ಪೋಕ್ಸೋ ಕಾಯ್ದೆ ಮಕ್ಕಳಿಗೆ ಪರಿಣಾಮಕಾರಿ ರಕ್ಷಕ, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕುಟುಂಬದ ಹಂತದಲ್ಲಿಯೇ ಮಕ್ಕಳಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ, ೧೮ ವರ್ಷದ ಒಳಗಿನ ಮಕ್ಕಳಲ್ಲಿ ಸರಿ ತಪ್ಪುಗಳ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುವುದಿಲ್ಲ ಆದುದರಿಂದ ಚಂಚಲ ಮನಸ್ಥಿತಿಯನ್ನು ಹಿಡಿತದಲ್ಲಿಟ್ಟುಕೊಂಡರೆ ಭವಿಷ್ಯ ಉತ್ತಮವಾಗಿರಲು ಸಾಧ್ಯ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಹರೆಯದ ವಯಸ್ಸಿನಲ್ಲಿ ಮಾಡುವ ತಪ್ಪಿಗಾಗಿ ಜೀವನದಾದ್ಯಂತ ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಬಾಲ್ಯದಲ್ಲಿಯೇ ಪೋಕ್ಸೋ ಕಾಯಿದೆ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಚ್. ಪಿ ಸಂದೇಶ್ ತಿಳಿಸಿದ್ದಾರೆ.ಹಾಸನಾಂಬೆ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸುರಕ್ಷತೆ ಮತ್ತು ಕಾನೂನುಗಳ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪೋಕ್ಸೋ ಕಾಯ್ದೆ ಮಕ್ಕಳಿಗೆ ಪರಿಣಾಮಕಾರಿ ರಕ್ಷಕ, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕುಟುಂಬದ ಹಂತದಲ್ಲಿಯೇ ಮಕ್ಕಳಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ, ೧೮ ವರ್ಷದ ಒಳಗಿನ ಮಕ್ಕಳಲ್ಲಿ ಸರಿ ತಪ್ಪುಗಳ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುವುದಿಲ್ಲ ಆದುದರಿಂದ ಚಂಚಲ ಮನಸ್ಥಿತಿಯನ್ನು ಹಿಡಿತದಲ್ಲಿಟ್ಟುಕೊಂಡರೆ ಭವಿಷ್ಯ ಉತ್ತಮವಾಗಿರಲು ಸಾಧ್ಯ ಎಂದರು. ಬೇರೆಯವರ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿದಾಗ ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ಪಡೆಯಲು ಸಾಧ್ಯ, ಪೋಕ್ಸೋ ಅಪರಾಧ ಹಾಗೂ ಅದರ ಪರಿಣಾಮಗಳ ಬಗ್ಗೆ ಕುಟುಂಬ, ಶಾಲಾ ಹಂತದಲ್ಲಿ ಜಾಗೃತಿ ಮೂಡಿದಲ್ಲಿ ಮಕ್ಕಳ ರಕ್ಷಣೆ ಸಾಧ್ಯ, ಮಕ್ಕಳ ರಕ್ಷಣೆಗೆ ಜಾತಿ ಬೇಧವಿಲ್ಲದೆ, ಎಲ್ಲರೂ ಒಗ್ಗಟ್ಟಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಕರೆ ನೀಡಿದರು. ದೇಶದ ಇತಿಹಾಸವನ್ನು ತಿಳಿದುಕೊಳ್ಳಲಿಲ್ಲವೆಂದರೆ ಸದೃಢ ನಾಗರಿಕ ಸಮಾಜ ಕಟ್ಟಲು