ಗದಗದಲ್ಲಿ ಗಮನ ಸೆಳೆದ ಪಥ ಸಂಚಲನ, 9 ಇಲಾಖೆಯಿಂದ ಸ್ತಬ್ಧಚಿತ್ರ

| Published : Nov 02 2025, 03:15 AM IST

ಗದಗದಲ್ಲಿ ಗಮನ ಸೆಳೆದ ಪಥ ಸಂಚಲನ, 9 ಇಲಾಖೆಯಿಂದ ಸ್ತಬ್ಧಚಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ಸಾರ್ವಜನಿಕ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನೆರವೇರಿಸಿದರು.

ಗದಗ: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು.

ಸಾರ್ವಜನಿಕ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನೆರವೇರಿಸಿ, ವಿವಿಧ ದಳಗಳ ವೀಕ್ಷಣೆ ಮಾಡಿದರು.

ಆಕರ್ಷಕ ಪಥ ಸಂಚಲನದ ನೇತೃತ್ವವನ್ನು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಾಯಕತ್ವವನ್ನು ಲಷ್ಟಪ್ಪ ತಳವಾರ ವಹಿಸಿದ್ದರು. ನಾಗರಿಕ ಪೊಲೀಸ್‌ ಪಡೆಯ ನೇತೃತ್ವವನ್ನು ಸುಭಾಷ ಪಾಟೀಲ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಗ್ನಿಶಾಮಕ ಪಡೆಯ ನೇತೃತ್ವನ್ನು ಮಂಜುನಾಥ ಮೇಲ್ಮನಿ, ಅಬಕಾರಿ ಇಲಾಖೆಯ ಆಶಾರಾಣಿ, ಅರಣ್ಯ ಪಡೆಯ ಸಚಿನ್ ಬಿಸನಹಳ್ಳಿ, ಎನ್‌ಸಿಸಿ ಸೀನಿಯರ್ ಬಾಯ್ಸ್ ದಳದ ನೇತೃತ್ವವನ್ನು ಆಕಾಶ್ ಎಸ್.ಕೆ., ಸೇವಾ ದಳದ ನೇತೃತ್ವವನ್ನು ಎಸ್.ಎಂ. ಕೃಷ್ಣಾ ಪ್ರೌಢಶಾಲೆಯ ಆಯೇಶಾ, ವಿಡಿಎಸ್ ಗರ್ಲ್ಸ್‌ ಹೈಸ್ಕೂಲ್ ಶಾಲೆಯ ನೇತೃತ್ವವನ್ನು ಆಕಾಂಕ್ಷಾ, ಸೇಂಟ್ ಜಾನ್ ಪ್ರಾಥಮಿಕ ಶಾಲೆಯ ಪವನ ವಡವಳ್ಳಿ, ಮಾಜಿ ಸೈನಿಕ ತಂಡದ ಬಸವರಾಜ ಮುಂಡರಗಿ, ಎಸ್.ಎಂ. ಕೃಷ್ಣ ಪ್ರಾಥಮಿಕ ಶಾಲೆಯ ಮುಸ್ಕಾನ್ ಬಾನು, ಕೆವಿಎಸ್‌ಆರ್ ಪ್ರೌಢಶಾಲೆಯ ನೇತೃತ್ವವನ್ನು ಸ್ಪಂದನಾ, ಸೇಂಟ್ ಜಾನ್ ಬಾಲಕರ ಪ್ರೌಢಶಾಲೆಯ ಪವನ ಸಿಂಗ್‌ ದೊಡ್ಡಮನಿ, ಎನ್‌ಸಿಸಿ ಸೀನಿಯರ್ ಗರ್ಲ್ಸ್‌ ತಂಡದ ನೇತೃತ್ವವನ್ನು ಸ್ಫೂರ್ತಿ ಅವರು ವಹಿಸಿದ್ದರು.

ಪಥ ಸಂಚಲನದಲ್ಲಿ ಇಲಾಖಾವಾರು ನಗರದ ಅಗ್ನಿಶಾಮಕ ಘಟಕ, ಅಬಕಾರಿ ತಂಡ, ಗೃಹರಕ್ಷಕ ದಳ, ಶಾಲಾವಾರು ಎಸ್.ಎಂ. ಕೃಷ್ಣ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟಗೇರಿಯ ಸೇಂಟ್ ಜಾನ್ ಬಾಲಕರ ಪ್ರೌಢಶಾಲೆ, ವಿಡಿಎಸ್‌ಟಿ ಬಾಲಕಿಯರ ಪ್ರೌಢಶಾಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯಿತು.

ಸ್ತಬ್ಧಚಿತ್ರ ಪ್ರದರ್ಶನದಲ್ಲಿ 9 ಇಲಾಖೆಯ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದು, ಆ ಪೈಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ, ಕೆಎಸ್‌ಆರ್‌ಟಿಸಿ ದ್ವಿತೀಯ ಹಾಗೂ ಶಿಕ್ಷಣ ಇಲಾಖೆ ತೃತೀಯ ಸ್ಥಾನ ಪಡೆಯಿತು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.