ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಶ್ರೀ ಸುತ್ತೂರು ಕ್ಷೇತ್ರದಲ್ಲಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಸಂಸ್ಮರಣೆಯ ಅಂಗವಾಗಿ ಇತ್ತೀಚಿಗೆ ನಡೆದ ಮೂರು ದಿನಗಳ ಜೆಎಸ್‌ಎಸ್ ಅಂತರ-ಸಂಸ್ಥೆಗಳ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಬಹುಮಾನಗಳನ್ನು ಗಳಿಸುವ ಮೂಲಕ ಸುತ್ತೂರು ಜೆಎಸ್‌ಎಸ್ ಪ್ರೌಢಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.ಬಾಲಕರ ವಿಭಾಗದಲ್ಲಿ ಅದ್ವಿತ್- 100 ಮೀ ಓಟದಲ್ಲಿ -ದ್ವಿತೀಯ, ಶಿವಪ್ಪ- 100 ಮೀ. ಓಟದಲ್ಲಿ- ತೃತೀಯ, ಶ್ರವಂತ್ ರೆಡ್ಡಿ- 200 ಮೀ. ದ್ವಿತೀಯ, ಮಹಂತೇಶ್ -800 ಮೀ.- ತೃತೀಯ, 1500 ಮೀ.- ದ್ವಿತೀಯ, ಯು.ಡಿ. ಪವನ್ - ಗುಂಡು ಎಸೆತದಲ್ಲಿ- ಪ್ರಥಮ, ಅದ್ವಿತ್- ತೃತೀಯ, ಚಕ್ರ ಎಸೆತ -ಯು.ಡಿ. ಪವನ್ - ದ್ವಿತೀಯ, ಉದ್ದ ಜಿಗಿತದಲ್ಲಿ ಅಭಿನವ್ -ದ್ವಿತೀಯ, ಎತ್ತರ ಜಿಗಿತದಲ್ಲಿ ಅನಿರುದ್ಧ್- ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. 4x100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಗುಂಪು ಆಟಗಳಲ್ಲಿ ಶಾಲೆಯ ಕ್ರೀಡಾಪಟುಗಳು ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಮಹಂತೇಶ್ ಉತ್ತಮ ಆಟಗಾರ ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದಿದ್ದಾನೆ.ಬಾಲಕಿಯರ ವಿಭಾಗದಲ್ಲಿ ಬೋರಮ್ಮ 100 ಮೀ. ಓಟದಲ್ಲಿ ದ್ವಿತೀಯ, 800 ಮೀ ಓಟದಲ್ಲಿ ದ್ವಿತೀಯ, 1,500 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. 400 ಮೀ. ಓಟದಲ್ಲಿ ಕಸ್ತೂರಿ ದ್ವಿತೀಯ, 1500 ಮೀ. ಓಟದಲ್ಲಿ ತೃತೀಯ ಸ್ಥಾನಗಳಿಸಿದ್ದಾಳೆ. ಚಕ್ರ ಎಸೆತದಲ್ಲಿ ಇ. ಸ್ನೇಹ ದ್ವಿತೀಯ, ಗುಂಡು ಎಸೆತದಲ್ಲಿ ಯ್ಯಾಫಬಿ - ದ್ವಿತೀಯ, ಉದ್ದ ಜಿಗಿತದಲ್ಲಿ ಪವಿತ್ರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎತ್ತರ ಜಿಗಿತದಲ್ಲಿ ಯೋಗಿನಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 4x100ಮೀ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಗುಂಪು ಆಟಗಳಲ್ಲಿ ಶಾಲೆಯ ಕ್ರೀಡಾಪಟುಗಳು ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ ಬೋರಮ್ಮ ಉತ್ತಮ ಆಟಗಾರ್ತಿ ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದಿದ್ದಾರೆ.ಶಾಲೆಯ ಕ್ರೀಡಾಪಟುಗಳು ಥ್ರೋ ಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಪೂರ್ವಿಕ ಉತ್ತಮ ಆಟಗಾರ್ತಿ ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದಿದ್ದಾರೆ.
ಪ್ರಶಸ್ತಿ ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಮುಖ್ಯಸ್ಥರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.ನಾಳೆಯಿಂದ ಮೈಸೂರು ಯೋಗ ಉತ್ಸವ
ಕನ್ನಡಪ್ರಭ ವಾರ್ತೆ ಮೈಸೂರುಇಂಡಿಕಾ ಯೋಗ ಸಂಸ್ಥೆ ವತಿಯಿಂದ ಡಿ.12 ರಿಂದ 15 ರವರೆಗೆ ಮೈಸೂರು ಯೋಗ ಉತ್ಸವವನ್ನು ನಗರದ ನಜರ್ ಬಾದ್ ಪೊಲೀಸ್ ಠಾಣೆ ಬಳಿಯ ವಿಂಡ್ ಚೈಮ್ಸ್ ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ. ವಿನಯಚಂದ್ರ ಬನವತಿ ತಿಳಿಸಿದರು.
ಈ ಉತ್ಸವವನ್ನು ಡಿ.12ರ ಬೆಳಗ್ಗೆ 11ಕ್ಕೆ ಎಸ್ ವಿವೈಎಎಸ್‌ಎ ಯೋಗ ವಿವಿ ಉಪ ಕುಲಪತಿ ಡಾ.ಎನ್.ಕೆ. ಮಂಜುನಾಥ್ ಶರ್ಮ ಉದ್ಘಾಟಿಸುವರು. ಶ್ರೀ ಸ್ತೋಕ ಕೃಷ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮನುಬಾ, ಭರತ್ ಶೆಟ್ಟಿ, ಎಚ್.ಆರ್. ನಾಗೇಂದ್ರ, ಬಿ.ಆರ್. ಪೈ ಅತಿಥಿಯಾಗುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಯೋಗ ಉತ್ಸವದಲ್ಲಿ ಹೆಸರಾಂತ ಯೋಗ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಅಭ್ಯಾಸ ಗೋಷ್ಠಿ, ಕಮ್ಮಟ, ಕಾರ್ಯಾಗಾರ, ಸ್ವಾಸ್ಥ್ಯ ಕುರಿತ ವಸ್ತುಪ್ರದರ್ಶನ, ಯೋಗ, ಆಯುರ್ವೇದ, ಆರೋಗ್ಯ ಮೊದಲಾದವುಗಳಿಗೆ ಸಂಬಂಧಿಸಿದ ಉತ್ಪನ್ನ ಮತ್ತು ಸೇವೆ ಪ್ರದರ್ಶನ, ಸಾಂಸ್ಕೃತಿಕ ಸಂಜೆ ಆಯೋಜಿಸಲಾಗಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು.
ಸಂಸ್ಥೆಯ ಪದ್ಮಾವತಿ ಎಸ್. ಭಟ್, ಆನಂದ ವೆಂಕಟಸುಬ್ರಹ್ಮಣ್ಯ, ಬಿ.ಪಿ. ಮೂರ್ತಿ, ದತ್ತಪ್ರಸಾದ್ ಇದ್ದರು.