ಚಿಕ್ಕತಿರುಪತಿಯಲ್ಲಿ ವರಪ್ರದಾಯಕ ಶನೈಶ್ಚರಸ್ವಾಮಿ ಜಯಂತಿ

| Published : Jun 07 2024, 12:32 AM IST

ಚಿಕ್ಕತಿರುಪತಿಯಲ್ಲಿ ವರಪ್ರದಾಯಕ ಶನೈಶ್ಚರಸ್ವಾಮಿ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಶನೈಶ್ಚರಸ್ವಾಮಿ ಮತ್ತು ಓಂಕಾರೇಶ್ವರ ಸ್ವಾಮಿ ದೇವಸ್ಥಾನದ ಮಹಾದ್ವಾರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಚಿಕ್ಕತಿರುಪತಿಯ ದೊಡ್ಡಮಠದ ಆವರಣದಲ್ಲಿರುವ ಓಂಕಾರೇಶ್ವರ ಸ್ವಾಮಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶನೈಶ್ಚರಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ ನಂಜೇಗೌಡ ಅವರು ಭಾಗವಹಿಸಿ ಪೂಜೆ ಸಲ್ಲಿಸಿದರು.

ಶ್ರೀ ವರಪ್ರದಾಯಕ ಶನೈಶ್ಚರ ಸ್ವಾಮಿಯ ಜಯಂತಿ ಮತ್ತು ಬಾದಾಮಿ ಅಮಾವಾಸ್ಯೆಯ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ನಡೆದ ಪುಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.

ದೇವಾಲಯದಲ್ಲಿ ಬೆಳಗ್ಗೆ ೭ರಿಂದ ಆರಂಭವಾದ ಪೂಜಾ ಕಾರ್ಯಕ್ರಮಗಳು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನವಗ್ರಹ ಪೂಜೆ, ಕಳಶಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಶನಿಪ್ರಹಸ್ರಹವನ, ಆಯುಷ್ಯಹೋಮ, ಜಯಾಧಿಹೋಮ-ಪೂರ್ಣಹುತಿ, ಪಂಚಾಮೃತ ಷ್ಯಡಂಗ, ಪೂರ್ವಕ ರುದ್ರ ಅಭಿಷೇಕ, ಕುಂಭಾಬಿಷೇಕ, ಅಲಂಕಾರ, ಮಂತ್ರಪುಷ್ಪ, ಮಹಾನೈವೇದ್ಯ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು.

ಶ್ರೀ ಶನೈಶ್ಚರಸ್ವಾಮಿ ಮತ್ತು ಓಂಕಾರೇಶ್ವರ ಸ್ವಾಮಿ ದೇವಸ್ಥಾನದ ಮಹಾದ್ವಾರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉದ್ಘಾಟಿಸಿದರು. ಈ ಶನೈಶ್ಚರಸ್ವಾಮಿ ಜಯಂತಿ ಕಾರ್ಯಕ್ರಮವನ್ನು ದಿ. ಕೆ.ಜಿ. ರಾಜಗೋಪಾಲರೆಡ್ಡಿ ರವರ ಧರ್ಮಪತ್ನಿ ಸುನಂದಮ್ಮ ಮತ್ತು ಮಕ್ಕಳಾದ ಮಹೇಶ್, ವಿನೋದ್, ರವಿರೆಡ್ಡಿ ರವರು ನೆರವೇರಿಸಿದರು.

ಶನೈಶ್ಚರಸ್ವಾಮಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಅಲಂಕಾರವು ಅರ್ಚಕರಾದ ವೆಂಕಟ್ ನಾರಾಯಣ್, ಕೌಶಿಕ್, ಹಾಗೂ ಶ್ರೀಹರಿ ಕೌಶಿಕ್ ರವರ ನೇತೃತ್ವದಲ್ಲಿ ನಡೆಯಿತು. ಸಹ ಅರ್ಚಕರಾದ ವಿಶ್ವನಾಥ್ ಶಾಸ್ತ್ರಿ, ಪುಟ್ಟು ಶರ್ಮ, ನಾಗೇಂದ್ರ ಇದ್ದರು.

ಚಿಕ್ಕತಿರುಪತಿ ಗ್ರಾಪಂ ಅಧ್ಯಕ್ಷ ರಾಮಪ್ರಸಾದ್, ಶಿಕ್ಷಕ ನಾಗೇಶ್, ಕೋರಮಂಗಲ ಚಂದ್ರು, ಎಟ್ಟಕೋಡಿ ಶಶಿಧರ್, ಚಿಕ್ಕತಿರುಪತಿ ಗ್ರಾಪಂ ಪಿಡಿಒ ಹರೀಂದ್ರ ಗೋಪಾಲ್, ಗ್ರಾಪಂ ಸದಸ್ಯರಾದ ಜಿ.ವಿ.ಮಂಜುನಾಥ್, ರಾಘವೇಂದ್ರ ಪ್ರಸಾದ್, ಎ.ಎಂ.ನಾರಾಯಣಪ್ಪ, ಗೊಲ್ಲಹಳ್ಳಿ ವೆಂಕಟೇಶ್, ದೇವಾಲಯ ಸಮಿತಿಯ ನ್ಯಾತಪ್ಪ, ಧರಣಿಬಾಬು, ಪ್ರವೀಣ್, ಮುನಿವೇಲು, ಶ್ರೀನಿಧಿ, ಮುಖಂಡರಾದ ಎಟ್ಟಕೋಡಿ ವೀರಭದ್ರಪ್ಪ, ಅಲಂಬಾಡಿ ಗೋಪಾಲ್, ಉಪೇಂದ್ರ ಸೇರಿ ಮತ್ತಿತರರು ಉಪಸ್ಥಿತರಿದ್ದರು.