ಗಂಗಮುತ್ತಯ್ಯ ಮತ್ತು ಆತನ ಸಹಚರರು ವ್ಯಕ್ತಿಯೊಬ್ಬನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದನು. ಗಾಯಳು ಪತ್ನಿ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಾಮನಗರ:ಕೊಲೆಗೆ ಯತ್ನಿಸಿದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 21 ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.ಮಾಗಡಿ ತಾಲೂಕು ಮಾಡಬಾಳ್ ಹೋಬಳಿ ಅತ್ತಿಂಗೆರೆ ವಾಸಿ ಗಂಗಮುತ್ತಯ್ಯ ಅಲಿಯಾಸ್ ಗಂಗರಾಜು ಶಿಕ್ಷೆಗೆ ಗುರಿಯಾದ ಆರೋಪಿ.ಗಂಗಮುತ್ತಯ್ಯ ಮತ್ತು ಆತನ ಸಹಚರರು ವ್ಯಕ್ತಿಯೊಬ್ಬನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದನು. ಗಾಯಳು ಪತ್ನಿ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪಿಎಸ್ಸೈ ರವಿರವರು ಆರೋಪಿ ಗಂಗಮುತ್ತಯ್ಯ ವಿರುದ್ಧ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯನವರ ಅವರು ಆರೋಪಿ ಗಂಗಮುತ್ತಯ್ಯಗೆ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 21 ಸಾವಿರ ರು.ದಂಡ ವಿಧಿಸಿ ಆದೇಶಿಸಿದ್ದಾರೆ.ಸರ್ಕಾರಿ ವಿಶೇಷ ಅಭಿಯೋಕರಾದ ಕುಮಾರಿ ವಾಸವಿ ಅಂಗಡಿರವರು ವಾದ ಮಂಡಿಸಿದರು.-----------ವಿದ್ಯೂತ್ ಸ್ವರ್ಶಿಸಿ ಆನೆ ಸಾವು ಪ್ರಕರಣ - ಆರೋಪಿಗೆ 5 ಸಾವಿರ ರು.ದಂಡ ರಾಮನಗರ:ವಿದ್ಯುತ್ ಸ್ಪರ್ಶಿಸಿ ಆನೆ ಸಾವಿಗೆ ಕಾರಣವಾದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಮ ವನ್ಯ ಜೀವಿ ವಲಯ ವ್ಯಾಪ್ತಿಯಲ್ಲಿ ಬರುವ ಉಯ್ಯಂಬಳ್ಳಿ ಗ್ರಾಮದ ವಾಸಿ ಶಿವಲಿಂಗೇಗೌಡ ಶಿಕ್ಷೆಗೆ ಗುರಿಯಾದ ಆರೋಪಿ.ಶಿವಲಿಂಗೇಗೌಡ ಕೃಷಿ ಬೆಳೆಯನ್ನು ರಕ್ಷಿಸಿಸಿಕೊಳ್ಳಲು, ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು, ತಮ್ಮ ಜಮೀನಿನ ಸುತ್ತ ಜಂಕ್ ವೈರ್ ಗಳನ್ನು ಬಿಟ್ಟು ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದನು. 2019ರ ಏಪ್ರಿಲ್ 9ರಂದು ಒಂದು ಆನೆ ಮರಿಯು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿತ್ತು.
ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು, ಆರೋಪಿಯ ವಿರುದ್ಧ ರಾಮನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಎಚ್ ಅಣ್ಣಯ್ಯನವರ ಅವರು, ನ್ಯಾಯಾಲಯದ ಪ್ರಕರಣವನ್ನು ವಿಚಾರಣೆ ನಡೆಸಿ, ಆರೋಪಿ ಶಿವಲಿಂಗೇಗೌಡ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 5 ಸಾವಿರ ರು. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ವಿಶೇಷ ಅಭಿಯೋಕರಾದ ಕುಮಾರಿ ವಾಸವಿ ಅಂಗಡಿ ರವರು ವಾದ ಮಂಡಿಸಿದ್ದರು.