ಸಾರಾಂಶ
ಸಾವಿರಾರು ಕೋಟಿ ವಂಚನೆ ಮಾಡಿದವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿ ಗೌರವಿಸುತ್ತದೆ. ಅಂತವರು ನಮ್ಮನ್ನಾಳುತ್ತಾರೆ
ಮುಂಡರಗಿ: ಕೇಂದ್ರ ಸರ್ಕಾರ ಸಾಧನೆ ಮಾಡಿದ ಸಾಧಕರಿಗೆ ಮರಣೋತ್ತರ ಪ್ರಶಸ್ತಿ ನೀಡುತ್ತಿದ್ದು, ಸಾಧನೆ ಅಥವಾ ಸೇವೆ ಮಾಡಿದವರು ಬದುಕಿದ್ದಾಗಲೇ ಕೊಟ್ಟರೆ ಅವರು ಇನ್ನಷ್ಟು ಮಾಡಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಮುಂಡರಗಿ ಜ. ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಮುಂಡರಗಿ ಪಟ್ಟಣದಲ್ಲಿ ಭಾನುವಾರ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಎಲ್ಲ ಶಾಲಾ-ಕಾಲೇಜುಗಳ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಾವಿರಾರು ಕೋಟಿ ವಂಚನೆ ಮಾಡಿದವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿ ಗೌರವಿಸುತ್ತದೆ. ಅಂತವರು ನಮ್ಮನ್ನಾಳುತ್ತಾರೆ. ಆದರೆ ₹ 5 ಸಾವಿರ 10 ಸಾವಿರ ಲಂಚ ಪಡೆದವರನ್ನು ಹಿಡಿದು ಶಿಕ್ಷಿಸುವುದು ಸರಿಯಲ್ಲ. ಆತ್ಮಜ್ಞಾನದಲ್ಲಿ ತೊಡಗಿಕೊಳ್ಳುವವರು ನಿಜವಾದ ಭಾರತೀಯರಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಆರ್.ಹೆಗಡಾಳ, ಕರಬಸಪ್ಪ ಹಂಚಿನಾಳ, ಆರ್.ಬಿ. ಡಂಬಳಮಠ, ವೀರನಗೌಡ ಗುಡದಪ್ಪನವರ, ಎಂ.ಎಸ್. ಶಿವಶೆಟ್ಟರ, ಆರ್.ಎಲ್. ಪೊಲೀಸ್ ಪಾಟೀಲ, ಎಸ್.ಬಿ. ಹಿರೇಮಠ, ಬಸವರಾಜ ಬನ್ನಿಕೊಪ್ಪ, ಎಸ್.ಎಂ. ಹೊಸಮಠ, ಡಾ. ಬಿ.ಜಿ.ಜವಳಿ, ಪ್ರಾಚಾರ್ಯ ಡಿ.ಸಿ.ಮಠ, ಎಂ.ಪಿ.ಕಲ್ಲನಗೌಡರ, ಎಸ್.ಸಿ. ಚಕ್ಕಡಿಮಠ ಉಪಸ್ಥಿತರಿದ್ದರು.ಕನ್ನಡಸಂಘದ ಧ್ವಜಾರೋಹಣ
ಪಟ್ಟಣದ ಬೃಂದಾವನ ವೃತ್ತದಲ್ಲಿರುವ ಕನ್ನಡ ಸಂಘದ ಧ್ವಜಾರೋಹಣವನ್ನು ಪ್ರತಿ ವರ್ಷವೂ ವಿಶೇಷ ವ್ಯಕ್ತಿಗಳಿಂದ ನೆರವೇರಿಸುತ್ತಾ ಬರಲಾಗುತ್ತಿದ್ದು, ಪ್ರಸ್ತುತ ವರ್ಷ ಬಗರಕೇರ ಸಮುದಾಯದ ದುರಗವ್ವ ಬಗರಕೇರ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ವೈ.ಎನ್. ಗೌಡರ, ಹೇಮಂತಗೌಡ ಪಾಟೀಲ, ರುದ್ರಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಫಾಲಾಕ್ಷಿ ಗಣದಿನ್ನಿ, ಎಸ್.ಎಸ್.ಗಡ್ಡದ, ಪ್ರಶಾಂತಗೌಡ ಪಾಟೀಲ, ಆನಂದ ರಾಮೇನಹಳ್ಳಿ, ಶರಣಯ್ಯ ಹಿರೇಮಠ, ಉಮೇಶ ಕೊರಡಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.