ನಮ್ಮ ಜನ ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಕಲಿಯಬೇಕು. ಬೇರೆ ರಾಜ್ಯಗಳಿಗೆ ಹೋದರೆ ಅವರು ತಮ್ಮ ಭಾಷೆಯಲ್ಲಿಯೇ ಉತ್ತರಿಸುತ್ತಾರೆ. ನಮ್ಮ ಕನ್ನಡ ಜನರೂ ಕನ್ನಡದಲ್ಲಿಯೇ ಉತ್ತರಿಸಿ ಕನ್ನಡ ಕಲಿಸಬೇಕು.
ದೇವನಹಳ್ಳಿ: ನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೇ ಪ್ರಾಮಾಣಿಕವಾಗಿ ಮಾಡುತ್ತಿರುವವರು ಆಟೋ ಚಾಲಕರು ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ತಿಳಿಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಜೈ ಭುವನೇಶ್ವರಿ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಟೋ ಚಾಲಕರು ಕಷ್ಟಪಟ್ಟು ದುಡಿಯುತ್ತಾರೆ. ಆಟೋಗಳಲ್ಲಿ ಕನ್ನಡವನ್ನು ನೆನಪಿಸುವ ಚಿತ್ರಗಳನ್ನು ಹಾಕಿ ಕನ್ನಡತನ ಉಳಿಸಿ ಬೆಳೆಸುತ್ತಿದ್ದಾರೆ ಎಂದರು.ಸಂಘದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಜನ ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಕಲಿಯಬೇಕು. ಬೇರೆ ರಾಜ್ಯಗಳಿಗೆ ಹೋದರೆ ಅವರು ತಮ್ಮ ಭಾಷೆಯಲ್ಲಿಯೇ ಉತ್ತರಿಸುತ್ತಾರೆ. ನಮ್ಮ ಕನ್ನಡ ಜನರೂ ಕನ್ನಡದಲ್ಲಿಯೇ ಉತ್ತರಿಸಿ ಕನ್ನಡ ಕಲಿಸಬೇಕು ಎಂದರು. ಈ ವೇಳೆ ಬಯಪ್ಪ ಅಧ್ಯಕ್ಷ ಶಾಂತಕುಮಾರ್, ನಿರ್ದೇಶಕರಾದ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ಪುರಸಭೆ ಅಧ್ಯಕ್ಷ ಡಿ.ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ, ಡೈರಿ ನಾಗೇಶ್, ಕೆ.ಆರ್.ನಾಗೇಶ್, ಭುವನೇಶ್ವರಿ ಆಟೋಚಾಲಕರು ಹಾಗೂ ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ದೇವರಾಜು, ಉಪಾಧ್ಯಕ್ಷ ಎಲ್. ನಾಗೇಂದ್ರರಾವ್ ಶಿವಶಂಕರಪ್ಪ, ಮುನಿಯಲ್ಲಪ್ಪ, ಪ್ರ.ಕಾರ್ಯದರ್ಶಿ ಮುನಿಕೃಷ್ಣ, ಸಹಕಾರ್ಯದರ್ಶಿ ಕೆ. ವೇಣು, ಖಜಾಂಚಿ ಸೋಮಶೇಖರ್, ಸಂ.ಕಾರ್ಯದರ್ಶಿ ಎನ್. ಮುರಳಿ, ಸದಸ್ಯರಾದ ಮುನಿಯಪ್ಪ, ಗಂಗಾಧರ್, ವಸಂತ್, ಮಂಜುನಾಥ್, ನಾರಾಯಣಸ್ವಾಮಿ, ನರಸಿಂಹಮೂರ್ತಿ ಇದ್ದರು.