ಉಜಿರೆಯ ಎಸ್ ಡಿ. ಎಂ. ಪದವಿ ಪೂರ್ವ ಕಾಲೇಜಿನ ಸ್ಕೌಟ್ ಲೀಡರ್ ಹಾಗೂ ಭೌತ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ ಭಟ್ವ ಅವರು ರೋವರ್ ಸ್ಕೌಟ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿ ಅರ್ಹತೆ

ಬೆಳ್ತಂಗಡಿ: ಉಜಿರೆಯ ಎಸ್ ಡಿ. ಎಂ. ಪದವಿ ಪೂರ್ವ ಕಾಲೇಜಿನ ಸ್ಕೌಟ್ ಲೀಡರ್ ಹಾಗೂ ಭೌತ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ ಭಟ್ವ ಅವರು ರೋವರ್ ಸ್ಕೌಟ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿ ಅರ್ಹತೆ ಪಡೆದಿದ್ದಾರೆ. ಲಕ್ಷ್ಮೀಶ ಅವರು ಸೆ. 24 ರಿಂದ 30ರ ವರೆಗೆ ದೊಡ್ಡಬಳ್ಳಾಪುರದ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದಲ್ಲಿ, ರೋವರ್ ವಿಭಾಗದ ಲೀಡರ್ ಟ್ರೈನರ್ ರಾಜೇಶ್ ಅವಲಕ್ಕಿ ಅವರ ನೇತೃತ್ವದಲ್ಲಿ ತರಬೇತಿ ಪಡೆದಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಹಾಗೂ ಡಾ. ರಾಜೇಶ್ ಬಿ ಇವರು ಲಕ್ಷ್ಮೀಶ ಭಟ್ ಅವರಿಗೆ ಶುಭ ಹಾರೈಸಿದ್ದಾರೆ.