ಛಾಯಾಗ್ರಾಹಕರ ಮೇಲೆ ಹಲ್ಲೆ ಖಂಡನೀಯ: ಅಭಿನವ ಗಿರಿರಾಜ್

| Published : May 23 2024, 01:04 AM IST

ಛಾಯಾಗ್ರಾಹಕರ ಮೇಲೆ ಹಲ್ಲೆ ಖಂಡನೀಯ: ಅಭಿನವ ಗಿರಿರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಬೆಂಗಳೂರಿನ ಶಿವಾಜಿನಗರದ ಕಲ್ಯಾಣ ಮಂದಿರ ಒಂದರಲ್ಲಿ ನಡೆಯುತ್ತಿದ್ದ ಮದುವೆ ಸಂದರ್ಭದಲ್ಲಿ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದು ಇದನ್ನು ಖಂಡಿಸುತ್ತೇವೆ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಅಭಿನವ ಗಿರಿರಾಜ್ ತಿಳಿಸಿದರು.

- ಅಂಬೇಡ್ಕರ್‌ ವೃತ್ತದಲ್ಲಿ ಛಾಯಾಗ್ರಾಹಕರ ಸಂಘದಿಂದ ಪ್ರತಿಭಟನೆ: ತಹಸೀಲ್ದಾರ್‌ ಗೆ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬೆಂಗಳೂರಿನ ಶಿವಾಜಿನಗರದ ಕಲ್ಯಾಣ ಮಂದಿರ ಒಂದರಲ್ಲಿ ನಡೆಯುತ್ತಿದ್ದ ಮದುವೆ ಸಂದರ್ಭದಲ್ಲಿ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದು ಇದನ್ನು ಖಂಡಿಸುತ್ತೇವೆ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಅಭಿನವ ಗಿರಿರಾಜ್ ತಿಳಿಸಿದರು.

ಬುಧವಾರ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಜನರು ನೆನಪಿನಲ್ಲಿ ಉಳಿಯುವಂತೆ ಛಾಯಾಗ್ರಾಹಕರು ಪೋಟೋ ತೆಗೆಯು ತ್ತಾರೆ. ಛಾಯಾಗ್ರಾಹಕರು ಹಗಲು,ರಾತ್ರಿ ಎನ್ನದೆ ಕೆಲಸ ಮಾಡಬೇಕಾಗುತ್ತದೆ.ಆದರೆ, ಛಾಯಾಗ್ರಾಹಕರಾದ ನಮಗೆ ಭದ್ರತೆ ಇಲ್ಲದಂತಾಗಿದೆ. ಈ ಹಲ್ಲೆ ಪ್ರಕರಣವನ್ನು ಛಾಯಾಗ್ರಾಹಕರ ಸಂಘದಿಂದ ಖಂಡಿಸುತ್ತೇವೆ ಎಂದರು.

ಛಾಯಾಗ್ರಾಹಕರ ಸಂಘದ ಸಮನ್ವಯ ಸಮಿತಿ ಮುಖ್ಯಸ್ಥ ಎಲಿಯಾಸ್‌ ಮಾತನಾಡಿ, ಇತ್ತೀಚಿಗೆ ಆಧುನಿಕ ಕ್ಯಾಮೆರಾ ಗಳ ದರ ಹೆಚ್ಚಾಗಿದ್ದು ಪೋಟೋ ಗ್ರಾಫರ್‌ ಮೇಲೆ ಹಲ್ಲೆ ಮಾಡಿ ಕ್ಯಾಮೆರಾ ಕಳ್ಳತನ ಮಾಡುವ ಪ್ರಕರಣ ಹೆಚ್ಚಾಗುತ್ತಿದೆ. ರಾತ್ರಿ ಕಾರ್ಯಕ್ರಮ ಮುಗಿಸಿ ಬರುವ ಕ್ಯಾಮರಾಮನ್‌ ಮೇಲೆ ದಾಳಿ ನಡೆಯುತ್ತಿದೆ. ಆದ್ದರಿಂದ ಕ್ಯಾಮರಾಮೆನ್‌ ಗೆ ಸರಿಯಾದ ಭದ್ರತೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮುತ್ತಿನಕೊಪ್ಪ ಮಥಾಯ್, ಮಾಜಿ ಅಧ್ಯಕ್ಷ ಮೇಘಗಿರಿ, ಕಾರ್ಯದರ್ಶಿ ಪುನೀತ್‌, ಪದಾಧಿಕಾರಿಗಳಾದ ಶಿವಶಂಕರ್‌, ಪ್ರವೀಣ್‌, ಅರ್ಜುನ್‌, ಭರತ್‌ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ರಮೇಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.