ಸಾರಾಂಶ
ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ. ಇವುಗಳಿಂದ ಇಡೀ ದೇಶವು ವಿಮೋಚನೆ ಹೊಂದಲು ಸಾಧ್ಯ. ದಲಿತರು ಸಂಪೂರ್ಣವಾಗಿ ಅಕ್ಷರಸ್ಥರಾದರೆ ಮಾತ್ರ ಈ ದೇಶದಲ್ಲಿ ದೌರ್ಜನ್ಯಗಳು ನಿಲ್ಲಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ. ಇವುಗಳಿಂದ ಇಡೀ ದೇಶವು ವಿಮೋಚನೆ ಹೊಂದಲು ಸಾಧ್ಯ. ದಲಿತರು ಸಂಪೂರ್ಣವಾಗಿ ಅಕ್ಷರಸ್ಥರಾದರೆ ಮಾತ್ರ ಈ ದೇಶದಲ್ಲಿ ದೌರ್ಜನ್ಯಗಳು ನಿಲ್ಲಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.ಕರಜಗಿ ಪಟ್ಟಣದಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಕ್ಷದ ಮುಖಂಡರು ಆದ ನಿತಿನ್ ಗುತ್ತೇದಾರ್ ಮಾತನಾಡಿ, ಈ ದೇಶದಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು ಪಾಲಿಸಿ ನಿಜವಾದ ಪ್ರಜೆಗಳಾಗಿ ಮತ್ತು ನಿಜವಾದ ದೇಶಭಕ್ತರಾಗಿ ಹೊರಹೊಮ್ಮುವಂತೆ ಯುವಜನತೆಗೆ ಕರೆ ನೀಡಿದರು.
ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು, ಆಲಮೇಲ್ ಪಟ್ಟಣದ ಮಲ್ಲಿಬೋಮ್ಮ ಶ್ರೀಗಳು, ಡಾ.ಅನಿಲ್ ತೆಂಗಳಿ, ಮಹಾ ನಾಯಕ ಧಾರವಾಹಿಯ ಬಾಲ ಅಂಬೇಡ್ಕರ್ ಪಾತ್ರಧಾರಿ ಆಯುಧ ಭಾನುಶಾಲಿ, ಪ್ರಭಾವತಿ ಮೈತ್ರಿ ಮತ್ತು ವಿಜಯಕುಮಾರ್ ಸಾಲಿಮನಿ ಮತ್ತು ಇತರರು ಮಾತನಾಡಿದರು.ತಹಸೀಲ್ದಾರ್ ಸಂಜುಕುಮಾರ ದಾಸರ್, ಮತಿನ್ ಅಹ್ಮದ್ ಪಟೇಲ್, ಪಪ್ಪು ಪಟೇಲ್, ಅರವಿಂದ ದೊಡ್ಡಮನೆ, ಅರವಿಂದ ಗುತ್ತೇದಾರ್, ಶಂಕು ಮ್ಯಾಕೆರಿ, ಸಿದ್ಧಾರ್ಥ ಬಸರಿ ಗಿಡದ, ಪ್ರಕಾಶ ಜಮಾದಾರ್, ರವಿಗೌರ, ಭೀಮರಾಯ ಗೌರ, ಸಂಜೀವ ಬಗಲಿ, ಶ್ರೀಮಂತ ಬಿರಾದಾರ, ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಕುಮಾರ್ ಕೊಳಗೇರಿ, ಅಶೋಕ ಗುಡ್ಡಡಗಿ ಉಪಸ್ಥಿತರಿದ್ದರು.