ಅಜೋಲಾ ಎಂಬ ಜಲಶಾಕೆಯನ್ನು ಕರ್ನಾಟಕದಲ್ಲಿ ಕೃಷಿ ಉದ್ದೇಶಕ್ಕಾಗಿ ಸುಮಾರು ೧೯೮೦ರ ದಶಕದಲ್ಲಿ ಪರಿಚಯಿಸಲಾಯಿತು. ಅಜೋಲಾ ಒಂದು ಜಲಸಸ್ಯ. ಇದು ನೀರಿನಲ್ಲಿ ತೇಲುತ್ತಾ ಬೆಳೆಯುವ ಹಸಿರು ಸಸ್ಯವಾಗಿದೆ ಇದು ಅತ್ಯಂತ ವೇಗವಾಗಿ ಬೆಳೆಯುವ ಪೋಷಕಾಂಶಗಳಲ್ಲಿ ಉತ್ತಮವಾದ ಹಸಿರು ಆಹಾರವಾಗಿದೆ. ಇದನ್ನು ಸಾಮಾನ್ಯವಾಗಿ ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತದೆ ಮತ್ತು ನೈಟ್ರೋಜನ್ ಸ್ಥಿರಗೋಳಕದಲ್ಲಿ ಕೂಡ ಉಪಯೋಗಿಸಬಹುದು. ಇದರ ಬಳಕೆಗಳು ಜೈವಿಕ ಗೊಬ್ಬರವಾಗಿ, ಪಶು ಆಹಾರವಾಗಿ, ಬೇಸಾಯದ ಮಣ್ಣಿನ ಸುಧಾರಣೆಗೆ ಬಳಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಬಿ. ಚೌಡೇನಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ಅಜೋಲಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಪೂರ್ಣ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಅಜೋಲಾ ಎಂಬ ಜಲಶಾಕೆಯನ್ನು ಕರ್ನಾಟಕದಲ್ಲಿ ಕೃಷಿ ಉದ್ದೇಶಕ್ಕಾಗಿ ಸುಮಾರು ೧೯೮೦ರ ದಶಕದಲ್ಲಿ ಪರಿಚಯಿಸಲಾಯಿತು. ಅಜೋಲಾ ಒಂದು ಜಲಸಸ್ಯ. ಇದು ನೀರಿನಲ್ಲಿ ತೇಲುತ್ತಾ ಬೆಳೆಯುವ ಹಸಿರು ಸಸ್ಯವಾಗಿದೆ ಇದು ಅತ್ಯಂತ ವೇಗವಾಗಿ ಬೆಳೆಯುವ ಪೋಷಕಾಂಶಗಳಲ್ಲಿ ಉತ್ತಮವಾದ ಹಸಿರು ಆಹಾರವಾಗಿದೆ. ಇದನ್ನು ಸಾಮಾನ್ಯವಾಗಿ ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತದೆ ಮತ್ತು ನೈಟ್ರೋಜನ್ ಸ್ಥಿರಗೋಳಕದಲ್ಲಿ ಕೂಡ ಉಪಯೋಗಿಸಬಹುದು. ಇದರ ಬಳಕೆಗಳು ಜೈವಿಕ ಗೊಬ್ಬರವಾಗಿ, ಪಶು ಆಹಾರವಾಗಿ, ಬೇಸಾಯದ ಮಣ್ಣಿನ ಸುಧಾರಣೆಗೆ ಬಳಸಲಾಗುತ್ತದೆ. ಇದರ ಪ್ರಯೋಜನಗಳು ಗೊಬ್ಬರದ ವೆಚ್ಚ ಕಡಿಮೆ, ಹಾಲು ಉತ್ಪಾದನೆ ಹೆಚ್ಚಳ, ಪ್ರೋಟಿನ್ ದನ ಪಶು ಆಹಾರ, ಪರಿಸರ ಸ್ನೇಹಿ ಕೃಷಿ, ಎಸ್‌ಎನ್‌ಎಫ್ ಫ್ಯಾಟ್ ಹೆಚ್ಚಳ, ಅಜೋಲಾ , ಪ್ರೊಟೀನ್, ಕಬ್ಬಿಣ ,ಕ್ಯಾಲ್ಸಿಯಂ, ಅಂಶಗಳಲ್ಲಿ ಸಮೃದ್ಧವಾಗಿದೆ. ಹಸು ,ಎತ್ತು ,ಕುರಿ ,ಕೋಳಿ ಮುಂತಾದ ಪಶುಗಳಿಗೆ ಉತ್ತಮ ಆಹಾರವಾಗಿದೆ. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗುತ್ತದೆ. ಪಶುಗಳ ಆರೋಗ್ಯ ಸುಧಾರಿಸುತ್ತದೆ ಮತ್ತು ಇದರಿಂದ ರಾಸಾಯನಿಕ ಗೊಬ್ಬರದ ಅವಶ್ಯಕತೆ ಕಡಿಮೆಯಾಗುತ್ತದೆ ಮತ್ತು ಇದನ್ನು ಭತ್ತದ ಬೆಳೆಗೆ ಕೊಡ ಉಪಯೋಗಿಸಬಹುದು. ಅಜೋಲಾ ಬೆಳೆಯಲು ಹೆಚ್ಚಿನ ವೆಚ್ಚ ಬೇಕಾಗುವುದಿಲ್ಲ, ಮನೆಯ ತೋಟದಲ್ಲಿ ಅಥವಾ ಸಣ್ಣ ಗದ್ದೆಯಲ್ಲಿ ಸುಲಭವಾಗಿ ಬೆಳೆಸಬಹುದು. ಈ ಮೂಲಕ ರೈತರೊಡನೆ ಉತ್ತಮ ಸಂವಾದದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.