ಪ್ರಶಸ್ತಿಗಳು ಮಹತ್ವ ಕಳೆದುಕೊಳ್ಳುತ್ತಿವೆ: ಕವಿ ಲಿಂಗರಾಜ

| Published : Dec 16 2024, 12:45 AM IST

ಸಾರಾಂಶ

ಬಹುಮಾನದ ಮೊತ್ತ ಹೆಚ್ಚಿಸಿ ಅದರ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ.

ಹೂವಿನಹಡಗಲಿ: ವರ್ತಮಾನದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಶಸ್ತಿಗಳು ಮಹತ್ವ ಕಳೆದುಕೊಂಡಿವೆ ಎಂದು ಕವಿ ಕಥೆಗಾರ ಹಾವೇರಿಯ ಲಿಂಗರಾಜ ಸೊಟ್ಟಪ್ಪನವರ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಸಿಂಚನ ಪ್ರಕಾಶನ, ಮೇ ಸಾಹಿತ್ಯ ಮೇಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2021 ಮತ್ತು 2022 ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬರೀ ಪ್ರಶಸ್ತಿಗಾಗಿಯೇ ಬರೆಯುವ ಒಂದು ವಲಯ ಇದೆ. ಬಹುಮಾನದ ಮೊತ್ತ ಹೆಚ್ಚಿಸಿ ಅದರ ಮೌಲ್ಯವನ್ನು ಕಡಿಮೆ ಮಾಡುತ್ತಿದ್ದಾರೆ. ಲಾಬಿ, ಸ್ವಜನಪಕ್ಷಪಾತ ಶಿಫಾರಸ್ಸು ಪ್ರಮಾಣ ಸಾಹಿತ್ಯದಲ್ಲಿ ಹೆಚ್ಚುತ್ತಿದೆ ಎಂದರು.

ಕಥೆ ಕವಿತೆಗಳಿಗೆ ಓದುಗರೇ ಆಸ್ತಿ. ಜನರ ನೋವು ಸಂಕಷ್ಟಗಳಿಗೆ ಲೇಖಕ ಸ್ಪಂದಿಸಬೇಕು ಎಂದು ಹೇಳಿದರು.

ಕೊಪ್ಪಳದ ಕವಿ ಅಕ್ಬರ್ ಸಿ ಕಾಲಿಮಿರ್ಚಿ ಮಾತನಾಡಿ, ಎಂ.ಪಿ.ಪ್ರಕಾಶರು ಈ ಭಾಗದ ರಂಗಭೂಮಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.

ಸಾಹಿತಿ ತೋ.ಮ. ಶಂಕ್ರಯ್ಯ ಇಂಗ್ಲಿಷ್ ಕವಯತ್ರಿ ಗೀತಾಂಜಲಿ ಪೈ ಅವರ "ಗೀತಾಂಜಲಿ ಕವಿತೆಗಳು " ಕಾವ್ಯಕೃತಿ ಬಿಡುಗಡೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾಹಿತಿ ಪ್ರಕಾಶ್ ಮಲ್ಕಿ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಗೆ ಪ್ರಕಾಶನದ ಖಾದರಬಾಷಾ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ಬೋವಿ, ಸಿಂಚನ ಪ್ರಕಾಶನದ ಸವಿತಾ ಅಂಗಡಿ ಇತರರು ಉಪಸ್ಥಿತರಿದ್ದರು.

2021 ಹಾಗೂ 2022ರ ಸಿಂಚನ ಕಾವ್ಯ ಪ್ರಶಸ್ತಿಯನ್ನು ಕೊಪ್ಪಳದ ಕವಿ ಅಕ್ಬರ್ ಸಿ ಕಾಲಿಮಿರ್ಚಿ, ಹಾವೇರಿಯ ಕವಿ ಲಿಂಗರಾಜ ಸೊಟ್ಟಪ್ಪನವರ ರವರಿಗೆ 5 ಸಾವಿರ ನಗದು, 2 ಸಾವಿರ ಮೌಲ್ಯದ ಪುಸ್ತಕಗಳು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ತುಂಗಭದ್ರಾ ಪ್ರೌಢಶಾಲೆಯ ಕಳೆದ ವರ್ಷದ ಎನ್ ಎಂ ಎಂ ಎಸ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.

ಪ್ರಶಸ್ತಿ ಪುರಸ್ಕೃತ ಕವಿಗಳ ಕವಿತೆಗಳನ್ನು ವಿದ್ಯಾರ್ಥಿಗಳಾದ ಕೆ.ಕುಸುಮ, ಐಶ್ವರ್ಯ ಎಸ್, ಸೊಪ್ಪಿನ ಪೂರ್ವಿ, ಪ್ರತಿಭಾ ಬಸವರಾಜ ಕುರಿ, ಎಚ್ ದಾಕ್ಷಾಯಿಣಿ, ತಾರಾ ಕಣ್ಮೇಶ್ವರ, ಸೃಷ್ಟಿ ಎಂ, ತ್ರಿವೇಣಿ ಜಿ, ಅಶ್ವಿನಿ ಕಟಗಿ, ಭವಾನಿ ಕಲಾಲ್, ಎಚ್ ರಕ್ಷಿತಾ, ಡಿ ತನಿಷ ವಾಚಿಸಿದರು. ಎ.ಎಂ.ಪಿ.ಪ್ರಶಾಂತ್, ಎಂ.ದಯಾನಂದ, ಸುರೇಶ ಅಂಗಡಿ,

ನಾಗರಾಜ್ ಮಲ್ಕಿಒಡೆಯರ್, ಹಡಗಲಿ ಬಸವರಾಜ ನಿರ್ವಹಿಸಿದರು.