ಏತ ನೀರಾವರಿ ಪುನಶ್ಚೇತನಗೊಳಿಸಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಪ್ರಯತ್ನ: ನರೇಂದ್ರಸ್ವಾಮಿ

| Published : Aug 26 2024, 01:37 AM IST

ಏತ ನೀರಾವರಿ ಪುನಶ್ಚೇತನಗೊಳಿಸಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಪ್ರಯತ್ನ: ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹಲಗೂರು ಭಾಗದಲ್ಲಿ ತೊರೆಕಾಡನಹಳ್ಳಿಯಲ್ಲಿ ಬಳಿ ಶಿಂಷಾ ನದಿ ಪಾತ್ರದಲ್ಲಿ ಒಂದು ಬ್ಯಾರೇಜ್ ನಿರ್ಮಿಸಿ 26 ಕೆರೆಗಳಿಗೆ ಏತ ನೀರಾವರಿ ಸೇರಿದಂತೆ ಬ್ಯಾಡರಹಳ್ಳಿ ಮಡಳ್ಳಿ ಏತ ನೀರಾವರಿಗಳಲ್ಲಿ ಒಟ್ಟು ಮೂರೂ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿದ್ದು, ಇವುಗಳನ್ನು ಪುನಶ್ಚೇತನಗೊಳಿಸಿ ಎಲ್ಲಾ ಕೆರೆಗಳಿಗೂ ನೀರು ಒದಗಿಸಿ ರೈತರಿಗೆ ಅನುಕೂಲ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಹಲಗೂರು

ರೈತರ ಅನುಕೂಲಕ್ಕಾಗಿ ಏತ ನೀರಾವರಿಯನ್ನು ಪುನಶ್ಚೇತನಗೊಳಿಸಿ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭರವಸೆ ನೀಡಿದರು.

ಬ್ಯಾಡರಹಳ್ಳಿ ಬಳಿ ಇರುವ ಕೆರೆ ಹೂಳೆತ್ತುವ ಹಾಗೂ ಒತ್ತುವರಿ ಜಾಗ ತೆರವುಗೊಳಿಸುವ ಮತ್ತು ಏರಿಗಳನ್ನು ಸದೃಢಗೊಳಿಸಿ ತೂಬುಗಳನ್ನು ಹೊಸದಾಗಿ ನಿರ್ಮಿಸುವ ಸುಮಾರು 60 ಲಕ್ಷ ರು. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಹಲಗೂರು ಭಾಗದಲ್ಲಿ ತೊರೆಕಾಡನಹಳ್ಳಿಯಲ್ಲಿ ಬಳಿ ಶಿಂಷಾ ನದಿ ಪಾತ್ರದಲ್ಲಿ ಒಂದು ಬ್ಯಾರೇಜ್ ನಿರ್ಮಿಸಿ 26 ಕೆರೆಗಳಿಗೆ ಏತ ನೀರಾವರಿ ಸೇರಿದಂತೆ ಬ್ಯಾಡರಹಳ್ಳಿ ಮಡಳ್ಳಿ ಏತ ನೀರಾವರಿಗಳಲ್ಲಿ ಒಟ್ಟು ಮೂರೂ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿದ್ದು, ಇವುಗಳನ್ನು ಪುನಶ್ಚೇತನಗೊಳಿಸಿ ಎಲ್ಲಾ ಕೆರೆಗಳಿಗೂ ನೀರು ಒದಗಿಸಿ ರೈತರಿಗೆ ಅನುಕೂಲ ಮಾಡಲಾಗುವುದು ಎಂದರು.

ಸುಮಾರು 50 ವರ್ಷಗಳಿಂದ ಕೆರೆ ಬಳಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿರುವ ವಾಸಿಗಳು ಶಾಸಕರಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಸ್ಥಳದಲ್ಲೇ ಅರಣ್ಯ ಅಧಿಕಾರಿ ಜೊತೆ ದೂರವಾಣಿ ಮುಖಾಂತರ ಮಾತನಾಡಿದರು.ಕಾಡಂಚಿನ ಅಂಚಿನಲ್ಲಿ ವಾಸವಾಗಿರುವ ನಿವೇಶನ ವಿಚಾರದಲ್ಲಿ ಪ್ರಕ್ರಿಯೆ ನೆನೆಗುದ್ದಿಗೆ ಬಿದ್ದಿದ್ದು ಇದರ ಬಗ್ಗೆ ಜಂಟಿಯಾಗಿ ಸರ್ವೇ ನಡೆಸಿ ಈ ಪ್ರಕರಣ ಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಈ ಪ್ರಕರಣ ಇತ್ಯರ್ಥವಾದ ತಕ್ಷಣ ಈ ಭಾಗದ ವಾಸಿಗಳಿಗೆ ನಿವೇಶನಗಳನ್ನು ನೀಡಿ ನಂತರ ಕೆರೆಗೆ ನೀರು ತುಂಬಿಸುವುದಾಗಿ ತಿಳಿಸಿದರು.

ನಾನು ಸಭೆ, ಸಮಾರಂಭಗಳಿಗೆ ಬಂದಾಗ ಹಾರ ತುರಾಯಿ ಬದಲು ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೂವಿನ ಹಾರ ಮತ್ತು ಪಟಾಕಿ ಸಿಡಿಸುವ ಬದಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪುಸ್ತಕ, ಪೆನ್ನು, ನೀರಿನ ಬಾಟಲ್ ಮತ್ತು ಇತರ ಸಾಮಗ್ರಿಗಳನ್ನು ನೀಡುವಂತೆ ತಿಳಿಸಿದ್ದೇನೆ. ಶಾಸಕರಾದ ಮೇಲೆ ನನ್ನಿಂದಲೇ ಈ ಪದ್ಧತಿ ಬದಲಾಗಬೇಕು ಎಂಬ ಉದ್ದೇಶ ಹೊಂದಿದ್ದೇನೆ ಎಂದರು.

ಈ ವೇಳೆ ಬ್ಯಾಡರಹಳ್ಲಿ ಗ್ರಾಪಂ ಅಧ್ಯಕ್ಷ ಅಲುಮೇಲಮ್ಮ ಚಿಕ್ಕರಾಜು, ಉಪಾಧ್ಯಕ್ಷ ದಾಸಬೋಯಿ, ಸದಸ್ಯರಾದ ಪ್ರವೀಣ್, ಮುಖಂಡರಾದ ಗೋಪಾಲ್ ಚಂದ್ರ ಕುಮಾರ್, ಕೆಂಪಯ್ಯನ ದೊಡ್ಡಿ ಮೋಹನ್ ಕುಮಾರ್, ಕಾರ್ಯ ನಿರ್ವಾಹಕ ಎಂಜಿನಿಯರ್ ಶಂಕರ್, ಅಜರುದ್ದೀನ್, ಸಹಾಯಕ ಇಂಜಿನಿಯರ್ ಕಿರಣ್ ಕುಮಾರ್ ಸೇರಿದಂತೆ ಹಲವರು ಇದ್ದರು.