ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗು ಹಿಂದೂ ಮಲಯಾಳ ಕ್ರಿಕೆಟ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಯಂಗ್ ಚಾಲೆಂಜರ್ ಐಗೂರು ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಮಾದಾಪುರ ಹಿಂದೂ ಮಾಲಯಾಳ ಕುಟುಂಬದ ವತಿಯಿಂದ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಡಗು ಹಿಂದೂ ಮಲಯಾಳ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಫೈನಲ್ ಪಂದ್ಯಾವಳಿಯಲ್ಲಿ ಐಗೂರು ಯಂಗ್ ಚಾಲೆಂಜರ್ಸ್ ಹಾಗೂ ಇಲೆವನ್ ಸ್ಟಾರ್ ಕಂಬಿಬಾಣೆ ತಂಡಗಳ ರೋಚಕ ಪಂದ್ಯಾವಳಿಯು ನಡೆದು ಮೊದಲು ಬ್ಯಾಟ್ ಕಂಬಿಬಾಣೆ ತಂಡ 6 ಓವರ್‌ಗಳ ಸೀಮಿತ ಪಂದ್ಯಾವಳಿಯಲ್ಲಿ 48ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬ್ಯಾಂಟಿಗ್‌ಗೆ ಇಳಿದ ಯಂಗ್ ಚಾಲೆಂಜರ್ಸ್ ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 3 ಎಸೆತ ಬಾಕಿ ಇರುವಂತೆ 49 ರನ್‌ಗಳಿಸಿ ಗೆಲುವು ಸಾಧಿಸುವ ಮೂಲಕ 33,000 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ ತಂಡವು 22, 000 ರು. ಹಾಗೂ ಟ್ರೋಫಿಯನ್ನು ಪಡೆದುಕೊಂಡರು.
ಐಗೂರು ತಂಡದ ಅಭಿಜಿತ್ ಬಿ ಜೌಟಗದೆ 27 ಬಾರಿಸುವ ಮೂಲಕ ಉತ್ತಮ ಬ್ಯಾಟ್ಸಮನ್ ಬಹುಮಾನ ಪಡೆದುಕೊಂಡರು.ಮಹಿಳಾ ಕ್ರಿಕೆಟ್‌ನಲ್ಲಿ ಮಲ್ದಾರೆ ಪ್ರಥಮ ಹಟ್ಟಿಹೊಳೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಹಗ್ಗ ಜಗ್ಗಾಟದಲ್ಲಿ ಐಗೂರು ಭಜರಂಗಿ ಪ್ರಥಮ, ಮಾಲ್ದಾರೆ ದ್ವಿತೀಯ ಸ್ಥಾನ ಪಡೆದುಕೊಂಡರು.