ಸಾರಾಂಶ
ಮಕ್ಕಳಿಗೆ ವಿವಿಧ ಬಗೆಯ ಮನೋಲ್ಲಾಸ ಆಟಗಳನ್ನು ಪರಿಚಯಿಸಿದರು. ಮಕ್ಕಳೊಂದಿಗೆ ಮಕ್ಕಳಾಗಿ ನಲಿದರು, ಕುಣಿದು ಕುಪ್ಪಳಿಸಿದರು. ಲಿಟ್ ಫೆಸ್ಟ್‌ನ ಪ್ರಧಾನ ಆಕರ್ಷಣೆಯಲ್ಲಿ ಹರಟೆ ಕಟ್ಟೆಯೂ ಒಂದು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಸಾಹಿತ್ಯ ಉತ್ಸವದ ೭ನೇ ಆವೃತ್ತಿ ಸಂದರ್ಭದಲ್ಲಿ ಶನಿವಾರ ಆಯೋಜಿಸಿದ ಚಿಲಿಪಿಲಿ- ಮಕ್ಕಳ ಚಟುವಟಿಕೆ ಕಾರ್ಯಕ್ರಮದಲ್ಲಿ ಕೆನರಾ ಕನ್ನಡ ಮಾಧ್ಯಮ ಶಾಲೆಯ ೮೦ ಮಂದಿ ಮಕ್ಕಳು ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಜೆಸಿಸಿ ಕಾರ್ಕಳ ಶಾಲೆಯ ಶಿಕ್ಷಕಿ ವಂದನಾ ರೈ ನಡೆಸಿಕೊಟ್ಟರು. ಮಕ್ಕಳಿಗೆ ಜೀವನದ ನೈತಿಕ ಮೌಲ್ಯಗಳನ್ನು ಕಲಿಸುವ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಹಿರಿಯರಿಗೆ ಗೌರವ ನೀಡುವುದು, ಮನೆಯಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಹೇಗೆ ಎಂಬ ವಿಷಯಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಮಾತ್ರವಲ್ಲದೆ ಮಕ್ಕಳಿಗೆ ಮೊಬೈಲ್ ಫೋನ್ ಅನ್ನು ಕೇವಲ ಅಗತ್ಯವಿದ್ದಾಗ ಮಾತ್ರ ಬಳಸಲು ಹಾಗೂ ಉತ್ತಮ ಮಕ್ಕಳಾಗಲು ಪ್ರತಿಜ್ಞೆ ಮಾಡುವಂತೆ ಪ್ರೇರೇಪಿಸಿದರು. ಮಕ್ಕಳಿಗೆ ವಿವಿಧ ಬಗೆಯ ಮನೋಲ್ಲಾಸ ಆಟಗಳನ್ನು ಪರಿಚಯಿಸಿದರು. ಮಕ್ಕಳೊಂದಿಗೆ ಮಕ್ಕಳಾಗಿ ನಲಿದರು, ಕುಣಿದು ಕುಪ್ಪಳಿಸಿದರು. ಲಿಟ್ ಫೆಸ್ಟ್‌ನ ಪ್ರಧಾನ ಆಕರ್ಷಣೆಯಲ್ಲಿ ಹರಟೆ ಕಟ್ಟೆಯೂ ಒಂದು.