ಭಗವಂತನ, ಗುರುಗಳ ದರ್ಶನದಿಂದ ಮೋಕ್ಷ ಪ್ರಾಪ್ತಿ. ಜೀವನದಲ್ಲಿ ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನೇ ಪಡೆಯಬಹುದು ಎಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀ ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಭಗವಂತನ, ಗುರುಗಳ ದರ್ಶನದಿಂದ ಮೋಕ್ಷ ಪ್ರಾಪ್ತಿ. ಜೀವನದಲ್ಲಿ ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನೇ ಪಡೆಯಬಹುದು ಎಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀ ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ದೈವಜ್ಞ ಸಮಾಜ ಬಾಂಧವರನ್ನು ಸಂದರ್ಶಿಸಲು ಮತ್ತು ಉತ್ತರಾಧಿಕಾರಿಯಾದ ಕಿರಿಯ ಶ್ರೀಗಳವರನ್ನು ಪರಿಚಯಿಸಲು ನಗರಕ್ಕೆ ಆಗಮಿಸಿದ ಶ್ರೀಗಳು, ದೈವಜ್ಞ ದರ್ಶನ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಮನುಷ್ಯ ವೈಕುಂಠ ಸೇರಬೇಕಾದರೆ ನಿರಹಕಾರ ಸ್ವೀಕಾರ ಮಾಡಬೇಕು. ಭಗವಂತನ ಹಾಗೂ ಗುರುಗಳ ದರ್ಶನ ಪಡೆದರೆ ವೈಕುಂಠಕ್ಕೆ ಹೋಗುತ್ತಾರೆ. ವೈಕುಂಠ ಎಂದರೆ ಆನಂದಮಯ ಸ್ಥಳ. ಮೋಕ್ಷ ಕಲ್ಪಿಸುವುದೇ ವೈಕುಂಠ ಏಕಾದಶಿಯ ಅರ್ಥ. ಭಗವದ್ಗೀತೆಯಲ್ಲಿ ಪರಮಾತ್ಮ ಶ್ರೀಕೃಷ್ಣ ಹೇಳಿದಂತೆ ನಮಗೆ ನಾವೇ ಮಿತ್ರರು. ನಮಗೆ ನಾವೇ ಶತ್ರುಗಳು. ಜೀವನದಲ್ಲಿ ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನು ಪಡೆಯಬಹುದು. ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದು ಆಗುತ್ತದೆ. ಅಲ್ಲದೆ ನಮ್ಮ ಕುಟುಂಬ ಕೂಡ ಅವನತಿಗೆ ಹೋಗುತ್ತದೆ. ಸುತ್ತಮುತ್ತಲಿನ ವಾತಾವರಣ ಕೂಡ ಕೆಡಲು ಕಾರಣಿಕರ್ತರಾಗುತ್ತೇವೆ. ನಮ್ಮಲ್ಲಿ ಉತ್ತಮ ವಾತಾವರಣ ಇರಬೇಕು. ನಾವು ಏನು ಮಾಡುತ್ತೇವೋ ಅದನ್ನೇ ಮಕ್ಕಳು ಕೂಡ ಮಾಡುತ್ತಾರೆ. ಮಕ್ಕಳಿಗೆ ಮೊಬೈಲ್ ಆಕರ್ಷಣೆ ಉಂಟಾಗಲು ಪೋರ್ಷಕರು ಕೂಡ ಕಾರಣಕರ್ತರಾಗಿದ್ದಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವತ್ತ ಪೋಷಕರ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಕಲ್ಪತರು ನಾಡಿನಲ್ಲಿ ದೈವಜ್ಞ ಬ್ರಾಹ್ಮಣರ ಸಂಖ್ಯೆ ಕಡಿಮೆ ಇದ್ದರೂ ಸಹ ಮನಸ್ಸು ಚೆನ್ನಾಗಿದೆ ಎಂದರು. ಗ್ರಾಮ ದೇವಿ ಶ್ರೀ ಕೆಂಪಮ್ಮ ದೇವಾಲಯದ ಗೋಪುರವನ್ನು ಈ ಮಾರ್ಗವಾಗಿ ಪ್ರಯಾಣಿಸುವಾಗ ನೋಡಿದ್ದೇವು. ನಮ್ಮಲ್ಲೂ ಕೂಡ ದೇವಾಲಯದ ದರ್ಶನ ಮಾಡಬೇಕೆಂಬ ಆಸೆ ಇತ್ತು. ಗ್ರಾಮದೇವತೆಯ ದರ್ಶನ ಭಾಗ್ಯ ಕೂಡ ದೊರಕಿರುವುದು ಸಂತಸವಾಗಿದೆ ಎಂದು ಶ್ರೀಗಳು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಮಠದ ಕಿರಿಯ ಶ್ರೀಗಳಾದ ಪರಮ ಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ನಗರದ ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಶ್ರೀ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆ ಮೂಲಕ ವಾದ್ಯದೊಂದಿಗೆ ಶ್ರೀಗಳವರನ್ನು ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಡಾ ಶ್ರೀಧರ್, ಕೆಪಿಸಿಸಿ ಸದಸ್ಯರಾದ ವಿ ಯೋಗೇಶ್, ತರಕಾರಿ ಗಂಗಾಧರ್, ಮಲ್ಲೇನಹಳ್ಳಿ ಕಾಂತರಾಜ್, ನಾಗರಾಜ್ ಮಂಜುನಾಥ್ ಪರಮೇಶ್, ದೈವಜ್ಞ ಬ್ರಾಹ್ಮಣ ಸಮಾಜದ ಮುಖಂಡರಾದ ದತ್ತಾತ್ರೇಯ ಗಣಪತಿ ಶೇಟ್, ನಾಗರಾಜ್ ಶೇಟ್, ರಾಮಚಂದ್ರಶೇಟ್, ವಿಜಯ್ ಶೇಟ್, ಸುನಿಲ್ ಶೇಟ್, ರಾಜು ರಾಯ್ಕರ್, ಎಸ್ ಗಣೇಶ್, ಸುಬ್ರಹ್ಮಣ್ಯ ಶೇಟ್, ಪರಮೇಶ್ ಶೇಟ್, ರಾಘವೇಂದ್ರ ಶೇಟ್ ನಾಗರಾಜ್ ಶೇಟ್ ದಂಪತಿ, ಶಿಲ್ಪಾ ಶೇಟ್ , ಶಾಲಿನಿ ಶೇಟ್ , ಮನಸ್ವಿ, ಶಿವನಾಥ್ ಇತರರಿದ್ದರು.