ಸಾರಾಂಶ
ಅನುಸೂಚಿತ ಜಾತಿಯ ಬುಡಕಟ್ಟು ಜನಾಂಗದ ಸ್ವಾಧೀನದಲ್ಲಿರುವ ಭೂಮಿಯನ್ನು ಬೆದರಿಕೆಯಿಂದ ಪಡೆಯುವುದು, ಹಕ್ಕುಗಳನ್ನು ಕಸಿದುಕೊಳ್ಳುವುದು, ಮತದಾನ ಹಕ್ಕನ್ನು ಬೆದರಿಕೆಯಿಂದ ಪಡೆಯುವುದು, ಧಾರ್ಮಿಕ ಕೇಂದ್ರಗಳ ಪ್ರವೇಶಕ್ಕೆ ನಿಷೇಧ ಹೇರುವುದು, ಕಿರುಕುಳ ನೀಡುವುದು, ಅವಹೇಳನ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿವೆ.
ಸೂಲಿಬೆಲೆ: ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಮೇಲೆ ದೌರ್ಜನ್ಯ ಎಸಗುವುದು ಅಪರಾಧವಾಗುತ್ತದೆ, ಈ ಬಗ್ಗೆ ಸಾರ್ವಜನಿಕವಾಗಿ ಎಚ್ಚರವಹಿಸಬೇಕು ಎಂದು ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ಸಂಯೋಜಕ ವೆಂಕಟೇಶ್ ಹೇಳಿದರು.
ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದರು.ಅನುಸೂಚಿತ ಜಾತಿಯ ಬುಡಕಟ್ಟು ಜನಾಂಗದ ಸ್ವಾಧೀನದಲ್ಲಿರುವ ಭೂಮಿಯನ್ನು ಬೆದರಿಕೆಯಿಂದ ಪಡೆಯುವುದು, ಹಕ್ಕುಗಳನ್ನು ಕಸಿದುಕೊಳ್ಳುವುದು, ಮತದಾನ ಹಕ್ಕನ್ನು ಬೆದರಿಕೆಯಿಂದ ಪಡೆಯುವುದು, ಧಾರ್ಮಿಕ ಕೇಂದ್ರಗಳ ಪ್ರವೇಶಕ್ಕೆ ನಿಷೇಧ ಹೇರುವುದು, ಕಿರುಕುಳ ನೀಡುವುದು, ಅವಹೇಳನ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿವೆ ಎಂದು ಹೇಳಿದರು.
ಕಾಲೇಜು ಪ್ರಾಚಾರ್ಯ ಮೋಹನ್‌ಕುಮಾರ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೀದಿ ನಾಟಕ ಮೂಲಕ ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಪೂರ್ಣಪ್ರಮಾಣದಲ್ಲಿ ಸಹಕಾರಿಯಾಗಿದೆ, ಅನುಸೂಚಿತ ವರ್ಗಗಳ ವ್ಯಕ್ತಿಗಳಿಗೆ ಯಾವುದೇ ಹಿಂಸೆ, ಕಿರುಕುಳ, ದೌರ್ಜನ್ಯ ಎಸಗಿದರೆ ೭ ವರ್ಷಗಳ ಶಿಕ್ಷೆಯಾಗುತ್ತದೆ, ಈ ಬಗ್ಗೆ ಜಾಗೃತರಾಗಿ ಸಾರ್ವಜನಿಕವಾಗಿ ಸಾಮರಸ್ಯ ಜೀವನ ನಡೆಸಲು ಅನುಕೂಲವಾಗುವಂತೆ ಜೀವಿಸಬೇಕು ಎಂದು ಸಲಹೆ ನೀಡಿದರು.ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆ ತಂಡದ ವತಿಯಿಂದ ಬೀದಿ ನಾಟಕ ಜಾಗೃತಿ ಕಾರ್ಯಕ್ರಮ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ರಾಮೇಗೌಡ, ಕಲಾವಿದರು, ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ ಹಾಜರಿದ್ದರು.---------