗವಿಸಿದ್ದಪ್ಪ ಚಿನ್ನೂರ, ಗವಿಗುಮ್ಮಣ್ಣೇಶ್ವರ ದೇವಸ್ಥಾನದ ಸೇವಾ ಸಮಿತಿ ಗೌರವಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಪಂಪಣ್ಣ ಪಲ್ಲೇದ, ಅಧ್ಯಕ್ಷ ಬಸವರಾಜ ಪಲ್ಲೇದ, ಉಪಾಧ್ಯಕ್ಷ ಗವಿಸಿದ್ದಪ್ಪ ಗುರಪ್ಪ ಪಲ್ಲೇದ, ಖಜಾಂಚಿ ರಾಜು ಮಂಗಳಾಪುರ, ಮಲ್ಲಿಕಾರ್ಜುನ ಸಜ್ಜನ, ಶೇಖರಗೌಡ ಓಜನಳ್ಳಿ, ಚಿನ್ನಪ್ಪ ಪಲ್ಲೇದ, ಸಿದ್ದಲಿಂಗಪ್ಪ ಅಂಗಡಿ, ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶರಣಪ್ಪ ಅಂಗಡಿ, ಉಪಾಧ್ಯಕ್ಷ ಕುಮಾರಸ್ವಾಮಿ ಭದ್ರಾಪುರಮಠ, ಖಜಾಂಚಿ ಮಲ್ಲಿಕಾರ್ಜುನ ಸಿದ್ನೇಕೊಪ್ಪ, ಯಲ್ಲಪ್ಪ ಹುರಿಗೆಜ್ಜಿ, ಬಸವರಾಜ ಗವಿಸಿದ್ದಪ್ಪ ಪಲ್ಲೇದ, ಪಂಪಣ್ಣ ನಾಗಪ್ಪ ಪಲ್ಲೇದ, ನಾಗರಾಜ ಲಕ್ಕುಂಡಿಮಠ, ಮಂಜುನಾಥ ಸಾಲಿಮಠ, ಪರುಶುರಾಮ ಅಂಬಿಗೇರ, ಪ್ರಶಾಂತ ಸಜ್ಜನ, ಉಮೇಶ ಉಮಚಗಿ, ಕಿರಣ್, ರವಿ ದಿವಟರ್, ಮಹೇಶ ಮಡಿವಾಳರ ಇತರರಿದ್ದರು. ವಡ್ರಟ್ಟಿ, ದದೇಗಲ್ ಗ್ರಾಮಸ್ಥರಿಂದ ಬೆಳಗಿನ ಜಾವದವರೆಗೊ ಅದ್ಧೂರಿ ಭಜನಾ ನಡೆಯಿತು.