ಸಾರಾಂಶ
ಶ್ರೀ ಶಾರದಾ ಭಜನಾ ಮಂಡಳಿಗೆ ಅಜಾದಿಕ ಅಮೃತ ಮಹೋತ್ಸವದ ಭಜನಾಮೃತದಲ್ಲಿ ಭಾಗವಹಿಸಿದ್ದಕ್ಕೆ ಕೇಂದ್ರ ಸರಕಾರದಿಂದ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಲಭಿಸಿದೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ಲಕ್ಕವಳ್ಳಿಯಲ್ಲಿ 20 ವರ್ಷದಿಂದ ಸಕ್ರಿಯವಾಗಿರುವ ಶ್ರೀ ಶಾರದಾ ಭಜನಾ ಮಂಡಳಿಗೆ ಅಜಾದಿಕ ಅಮೃತ ಮಹೋತ್ಸವದ ಭಜನಾಮೃತದಲ್ಲಿ ಭಾಗವಹಿಸಿದ್ದಕ್ಕೆ ಕೇಂದ್ರ ಸರಕಾರದಿಂದ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಲಭಿಸಿದೆ.ಲಕ್ಕವಳ್ಳಿಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದ ಅದ್ಯಕ್ಷತೆಯನ್ನು ಶ್ರೀ ಶಾರದಾ ಭಜನಾ ಮಂಡಳಿ ಅದ್ಯಕ್ಷರಾದ ಸಂಧ್ಯಾ ದತ್ತಾತ್ರಿ ವಹಿಸಿದ್ದರು. ಜ್ಯೋತಿ ಡಾ.ಪ್ರಸಾದ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ ಎಸ್ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಪಡೆಯಲು ಮುಖ್ಯ ಕಾರಣರಾದ ಕಡೂರು ತಾಲೂಕಿನ ಧರ್ಮಸ್ಥಳ ಸಂಘದ ಅಧ್ಯಕ್ಷ ಗಂಗಾಧರ ನಾಯಕ್ ಹಾಗೂ ನಾಗರಾಜ್ ಉಪಸ್ಥಿತರಿದ್ದರು.
2ಕೆಟಿಆರ್.ಕೆ.4.ತರೀಕೆರೆಯ ಲಕ್ಕವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಭಜನಾ ಮಂಡಳಿಗೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ವಿತರಿಸಲಾಯಿತು. ಶ್ರೀ ಶಾರದಾ ಭಜನಾ ಮಂಡಳಿ ಅಧ್ಯಕ್ಷೆ ಸಂಧ್ಯಾ ದತ್ತಾತ್ರಿ, ತಾಪಂಮಾಜಿ ಅಧ್ಯಕ್ಷೆ ಪದ್ಮಾವತಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ ಎಸ್ ರಮೇಶ್, ಗಂ ಗಾ ಧರ ನಾಯಕ್, ನಾಗರಾಜ್ ಮತ್ತಿತರರು ಇದ್ದರು.
-----------------------