ಪ್ಲಾಸ್ಟಿಕ್ ಚೀಲ ತ್ಯಜಿಸಿ, ಕಾಗದದ ಚೀಲ ಬಳಸಿ

| Published : Jul 17 2024, 12:56 AM IST

ಸಾರಾಂಶ

ಮಕ್ಕಳು ಮತ್ತು ಹದಿಹರೆಯದವರನ್ನು ಪ್ರೇರೇಪಿಸಲು ಪೇಪರ್ ಬ್ಯಾಗ್ ದಿನಾಚರಣೆ ಉದ್ದೇವಾಗಿದೆ

ಗದಗ: ಪ್ಲಾಸ್ಟಿಕ್ ಚೀಲ ತ್ಯಜಿಸಿ, ಕಾಗದದ ಚೀಲ ಬಳಸಿ ಪರಿಸರ ಉಳಿಸಬೇಕೆಂದು ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ನಾಗರತ್ನ ಮಾರನಬಸರಿ ಹೇಳಿದರು.

ಅವರು ನಗರದಲ್ಲಿ ಪೇಪರ್ ಬ್ಯಾಗ್ ದಿನದ ನಿಮಿತ್ತ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಜನತೆಗೆ ಪೇಪರ್ ಚೀಲ ಹಂಚಿ ಮಾತನಾಡಿ, ಜಾಗೃತಿ ಅಭಿಯಾನ, ಯೋಜನೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪರಿಸರದ ಮೇಲೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮ ಕಡಿಮೆ ಮಾಡಿ ಪ್ರಯೋಜನಕಾರಿ ಪರಿಣಾಮ ಬೀರುವ ಕಾರ್ಯಗಳನ್ನು ಮಾಡಲು ಮಕ್ಕಳು ಮತ್ತು ಹದಿಹರೆಯದವರನ್ನು ಪ್ರೇರೇಪಿಸಲು ಪೇಪರ್ ಬ್ಯಾಗ್ ದಿನಾಚರಣೆ ಉದ್ದೇವಾಗಿದೆ ಎಂದರು.

ಡಾ.ಹನುಮಂತಗೌಡ ಕಲ್ಮನಿ ಮಾತನಾಡಿ, ಅತಿಯಾದ ಪ್ಲಾಸ್ಟಿಕ್ ಚೀಲದ ಹಾಗೂ ಪ್ಲಾಸ್ಟಿಕ್ ಉತ್ಪನ್ನ ಉಪೆಯೋಗಿಸುವುದರಿಂದ ಪರಿಸರಕ್ಕೆ ತೀವ್ರವಾದ ಹಾನಿಯಾಗುತ್ತಿದೆ. ವಿಶ್ವಾದ್ಯಂತ ಪ್ಲಾಸ್ಟಿಕ್ ದುರಂತವು ಇತ್ತೀಚೆಗೆ ಹೆಚ್ಚಿನ ಗಮನ ಪಡೆದುಕೊಂಡಿದೆ. ಪ್ರಾಣಿಗಳ ಜೀವನ, ಮಾನವ ಆರೋಗ್ಯ ಮತ್ತು ನಮ್ಮ ಪರಿಸರ ವ್ಯವಸ್ಥೆಗಳ ಮೇಲೆ ಪ್ಲಾಸ್ಟಿಕ್ ಮಾಲಿನ್ಯದಿಂದ ಗಂಭೀರವಾದ ದುಷ್ಪರಿಣಾಮ ಬೀರಿದೆ. ಪ್ಲಾಸ್ಟಿಕ್ ಚೀಲಗಳು ಮತ್ತು ಇತರೆ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಈ ತೊಂದರೆಗೆ ಪ್ರಮುಖ ಕಾರಣವಾಗಿದೆ. ಪೇಪರ್ ಬ್ಯಾಗ ಉಪಯೋಗಿಸಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ತ್ಯಜಿಸುವುದು ಪರಸರ ಸ್ನೇಹಿ ಕಾರ್ಯವಾಗಿದೆ ಎಂದರು.

ಈ ವೇಳೆ ಕ್ಲಬ್ ಕಾರ್ಯದರ್ಶಿ ವೀಣಾ ತಿರ್ಲಾಪುರ, ಪುಷ್ಪಾ ಭಂಡಾರಿ, ಪೂಜಾ ಭೂಮಾ, ಸುಮಾ ಪಾಟೀಲ್, ಶೀವಲೀಲಾ ಅಕ್ಕಿ, ಪುಷ್ಪಾ ಕೊರವಣ್ಣನವರ, ಕಮಲಾ ಜಂಬಗಿ ಹಾಗೂ ರೇಣುಕಾ ಅಮಾತ್ಯ ಇದ್ದರು.