ಸಾರಾಂಶ
Attempt to cover up Bhovi Corporation scam: Allegation of bulldozing
-ಭೋವಿ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಮಾಜಿ ಶಾಸಕ ಸಲಹೆ
----ಕನ್ನಡಪ್ರಭ ವಾರ್ತೆ ಹೊಸದುರ್ಗ
ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬೃಹತ್ ಪ್ರಮಾಣದ ಭ್ರಷ್ಟಾಚಾರದ ತನಿಖೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಶಾಸಕ ಗೂಳೀಹಟ್ಟಿ ಡಿ ಶೇಖರ್ ಆರೋಪಿಸಿದ್ದಾರೆ.ಈ ಕುರಿತು ಆಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಇಂದಿನ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ತನಿಖೆಯನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೊಗುತ್ತಾರೆ ಎನ್ನುವ ಭರವಸೆ ಇದೆಯಾದರೂ ಇತ್ತೀಚಿಗೆ ನಿಗಮದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ತನಿಖೆಯ ದಿಕ್ಕು ಯಾವ ಕಡೆ ಹೋಗುತ್ತದೆ ಎಂಬ ಅನುಮಾನ ಮೂಡುತ್ತದೆ ಎಂದಿದ್ದಾರೆ. ಕೇವಲ ಅಧಿಕಾರಿಗಳನ್ನ, ಕೆಳ ಹಂತದ ಸಿಬ್ಬಂದಿಯನ್ನ ಹಾಗೂ ಅವರ ಸಂಬಂಧಿಕರನ್ನು ತನಿಖೆಗೆ ಒಳಪಡಿಸಿ ನಾಯಕರನ್ನು ಕೈ ಬಿಡುವ ಪ್ರುಯತ್ನಗಳೂ ನಡೆಯುತ್ತಿವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಧಿಕಾರಿಗಳು ಅಥವಾ ಅವರ ಸಂಬಂಧಿಕರು ಕೋಟಿಗಟ್ಟಲೆ ಹಣ ಪಡೆದಿದ್ದರೆ ಶ್ರೀಮಂತರಾಗಿ ಬಾಡಿಗೆ ಮನೆಯಲ್ಲಿ ಇರುತ್ತಿರಲಿಲ್ಲ. ನಿಗಮದ ಕಛೇರಿಯಲ್ಲಿ ದಾಖಲೆಗಳು ಕಳ್ಳತನವಾಗಿವೆ ಎನ್ನಲಾಗುತ್ತಿದೆ.
ಈ ಹಗರಣದ ವೇಳೆಯಲ್ಲಿನ ಕಡತಗಳನ್ನು ಮಾಜಿ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರ ಸಹಿಯೂ ಇದೆ. ಹಾಗೆಯೇ ಮಾಜಿ ಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಶ್ರೀರಾಮಲು ಅವರ ಸಹಿಯೂ ಇದೆ. ಈ ಬಗ್ಗೆ ಸತ್ಯಾಸತ್ಯತೆಯ ತನಿಖೆಯಯಾಗಲಿ ಎಂದಿರುವ ಅವರು ಭೋವಿ ನಿಗಮ ಇರುವುದು ಸಮಾಜದ ಅಭಿವೃದ್ಧಿಗಾಗಿಯಲ್ಲ ಉಳ್ಳವರ ಅಭಿವೃದ್ಧಿಗಾಗಿ ಎನ್ನುವಂತಾಗಿದೆ. ಈ ಬಗ್ಗೆ ಭೋವಿ ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.------
ಪೋಟೋ, 28ಎಚ್‌ಎಸ್‌ಡಿ1 : ಗೂಳೀಹಟ್ಟಿ ಶೇಖರ್