ಆರೋಗ್ಯ ಮತ್ತು ಶೈಕ್ಷಣಿಕ ಸೇವೆಯಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪನೆ ಮಾಡಿರುವ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ (ಕಾಹೇರ್)ನ ಅಂಗಸಂಸ್ಥೆ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿಭಾಗವು ನವದೆಹಲಿಯ ಯಶೋ ಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ವರ್ಲ್ಡ್ ಫಿಸಿಯೋಥೆರಪಿ ಏಷ್ಯಾ ವೆಸ್ಟರ್ನ್ ಪೆಸಿಫಿಕ್ (ಎಡಬ್ಯ್ಲೂಪಿ) ಪ್ರಾದೇಶಿಕ ಸಮ್ಮೇಳನ– 2026’ರಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಆರೋಗ್ಯ ಮತ್ತು ಶೈಕ್ಷಣಿಕ ಸೇವೆಯಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪನೆ ಮಾಡಿರುವ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ (ಕಾಹೇರ್)ನ ಅಂಗಸಂಸ್ಥೆ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿಭಾಗವು ನವದೆಹಲಿಯ ಯಶೋ ಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ವರ್ಲ್ಡ್ ಫಿಸಿಯೋಥೆರಪಿ ಏಷ್ಯಾ ವೆಸ್ಟರ್ನ್ ಪೆಸಿಫಿಕ್ (ಎಡಬ್ಯ್ಲೂಪಿ) ಪ್ರಾದೇಶಿಕ ಸಮ್ಮೇಳನ– 2026’ರಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಜತೆಗೆ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ವಿನ್ನರ್, ಲಾರ್ಜೆಸ್ಟ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಪಿಟಿ ಯುನಿಟ್ ಪ್ರಶಸ್ತಿ ಹಾಗೂ ಕಾಲೇಜಿಗೆ ವಿನ್ನರ್, ಬೆಸ್ಟ್ ಕಾಲೇಜ್ ವಿತ್ ಪ್ಲೇಸಮೆಂಟ್ ಪ್ರಶಸ್ತಿಗಳನ್ನು ಸಂಸ್ಥೆ ಪಡೆದುಕೊಂಡಿದೆ.ವಿಭಾಗದ ಡಾ.ದೀಪಾ ಮೆಟಗುಡ್ಡ ಅವರಿಗೆ ಗೌರವಾನ್ವಿತ ‘ಫೆಲೋಶಿಪ್ ಪ್ರಶಸ್ತಿ’ ಮತ್ತು ಫಿಸಿಯೋಥೆರಪಿ ಶಿಕ್ಷಣ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಪ್ರಾಚಾರ್ಯ ಡಾ.ವರುಣ್ ನಾಯ್ಕ್ (ಪಿಟಿ) ಅವರಿಗೆ ‘ಸಿಗ್ನಿಫಿಕಂಟ್ ಕಾಂಟ್ರಿಬ್ಯೂಷನ್ ಪ್ರಶಸ್ತಿ’ ನೀಡಲಾಯಿತು. ಇದೆ ವೇಳೆ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಮೋನಾ ವಖಾನಿ ಅವರು ಸೈಂಟಿಫಿಕ್ ಪೇಪರ್ ಪ್ರೆಸೆಂಟೇಷನ್’ (ವೈಜ್ಞಾನಿಕ ಪ್ರಬಂಧ ಮಂಡನೆ) ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸಂಸ್ಥೆಗೆ ಜಾಗತಿಕ ಮನ್ನಣೆ ತಂದುಕೊಟ್ಟ ಸಾಧಕರನ್ನು ಆಡಳಿತ ಮಂಡಳಿ, ಬೋಧಕ ವರ್ಗ ಹಾಗೂ ಆಸ್ಪತ್ರೆಯ ವೈದ್ಯಕೀಯ ತಂಡವು ಮುಕ್ತಕಂಠದಿಂದ ಶ್ಲಾಘಿಸಿದೆ.