ಸತ್ಸಂಗದಿಂದ ಮನುಷ್ಯನಿಗೆ ಲೋಕ ಪೂಜ್ಯತೆ ಪ್ರಾಪ್ತಿಯಾಗುವುದು. ಶ್ರದ್ಧೆ, ತತ್ಪರತೆ, ಸಂಯತೆಯಿಂದ ಜೀವನವನ್ನು ಕಟ್ಟಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ರೋಣ
ಸತ್ಸಂಗದಿಂದ ಮನುಷ್ಯನಿಗೆ ಲೋಕ ಪೂಜ್ಯತೆ ಪ್ರಾಪ್ತಿಯಾಗುವುದು. ಶ್ರದ್ಧೆ, ತತ್ಪರತೆ, ಸಂಯತೆಯಿಂದ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.ಭಾನುವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಗವಿಸಿದ್ದೇಶ್ವರ ಸೇವಾ ಸಮಿತಿ ವತಿಯಿಂದ 9 ದಿನಗಳವರೆಗೆ ಜರುಗಲಿರುವ ಆಧ್ಯಾತ್ಮಿಕ ಪ್ರವಚನ 2 ದಿನದ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.
ಮನುಷ್ಯನ ಇತಿಹಾಸದ ಮೇಲೆ ಕಣ್ಣಾಡಿಸಿದರೆ ಎರಡು ಶಬ್ದಗಳು ಕಣ್ಮುಂದೆ ಬರುತ್ತವೆ. ಒಂದು ಹುಡುಗಾಟ, ಇನ್ನೊಂದು ಹುಡುಕಾಟ. ಜೀವನ ಹುಡುಗಾಟವಲ್ಲ, ಹುಡುಕಾಟವಾಗಿದೆ. ಆಸ್ತಿ, ಅಂತಸ್ತಿಗಾಗಿ ಹುಡುಕಾಟ ನಡೆದಿದೆ. ಅಳುತ್ತಾ ಹುಟ್ಟಿದ ಮನುಷ್ಯ ವೃದ್ಧಾಪದಲ್ಲಿ ಅಳುವುದು ಯಾಕೆ? ಜೀವದೂದ್ದಕ್ಕೂ ಬಯಸಿದ್ದು ಪಡೆದವ ಅಳುವುದ್ಯಾಕೆ ಎಂಬುದು ಅವಲೋಕನ ಮಾಡಿಕೊಳ್ಳಬೇಕಿದೆ. ಮನುಷ್ಯನ ಹುಡುಕಾಟವಿರುವುದು ವಸ್ತುವಿಗಾಗಿ ಅಲ್ಲ, ಸುಖದ ಸಂಪತ್ತಿಗಾಗಿ. ಸುಖದ ಸಂಪತ್ತಿನ ಹುಡುಕಾಟದ ಕ್ರಿಯೆಯಿಂದ ನೆಮ್ಮದಿ ಸಿಗದಂತಾಗಿದೆ. ಸಂತೋಷ ,ಸುಖ, ಶಾಂತಿ, ಸಮಾದಾನದ ಹುಟುಕಾಟದಲ್ಲಿ ತೋಡಗಲು ಸತ್ಸಂಗ ಪ್ರಮುಖ ದಾರಿಯಾಗಿದೆ ಎಂದರು.ಜ್ಞಾನ ಶಾಂತಿಯ ಕಡೆಗೆ ಕರೆದುಕೊಂಡು ಹೋಗುತ್ತದೆ. ಶ್ರದ್ದೆ,ತತ್ಪರತೆ, ಸಂಯತೆಯಿಂದ ಇರಬೇಕು. ಶ್ರದ್ಧೆಯು ಶಾಂತಿಗೆ ಮೊದಲ ಮೆಟ್ಟಿಲಾಗಿದೆ. ಕೇಳಿದ್ದನ್ನು, ಆಲಿಸಿದ್ದನ್ನು ಅಳವಡಿಸಿಕೊಳ್ಳಬೇಕು. ಇದುವೆ ತತ್ಪರತೆಯಾಗಿದೆ. ಹರಿಯುವ ನದಿಯಂತೆ ತತ್ಪರತೆ ಇರಬೇಕು. ಪ್ರಪಂಚದ ಕರ್ತವ್ಯಗಳನ್ನು ಅರಿಬೇಕು. ಮತ್ತೊಬ್ಬರು ಆಡುವ ಕೆಟ್ಟ ಮಾತುಗಳು ಮನಸ್ಸಿನಾಳಕ್ಕೆ ಇಳಿಯದಂತೆ ಸಂಯತೇಂದ್ರಿಯತೆಯಿಂದ ಇರಬೇಕು. ಮನಸ್ಸೆಂಬ ಸರ್ಕಲ್ನಲ್ಲಿ ವಿವೇಕ ಎಂಬ ಸಂಯತೆ ಇರಬೇಕು. ಸಂಸಾರದಲದಲಿ ಸಂಶಯವಿದ್ದಲ್ಲಿ ಜೀವನ ಬಿರುಕು ಬೀಡುವುದು. ಆದ್ದರಿಂದ ಅರಿತು ಜೀವನಾ ಸಾಗಿಸಿದಲ್ಲಿ ಸುಖ, ಸಂತೋಷದ ಸಾಗರ ತಲುಪಬಹುದು ಎಂದರು.
ಪ್ರವಚನದಲ್ಲಿ ಮಹಾರಾಷ್ಟ್ರ ಅಕ್ಕಲಕೋಟದ ಬಸವಲಿಂಗಸ್ವಾಮಿಜಿ, ಭಾಲ್ಕಿ-ಭಾತಂಭ್ರ ನಿರಂಜಮಠದ ಡಾ.ಗುರುಬಸವ ಸ್ವಾಮೀಜಿ, ಕೊತಬಾಳ ಗಂಗಾಧರ ಸ್ವಾಮೀಜಿ, ಡಾ. ವಿಶ್ವನಾಥ ದೇವರು, ಜೀಗೇರಿ ಗುರುಸಿದ್ದ ಶಿವಾಚಾರ್ಯರು, ಹೂವಿನ ಹಡಗಲಿ ಶಾಖಾ ಗವಿಮಠದ ಹಿರೇ ಶಿವಶಾಂತವೀರ ಶರಣರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.