ಪ್ರಜಾಪ್ರಭುತ್ವ ಹತ್ತಿಕುವ ಪ್ರಯತ್ನಗಳ ವಿಫಲಗೊಳಿಸಿ: ಎಸಿ ಹುಲ್ಲುಮನಿ ತಿಮ್ಮಣ್ಣ

| Published : Feb 03 2024, 01:52 AM IST

ಪ್ರಜಾಪ್ರಭುತ್ವ ಹತ್ತಿಕುವ ಪ್ರಯತ್ನಗಳ ವಿಫಲಗೊಳಿಸಿ: ಎಸಿ ಹುಲ್ಲುಮನಿ ತಿಮ್ಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಪಂಚದಲ್ಲಿ ಭಾರತ ಬಹಳ ವಿಶಿಷ್ಟತೆಯಿಂದ ಕೂಡಿದೆ. ಭಾಷೆ, ಉಡುಗೆ ತೊಡುಗೆಗಳು, ಆಹಾರ ಪದ್ಧತಿಗಳು ಎಲ್ಲವೂ ವಿಭಿನ್ನವಾಗಿದ್ದರೂ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಏಕೈಕ ರಾಷ್ಟ್ರ ನಮ್ಮದು, ಅದಕ್ಕಾಗಿ ಇಡೀ ವಿಶ್ವದಲ್ಲೇ ನಮ್ಮ ದೇಶವನ್ನು ಕೊಂಡಾಡುತ್ತಾರೆ, ಅದಕ್ಕೆ ಕಾರಣ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ನಾವು ತರ್ಕಬದ್ಧ ಚಿಂತನೆ ಮೂಲಕ ನಮ್ಮ ಹಕ್ಕುಗಳ ಪಡೆಯಬೇಕು, ಅಂತಹ ಹಕ್ಕುಗಳ ನಮಗೆ ಸಂವಿಧಾನ ನೀಡಿದೆ ಎಂದು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಹೇಳಿದರು.

ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಅಭಿಯಾನದ ಸ್ತಬ್ಧಚಿತ್ರಕ್ಕೆ ಶುಕ್ರವಾರ ಪಟ್ಟಣದ ಕೋರ್ಟ್ ಮುಂಭಾಗ ಚಾಲನೆ ನೀಡಿ ಮಾತನಾಡಿ ಪ್ರಜಾಪ್ರಭುತ್ವ ಹತ್ತಿಕುವ ಪ್ರಯತ್ನಗಳ ನಾವು ವಿಫಲಗೊಳಿಸಬೇಕು. ಸಂವಿಧಾನ ರಕ್ಷಿಸಿದರೆ, ಸಂವಿಧಾನ ನಮ್ಮ ರಕ್ಷಿಸುತ್ತದೆ, ಸಂವಿಧಾನವೇ ನಮ್ಮ ಪವಿತ್ರ ಧರ್ಮ, ಇದನ್ನು ನಾವು ರಕ್ಷಿಸುವ ಕರ್ತವ್ಯ ನಮ್ಮದಾಗಬೇಕು. ಪ್ರಪಂಚದಲ್ಲಿ ಭಾರತ ಬಹಳ ವಿಶಿಷ್ಟತೆಯಿಂದ ಕೂಡಿದೆ. ಭಾಷೆ, ಉಡುಗೆ ತೊಡುಗೆಗಳು, ಆಹಾರ ಪದ್ಧತಿಗಳು ಎಲ್ಲವೂ ವಿಭಿನ್ನವಾಗಿದ್ದರೂ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಏಕೈಕ ರಾಷ್ಟ್ರ ನಮ್ಮದು, ಅದಕ್ಕಾಗಿ ಇಡೀ ವಿಶ್ವದಲ್ಲೇ ನಮ್ಮ ದೇಶವನ್ನು ಕೊಂಡಾಡುತ್ತಾರೆ, ಅದಕ್ಕೆ ಕಾರಣ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ ಎಂದು ತಿಳಿಸಿದರು.

ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಭಾನ್ವಿತ ಆದರ್ಶ ವ್ಯಕ್ತಿತ್ವ ಹೊಂದಿದವರು. ವಿಶ್ವದಲ್ಲಿ ಯಾವುದೇ ಪ್ರಭುತ್ವವಿರಲಿ ಆದರೆ ಆ ದೇಶದಲ್ಲಿ ಕಾನೂನು ಸಂಹಿತೆ ಇರಬೇಕು ಆಗ ಮಾತ್ರ ಆ ದೇಶದ ಜನರಿಗೆ ಸಿಗಬೇಕಾದ ಎಲ್ಲಾ ಹಕ್ಕುಗಳು ತಾನಾಗಿಯೇ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ ಮಾತನಾಡಿ, ಕಳೆದ ಎರಡು ದಿನಗಳ ಹಿಂದ ಜಾಗೃತಿಜಾಥ ಮುಕ್ತೇನಹಳ್ಳಿ ಮುಖಾಂತರ ನಮ್ಮ ತಾಲೂಕಿಗೆ ಆಗಮಿಸಿದೆ, ಇನ್ನೂ ಏಳು ದಿನಗಳ ಕಾಲ ಅವಳಿ ತಾಲೂಕಿನಾಧ್ಯಂತ ಸಂಚರಿಸಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದರು.

ಬಿಇಒ ನಂಜರಾಜ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಆರ್.ರುದ್ರಪ್ಪ, ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಮೃತ್ಯುಂಜಯ ಸ್ವಾಮಿ, ಬಿ.ಆರ್.ಸಿ.ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಎಚ್.ಎ.ಉಮಾಪತಿ, ಕರವೇ ಶ್ರೀನಿವಾಸ್,ಮನೋಜ್, ಮಂಜು, ದಲಿತ ಮುಖಂಡರಾದ ತಮ್ಮಣ್ಣ, ಮಂಜುನಾಥ್, ಹನುಮಂತಪ್ಪ ಸೊರಟೂರು, ಪ್ರಜಾ ಪ್ರಗತಿ ವೇದಿಕೆಯ ಹನುಮಂತಪ್ಪ ಇತರರಿದ್ದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು.