ಸಾರಾಂಶ
ಸಾಗುವಳಿಗೆ ಕೊಟ್ಟಿದ್ದ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ತನ್ನ ಮಾಡಿಕೊಂಡು ಮೋಸವೆಸಗಿ ಮಹಿಳೆಗೆ ಮುಧೋಳ ಪ್ರಧಾನ ದಿವಾಣಿ ನ್ಯಾಯಾಲಯ 2 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಸಾಗುವಳಿಗೆ ಕೊಟ್ಟಿದ್ದ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ತನ್ನ ಮಾಡಿಕೊಂಡು ಮೋಸವೆಸಗಿ ಮಹಿಳೆಗೆ ಮುಧೋಳ ಪ್ರಧಾನ ದಿವಾಣಿ ನ್ಯಾಯಾಲಯ 2 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಜುನ್ನೂರ ಗ್ರಾಮದ ಶೇಖವ್ವ ಈರಪ್ಪ ಕೆಂಚನ್ನವರ ಶಿಕ್ಷೆಗೊಳಗಾದ ಅಪರಾಧಿ. ಜುನ್ನೂರ ಗ್ರಾಮದ ರಿ.ಸಂ ನಂ.69/4 ಜಮೀನಿನನ್ನು ನಾಗರತ್ನಾ ರಾಮಚಂದ್ರಪ್ಪ ಪತ್ತಾರ ಇವರು ಸಾಗುವಳಿ ಮಾಡಲು ಶೇಖವ್ವಳಿಗೆ ಕೊಟ್ಟಿದ್ದರು. ಆದರೆ ಪತಿ ಈರಪ್ಪನೊಂದಿಗೆ ಸೇರಿ ನಕಲಿ ಕಾಗದ ಪತ್ರ ಹಾಗೂ ಖೊಟ್ಟಿ ಖರೀದಿಪತ್ರ ಸೃಷ್ಟಿಸಿ ಜಮೀನು ತನ್ನದೇ ಎಂದು ಹಕ್ಕು ಸ್ಥಾಪಿಸಿದ್ದಳು. ಈ ಕುರಿತು ಮೂಲ ಮಾಲೀಕಳಾದ ನಾಗರತ್ನಾ ಲೋಕಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಿಎಸ್‌ಐ ಎಚ್. ಆರ್. ಪಾಟೀಲ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಲ್.ಎಸ್. ಹುಕ್ಕೇರಿ ಅವರು, ಆಪಾದಿತರಿಗೆ ಈಪಿಸಿ ಕಲಂ 419 ಅಡಿ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ₹3000 ದಂಡ ತಪ್ಪಿದಲ್ಲಿ 15 ದಿನಗಳ ಹೆಚ್ಚಿನ ಜೈಲು ವಾಸ, ಕಲಂ 420 ಅಡಿಯಲ್ಲಿ 2 ಸಾದಾ ಜೈಲುವಾಸ ₹5000 ದಂಡ ತಪ್ಪಿದಲ್ಲಿ 15 ದಿನಗಳ ಹೆಚ್ಚಿನ ಕಾರಾಗೃಹ ಶಿಕ್ಷೆ, ಕಲಂ 465 ಅಡಿಯಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸ ₹3000 ದಂಡ ತಪ್ಪಿದಲ್ಲಿ 15 ದಿನಗಳ ಹೆಚ್ಚಿನ ಕಾರಾಗೃಹ ಶಿಕ್ಷೆ ಸೋಮವಾರ ತೀರ್ಪು ನೀಡಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))