ಭಾರತ್‌ ಅಕ್ಕಿ ಸೌಲಭ್ಯ ಪಡೆದುಕೊಳ್ಳಿ: ಜ್ಞಾನೇಂದ್ರ

| Published : Mar 12 2024, 02:03 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕೇಂದ್ರ ಸರ್ಕಾರದ ಭಾರತ್ ಅಕ್ಕಿ ಯೋಜನೆಯಲ್ಲಿ ಕೆಜಿಗೆ ₹29 ನಂತೆ ಎಲ್ಲರಿಗೂ ಲಭ್ಯವಾಗುವಂತೆ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಶಾಶ್ವತವಾಗಿ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಭಾರತ್ ಅಕ್ಕಿ ಯೋಜನೆಯಲ್ಲಿ ಕೆಜಿಗೆ ₹29 ರಂತೆ ₹290 ರೂಗಳಿಗೆ 10 ಕೆಜಿ ಅಕ್ಕಿಯನ್ನು ಇಂದಿನಿಂದ ವಿತರಿಸಲಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕೇಂದ್ರ ಸರ್ಕಾರದ ಭಾರತ್ ಅಕ್ಕಿ ಯೋಜನೆಯಲ್ಲಿ ಕೆಜಿಗೆ ₹29 ನಂತೆ ಎಲ್ಲರಿಗೂ ಲಭ್ಯವಾಗುವಂತೆ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ಭಾರತ್ ಅಕ್ಕಿ ಯೋಜನೆಯಲ್ಲಿ ಮೊದಲ ಕಂತಿನಲ್ಲಿ ತಾಲೂಕಿಗೆ ಬಂದಿದ್ದ 10 ಕೆಜಿ ತೂಕದ 2000 ಬ್ಯಾಗ್ ಅಕ್ಕಿ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಈಗಾಗಲೇ ಶಾಶ್ವತವಾಗಿ 5 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಭಾರತ್ ಅಕ್ಕಿ ಯೋಜನೆಯಲ್ಲಿ ಕೆಜಿಗೆ ₹29 ರಂತೆ ₹290 ರೂಗಳಿಗೆ 10 ಕೆಜಿ ಅಕ್ಕಿಯನ್ನು ಇಂದಿನಿಂದ ವಿತರಿಸಲಾಗುತ್ತಿದೆ. ಈ ದಿನ ತಾಲೂಕಿಗೆ 2000 ಬ್ಯಾಗ್ ಅಕ್ಕಿ ಬಂದಿದ್ದು ಕೇಂದ್ರ ಸರ್ಕಾರದ ಈ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬಹುದಾಗಿದೆ ಎಂದರು.ಅಕ್ಕಿ ಖರೀದಿಸಲು ತಾಲೂಕು ಕಚೇರಿ ಎದುರು ಬೆಳ್ಳಂಬೆಳಗ್ಗೆಯಿಂದಲೇ ಉದ್ದದ ಸಾಲು ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ಸಂದೇಶ್ ಜವಳಿ, ಬಿಜೆಪಿ ಮುಖಂಡರಾದ ಟಿ.ಎನ್. ಅನಿಲ್ ಹಾಗೂ ಸಂತೋಷ್ ದೇವಾಡಿಗ ಇದ್ದರು.

- - - -11ಟಿಟಿಎಚ್ 01:

ತೀರ್ಥಹಳ್ಳಿಯಲ್ಲಿ ಸೋಮವಾರ ಶಾಸಕ ಆರಗ ಜ್ಞಾನೇಂದ್ರ ಭಾರತ್ ಅಕ್ಕಿ ವಿತರಣೆಗೆ ಚಾಲನೆ ನೀಡಿದರು. ಪಪಂ ಸದಸ್ಯ ಸಂದೇಶ್ ಜವಳಿ, ಮುಖಂಡರಾದ ಟಿ.ಎನ್.ಅನಿಲ್, ಸಂತೋಷ್ ದೇವಾಡಿಗ ಇದ್ದರು.