ಸಾರಾಂಶ
ವೀರಶೈವ, ಕುರುಬ ಬ್ರಾಹಣ ಸೇರಿ ಇತರ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ಬರೆಸಿದ್ದು ದೊಡ್ಡ ದುರಂತ. ಸಿಎಂ ಸಿದ್ದರಾಮಯ್ಯ ಅವರು ಯಾರನ್ನು ಮನವೊಲಿಸಲು ಮುಂದಾಗಿದ್ದಾರೋ ಎಂಬುದು ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ತಿಳಿಸಿದರು.
ಗಜೇಂದ್ರಗಡ: ಜಾತಿ ಸಮೀಕ್ಷೆ ಮೂಲಕ ಹಿಂದೂ ಧರ್ಮವನ್ನು ಒಡೆಯಲು ದೊಡ್ಡ ಹುನ್ನಾರವನ್ನು ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ನಡೆಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನ ಕ್ಯಾಬಿನೆಟ್‌ನಲ್ಲಿಯೇ ಜಾತಿ ಸಮೀಕ್ಷೆಗೆ ಬಹಳಷ್ಟು ಜನ ವಿರೋಧಿಸಿದ್ದಾರೆ ಎಂಬ ವರದಿಗಳಿದ್ದರೂ ಸಿದ್ದರಾಮಯ್ಯನವರು ಪ್ರತಿಷ್ಠೆಯಾಗಿ ತೆಗೆದುಕೊಂಡು ಜಾತಿಗಣತಿಗೆ ಮುಂದಾಗಿದ್ದಾರೆ. ಈ ಹಿಂದೆ ವಿರಶೈವ ಲಿಂಗಾಯತದಲ್ಲಿ ಉಪ ಜಾತಿಗಳನ್ನು ಒಡೆಯಲು ಹೋಗಿ ಅವರಿಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ ಅವರು ಪಶ್ಚಾತ್ತಾಪ ಪಟ್ಟಿದ್ದಾರೆ ಎಂದರು.ವೀರಶೈವ, ಕುರುಬ ಬ್ರಾಹಣ ಸೇರಿ ಇತರ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ಬರೆಸಿದ್ದು ದೊಡ್ಡ ದುರಂತ. ಸಿಎಂ ಸಿದ್ದರಾಮಯ್ಯ ಅವರು ಯಾರನ್ನು ಮನವೊಲಿಸಲು ಮುಂದಾಗಿದ್ದಾರೋ ಎಂಬುದು ತಿಳಿಯುತ್ತಿಲ್ಲ ಎಂದರು.
ರಾಜ್ಯ ಸರ್ಕಾರದಿಂದ ಸೆ. ೨೨ರಿಂದ ನಡೆಸುತ್ತಿರುವ ಜಾತಿಗಣತಿಯಲ್ಲಿ ನಮ್ಮ ಎಲ್ಲ ವೀರಶೈವ ಸಮಾಜದವರು, ಒಳಪಂಗಡ ಪಂಚಮಸಾಲಿ ಇರಬಹುದು. ಸಮಾಜದ ಎಲ್ಲ ಒಳಪಂಗಡದವರು ಧರ್ಮದ ಕಾಲಂ ಎಂದು ಇದ್ದಲ್ಲಿ ಹಿಂದೂ ಎಂದು ಬರೆಯಿಸಿ. ಉಪಪಂಗಡ ಇದ್ದಲ್ಲಿ ವೀರಶೈವ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ ಸೇರಿ ಅದಕ್ಕೆ ತಕ್ಕಂತೆ ಬರೆಯಿಸಿ. ಧರ್ಮ ಕಾಲಂನಲ್ಲಿ ಮಾತ್ರ ಹಿಂದೂ ಅಂತ ಬರೆಯಿಸಿ ಎಂದು ಮನವಿ ಮಾಡಿದರು.ಈ ವೇಳೆ ಉಮೇಶ ಮಲ್ಲಾಪೂರ, ರಾಜೇಂದ್ರ ಘೋರ್ಪಡೆ, ಹನುಮಂತ ಹಟ್ಟಿಮನಿ, ಮುದಿಯಪ್ಪ ಕರಡಿ, ಶಿವನಾಂದ ಮಠದ, ವೀರಪ್ಪ ಪಟ್ಟಣಶೆಟ್ಟಿ, ಮೂಕಪ್ಪ ನಿಡಗುಂದಿ ಸೇರಿ ಇತರರು ಇದ್ದರು.ರಸ್ತೆ ದುರಸ್ತಿಗೆ ಆಗ್ರಹಿಸಿ 24ರಂದು ಪ್ರತಿಭಟನೆ
ಜಿಲ್ಲೆಯಲ್ಲಿ ರಸ್ತೆಗಳು ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಲು ಆಗ್ರಹಿಸಿ ಬಿಜೆಪಿಯಿಂದ ಸೆ. ೨೪ರಂದು ಗದಗ ರಸ್ತೆ ಬಂದ್ ಮಾಡಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಪ್ರತಿಭಟಿಸುತ್ತೇವೆ. ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಜನರೊಡನೆಗೂಡಿ ದೊಡ್ಡ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಎಚ್ಚರಿಸಿದರು.೨೦೦೮ರಲ್ಲಿ ಜಿಲ್ಲೆಯಲ್ಲಿ ತಾವು ಸೋತಿದ್ದಕ್ಕೆ ವೋಟ್ ಚೋರಿ ಕಾರಣ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ. ಆಗ ಅವರು ೧೮ ಸಾವಿರ ವೋಟ್‌ಗಳಿಂದ ಸೋತಿದ್ದರು. ಹಾಗಾದರೆ ಕಾಂಗ್ರೆಸ್‌ನವರೆ ವೋಟ್ ತೆಗೆಸಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಇಂತಹ ಹುಚ್ಚು ಹೇಳಿಕೆಗಳನ್ನು ಕೊಡುವುದನ್ನು ಕಾಂಗ್ರೆಸ್‌ನವರು ಬಿಡಬೇಕು ಎಂದು ಆಗ್ರಹಿಸಿದರು.