ಅತುಲ್ಯ ಸೀನಿಯರ್ ಕೇರ್‌ ವೈಟ್‌ಫೀಲ್ಡ್‌ನಲ್ಲಿ ಆರಂಭ

| Published : Feb 04 2024, 01:36 AM IST

ಸಾರಾಂಶ

ಹಿರಿಯರ ಕಾಳಜಿ ನೋಡಿಕೊಳ್ಳುವ ‘ಅತುಲ್ಯ ಸೀನಿಯರ್ ಕೇರ್’ ಹೊಸದಾಗಿ ವೈಟ್‌ಫೀಲ್ಡ್‌ನ ಹೃದಯಭಾಗದಲ್ಲಿ ತನ್ನ ಎರಡನೇ ಶಾಖೆಯನ್ನು ತೆರೆದಿದ್ದು, ಭಾರತೀಯ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಿರಿಯರ ಕಾಳಜಿ ನೋಡಿಕೊಳ್ಳುವ ‘ಅತುಲ್ಯ ಸೀನಿಯರ್ ಕೇರ್’ ಹೊಸದಾಗಿ ವೈಟ್‌ಫೀಲ್ಡ್‌ನ ಹೃದಯಭಾಗದಲ್ಲಿ ತನ್ನ ಎರಡನೇ ಶಾಖೆಯನ್ನು ತೆರೆದಿದೆ.

ಭಾರತೀಯ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯ ಸಮುದಾಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯ ವಿಶಿಷ್ಟ, ವಿಭಿನ್ನವಾದುದು ಎಂದು ಬಣ್ಣಿಸಿದರು.

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಹಿರಿಯರ ಯೋಗಕ್ಷೇಮವನ್ನು ನೋಡಿಕೊಳ್ಳುವ ಕಾರ್ಯ ಸಹಕಾರಿ ಪ್ರಯತ್ನದ ಪ್ರತೀಕವಾಗಿದೆ ಎಂದು ಹೇಳಿದರು.

ಅತುಲ್ಯ ಸೀನಿಯರ್ ಕೇರ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ। ಕಾರ್ತಿಕ್ ಆರ್.ನಾರಾಯಣನ್‌, ಬೆಂಗಳೂರಿನಲ್ಲಿ ನಾವು ಎರಡನೇ ಕೇಂದ್ರ ತೆರೆಯುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದೇವೆ. ನಮ್ಮ ಸಮುದಾಯದ ಹಿರಿಯರ ಬಗ್ಗೆ ಕಾಳಜಿ ವಹಿಸಬೇಕಾದುದು ಎಲ್ಲರ ಜವಾಬ್ದಾರಿ ಎಂದರು.

ಅತುಲ್ಯ ಸೀನಿಯರ್ ಕೇರ್‌ನ ಸಂಸ್ಥಾಪಕ ಮತ್ತು ಸಿಇಒ ಜಿ.ಶ್ರೀನಿವಾಸನ್ ಕೃತಜ್ಞತೆಗಳನ್ನು ವ್ಯಕ್ತಪಡಿಸಿ, ಅತುಲ್ಯ ತಂಡವು ಸಾಮಾಜಿಕ ಜವಾಬ್ದಾರಿಯಲ್ಲಿ ತನ್ನ ಅತ್ಯುತ್ತಮ ಕೊಡುಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸಾಮಾಜಿಕ ಬದ್ಧತೆ ನಿರಂತರವಾಗಿರಲಿದೆ ಎಂದು ತಿಳಿಸಿದರು.