ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಜಯಂತಿ ಅಂಗವಾಗಿ ಹಾಗೂ ರಾಜ್ಯಾಧ್ಯಂತ ಪ್ರಸಾರವಾಗುತ್ತಿರುವ ಹಾಸನ ಜಿಲ್ಲೆಯ ಏಕೈಕ ನಂಬರ್ ಒನ್ ಸುದ್ದಿ ವಾಹಿನಿ ಅಮೋಘ ಟಿವಿಗೆ ``ಉದ್ಯೋಗ್ ಯೋಗದಾನ್ ಪುರಸ್ಕಾರ್-2026; ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ. ಈ ಕಾರ್ಯಕ್ರಮದಲ್ಲಿ ಅಮೋಘ ವಾಹಿನಿ ಮುಖ್ಯಸ್ಥರಾದ ಕೆ.ಪಿ.ಎಸ್. ಪ್ರಮೋದ್ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಜೊತೆಗೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರಾದ ಅಶ್ವಿನಿ ಮತ್ತು ಮಂಜಮ್ಮ ಅವರನ್ನೂ ಗೌರವಿಸಿ ಸಮಾಜಕ್ಕೆ ವಿಶೇಷ ಸಂದೇಶ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಜಯಂತಿ ಅಂಗವಾಗಿ ಹಾಗೂ ರಾಜ್ಯಾಧ್ಯಂತ ಪ್ರಸಾರವಾಗುತ್ತಿರುವ ಹಾಸನ ಜಿಲ್ಲೆಯ ಏಕೈಕ ನಂಬರ್ ಒನ್ ಸುದ್ದಿ ವಾಹಿನಿ ಅಮೋಘ ಟಿವಿಗೆ ``ಉದ್ಯೋಗ್ ಯೋಗದಾನ್ ಪುರಸ್ಕಾರ್-2026; ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ. ಈ ಕಾರ್ಯಕ್ರಮದಲ್ಲಿ ಅಮೋಘ ವಾಹಿನಿ ಮುಖ್ಯಸ್ಥರಾದ ಕೆ.ಪಿ.ಎಸ್. ಪ್ರಮೋದ್ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಜೊತೆಗೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರಾದ ಅಶ್ವಿನಿ ಮತ್ತು ಮಂಜಮ್ಮ ಅವರನ್ನೂ ಗೌರವಿಸಿ ಸಮಾಜಕ್ಕೆ ವಿಶೇಷ ಸಂದೇಶ ನೀಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಪಿ.ಎಸ್. ಪ್ರಮೋದ್ ಅವರು, ಈ ಗೌರವವು ನನ್ನೊಬ್ಬರದ್ದೇ ಅಲ್ಲ, ಅಮೋಘ ವಾಹಿನಿಯ ಸಂಪೂರ್ಣ ತಂಡದ ಪರಿಶ್ರಮದ ಫಲವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಹಾಸನದಲ್ಲಿ ಕೇಬಲ್ ಮಾಧ್ಯಮ ಆರಂಭಗೊಂಡ ದಿನಗಳಿಂದಲೇ ಬೆಳವಣಿಗೆ ಕಂಡು ಇಂದು 20 ವರ್ಷಗಳ ಕಾಲ ಸುದ್ದಿ ವಾಹಿನಿಯನ್ನು ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ಎಲ್ಲರ ಸಹಕಾರವೇ ಕಾರಣವೆಂದರು. ಶ್ರವಣಬೆಳಗೊಳ ಮಹಾಮಸ್ತಾಭಿಷೇಕ, ಹಾಸನಾಂಬೆ ದೇವಿ ದರ್ಶನ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡುವ ಮೂಲಕ ಜನರಿಗೆ ಸಮೀಪವಾಗಿರುವುದಾಗಿ ಹೇಳಿದರು. ಅಮೋಘ ವಾಹಿನಿ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಿರುವುದನ್ನು ಹೆಮ್ಮೆಯಿಂದ ಸ್ಮರಿಸಿದರು. ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್. ಬಿ. ಮದನ್‌ ಗೌಡ ಅವರು ಮಾತನಾಡಿ, ಅಮೋಘ ವಾಹಿನಿ ಸ್ಥಳೀಯ ಮಟ್ಟದಿಂದ ಆರಂಭವಾಗಿ ರಾಜ್ಯಮಟ್ಟದ ಚಾನೆಲ್ ಆಗಿ ಬೆಳೆದಿರುವುದು ಶ್ಲಾಘನೀಯ ಸಾಧನೆ ಎಂದರು. ಉತ್ತಮ ತಂಡವನ್ನು ನಿರ್ಮಿಸಿ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಿರುವುದು ವಿಶೇಷವೆಂದು ಪ್ರಶಂಸಿಸಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್‌. ಕೆಂಚೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಜಯಂತಿ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸುವುದು ಅರ್ಥಪೂರ್ಣ ಕಾರ್ಯವಾಗಿದೆ ಎಂದರು. ಸಮಾಜದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅಮೂಲ್ಯವಾಗಿದ್ದು, ಅವರ ಪರಿಶ್ರಮಕ್ಕೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ತಿಳಿಸಿದರು. ಮುಂದಿನ ದಿನಗಳಲ್ಲೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ ಅವರು ಮಾತನಾಡಿ, ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ಗುಣಾತ್ಮಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತವೆ ಎಂದರು. ಮಾಜಿ ಅಧ್ಯಕ್ಷ ಬಿ .ಆರ್‌. ಉದಯಕುಮಾರ್‌ ಅವರು, ಅಂಬೇಡ್ಕರ್ ಅವರು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನತೆ ಮತ್ತು ಹಕ್ಕುಗಳನ್ನು ಒದಗಿಸಿದ ಮಹಾನ್ ನಾಯಕರು ಎಂದು ಸ್ಮರಿಸಿದರು. ಅಮೋಘ ವಾಹಿನಿ ದೀರ್ಘಕಾಲದಿಂದ ಜನಮೆಚ್ಚುಗೆ ಪಡೆದಿರುವುದನ್ನು ಅಭಿನಂದಿಸಿದರು. ಮಾಜಿ ಅಧ್ಯಕ್ಷ ರವಿನಾಕಲಗೂಡು ಅವರು ಮಾತನಾಡಿ,

ಕಾರ್ಯಕ್ರಮವನ್ನು ಅರ್ಥಪೂರ್ಣ ಆಚರಣೆಯಾಗಿ ಕೊಂಡಾಡಿ, ಸಂಘದ ಬಲವರ್ಧನೆಗೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು. ಉಪಾಧ್ಯಕ್ಷ ಜಿ. ಪ್ರಕಾಶ್ ಅವರು, ಯಾವುದೇ ಶಿಫಾರಸು ಇಲ್ಲದೆ ಪೌರಕಾರ್ಮಿಕರನ್ನು ಸನ್ಮಾನಿಸಿರುವುದು ವಿಶೇಷವೆಂದು ಹೇಳಿದರು. ಹಿರಿಯ ಪತ್ರಕರ್ತ ಸುರೇಶ್ ಕುಮಾರ್ ಅವರು, ಇಂತಹ ಕಾರ್ಯಕ್ರಮಗಳು ಉತ್ತಮ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು. ಟಿವಿ9 ವರದಿಗಾರ ಮಂಜುನಾಥ್ ಅವರು, ಅಂಬೇಡ್ಕರ್ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ, ಸಂವಿಧಾನದ ಮೌಲ್ಯಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದರು.ಇದೇ ವೇಳೆ ವಿವಿಧ ಪತ್ರಕರ್ತರು ಹಾಗೂ ಗಣ್ಯರು ಅಂಬೇಡ್ಕರ್ ಅವರ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಈ ಕಾರ್ಯಕ್ರಮವನ್ನು ಆಚರಿಸುವುದಾಗಿ ತಿಳಿಸಲಾಯಿತು. ಅಂಬೇಡ್ಕರ್‌ ಜಯಂತಿ ಅಂಗವಾಗಿ ಮಹಾನಗರ ಪಾಲಿಕೆಯ ಮಹಿಳಾ ಪೌರಕಾರ್ಮಿಕರಾದ ಮಂಜಮ್ಮ ಮತ್ತು ಅಶ್ವಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಉದ್ಯೋಗ್ ಯೋಗದಾನ್ ಪುರಸ್ಕಾರ್-2026 ಪ್ರಶಸ್ತಿ ಪಡೆದ ಹಿನ್ನೆಲೆ ಅಮೋಘ ಟಿವಿ ಮುಖ್ಯಸ್ಥ ಕೆಪಿಎಸ್‌ ಪ್ರಮೋದ್ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ ನಿರೂಪಿಸಿದರು. ಖಜಾಂಚಿ ಪ್ರಕಾಶ್, ಕಾವ್ಯ, ಚೈತ್ರ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.