ದಲಿತರ ಮೇಲೆ ದೌರ್ಜನ್ಯ: ದಲಿತ ಸಂಘಟನೆ ಆರೋಪ

| Published : Mar 08 2025, 12:32 AM IST

ಸಾರಾಂಶ

Atrocities on Dalits: Dalit organization alleges

-ಮಾ.10ರಂದು ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ

----

ಕನ್ನಡಪ್ರಭ ವಾರ್ತೆ ಸುರಪುರ

ಕೆಂಭಾವಿ ವ್ಯಾಪ್ತಿಯಲ್ಲಿ ಬರುವ ಗೌಡಗೇರಾದಲ್ಲಿ ಡಾ. ಅಂಬೇಡ್ಕರ್ ಬ್ಯಾನರ್ ತೆರವಿನ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಘಟನೆ ನಡೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ದಲಿತ ಸಂಘಟನೆಗಳ ಮುಖಂಡರು, ಇದನ್ನು ಖಂಡಿಸಿ ಡಿವೈಎಸ್‌ಪಿ ಕಚೇರಿಗೆ ಮಾ.10ರಂದು ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಮಾತನಾಡಿದ ಶಿವಲಿಂಗ, ಭೀಮಣ್ಣ ಮತ್ತು ನಿಂಗಣ್ಣ ಅವರು, ಬಿಜೆಪಿ ಸರ್ಕಾರದ ದಲಿತರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಸಹಿಸದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದರೂ ಪ್ರಯೋಜನವಾಗಿಲ್ಲ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಾತ್ರ ನಿಂತಿಲ್ಲ. ಗೌಡಗೇರಾದಲ್ಲಿ ಅಂಬೇಡ್ಕರ್ ಬ್ಯಾನರ್ ತೆರವಿನಲ್ಲಿ ಪೊಲೀಸರ ಉಳ್ಳವರ ಪರವಾಗಿ ನಿಂತು ದಲಿತರನ್ನು ಬಂಧಿಸಿದ್ದಾರೆ. ಇದರಿಂದ ದಲಿತರಿಗೆ ಜೀವಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಲಿತ ಮುಖಂಡರಾದ ಮರಿಲಿಂಗ ಗುಡಿಮನಿ, ಮಾನಪ್ಪ ಶೆಳ್ಳಗಿ, ಮಹಾದೇವ ಛಲವಾದಿ, ಶೇಖರ ಮಂಗಳೂರು, ರಾಜುಪೇಠ ಅಮ್ಮಾಪುರ, ರಮೇಶ ಬಾಚಿಮಟ್ಟಿ, ಭೀಮರಾಯ ಮಂಗಳೂರು, ಸಿದ್ದಪ್ಪ ಸುರಪುರಕರ್, ಕೆಂಚಪ್ಪ ವಾಗಣಗೇರಿ, ಹಣಮಂತ ಬೋನಾಳ, ಲೋಕೇಶ್ ದೇವಾಪುರ, ಶಿವರಾಜ್, ಶ್ರವಣಕುಮಾರ ದೇವತ್ಕಲ್ ಇದ್ದರು.

-----

ಫೋಟೊ:ಸುರಪುರ ನಗರದ ಪತ್ರಿಕಾಭವನದಲ್ಲಿ ದಲಿತ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.

7ವೈಡಿಆರ್13