ಸಾಧ್ಯವಾಗುವುದಿಲ್ಲ ಸದೃಢ ನಾಗರಿಕ ಸಮಾಜವನ್ನು ಕಟ್ಟುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಸ್ವಾಮಿ ವಿವೇಕಾನಂದರ ಪಂಚಮಂತ್ರಗಳಾದ ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾಸ ಹಾಗೂ ಧೈರ್ಯ ಈ ಮಂತ್ರಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸಾಧನೆ ಮಾಡಲು ಸಾಧ್ಯ ವಾಗುತ್ತದೆ ಎಂದು ತಿಳಿಸಿದರು.ಶಿಸ್ತು ಇಲ್ಲದ ಜೀವನ ಜೀವನವೇ ಅಲ್ಲ ಆತ್ಮ ವಿಶ್ವಾಸವನ್ನು ಹೆಜ್ಜೆಯನ್ನು ಇಟ್ಟಾಗ ಮಾತ್ರ ಯಶಸ್ಸು ಸಾಧಿಸಿಬಹುದು, ಶಿಸ್ತು, ಶ್ರಮ ಸಮಯಪ್ರಜ್ಞೆ ಮತ್ತು ಆತ್ಮ ವಿಶ್ವಾಸ ವಿದ್ದರೆ ಏನಾದರೂ ಸಾಧನೆ ಮಾಡುತ್ತೇನೆ ಎಂಬ ಧೈರ್ಯ ಬರುತ್ತದೆ. ಶಿಕ್ಷಣದಿಂದ ಪ್ರೀತಿ, ತ್ಯಾಗ, ವಿನಯ, ಕರುಣೆ ಹಾಗೂ ಪ್ರಾಮಾಣಿಕತೆ ಬರುತ್ತದೆ ಶಿಕ್ಷಣ ಎಂದರೆ ಪದವಿ ಪಡೆದರೆ ಮಾತ್ರವಲ್ಲ ಸಮಾಜಕ್ಕೆ ಕೊಡುಗೆ ನೀಡುತ್ತಿವೆ ಶಿಕ್ಷಣದಿಂದ ಪಡೆದುಕೊಂಡ ಜ್ಞಾನವನ್ನು ಸಮಾಜಕ್ಕೆ ದಾರೆ ಎರೆದರೆ ಮಾತ್ರ ಜೀವನಕ್ಕೆ ಸಾರ್ಥಕವಾಗುತ್ತದೆ ಬರುತ್ತದೆ ಎಂದು ತಿಳಿಸಿದರು.ಪೋಷಕರು ಆಸ್ತಿ ಮಾಡುವ ಬದಲು ಮಕ್ಕಳಿಗೆ ವಿದ್ಯೆ ಹಾಗೂ ಸಂಸ್ಕಾರವನ್ನು ನೀಡಬೇಕು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ದೊರೆತರೆ ಕುಟುಂಬ, ಜಿಲ್ಲೆ ರಾಜ್ಯ ಹಾಗೂ ದೇಶದ ಆಸ್ತಿಯಾತ್ತಾರೆ ಅದಕ್ಕಾಗಿ ಪ್ರತಿಯೊಬ್ಬ ಪೋ?ಕರು ತಮ್ಮ ಮಕ್ಕಳನ್ನು ದೇಶದ ಆಸ್ತಿಯಾಗುವಂತೆ ಬೆಳೆಸಬೇಕು. ಶಿಕ್ಷಕರು ವಿದ್ಯಾರ್ಥಿಯಲ್ಲಿ ಇರುವ ಕೊರತೆಯನ್ನು ಗಮನಿಸಬೇಕು, ಯಾವ ವಿ?ಯದಲ್ಲಿ ಕೌಶಲ್ಯವಿಲ್ಲ ಎಂಬುದನ್ನು ಅರಿಯಬೇಕು ಇಲ್ಲದಿದ್ದರೆ ಶಿಕ್ಷಕ ವೃತ್ತಿಗೆ ಅರ್ಹರಾಗುವುದಿಲ್ಲ ಎಂದು ತಿಳಿಸಿದರು.ಮಕ್ಕಳು ಪೋ?ಕರು ನೀಡುವ ಮಾರ್ಗದರ್ಶನದಲ್ಲಿ ನಡೆದರೆ ಪೋಕ್ಸೋ ಅಂತ ಪ್ರಕರಣಗಳು ನಡೆಯುದಿಲ್ಲ, ಎಲ್ಲರೂ ತಮ್ಮ ಮಕ್ಕಳನ್ನು ನೋಡುವ ದೃಷ್ಟಿಯನ್ನೇ ಎಲ್ಲಾ ಮಕ್ಕಳನ್ನು ನೋಡಬೇಕು ಅಂತಹ ಸಂದರ್ಭದಲ್ಲಿ ಮಾತ್ರ ಪ್ರಕರಣಗಳು ಕಡಿಮೆಯಾಗುತ್ತವೆ, ಮಕ್ಕಳಿಗೆ ಇರುವ ಹಕ್ಕುಗಳನ್ನು ರಕ್ಷಣೆ ಜವಾಬ್ದಾರಿ ಶಿಕ್ಷಕರು, ವಾಹನ ಚಾಲಕರು ಹಾಗೂ ಅಟೆಂಡರ್ ಎಲ್ಲರಿಗೂ ಇರಬೇಕು. ಮಕ್ಕಳಿಗೆ ಲೈಂಗಿಕ ಕೃತ್ಯಗಳು ನಡೆದಾಗ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇರುತ್ತದೆ ಅದರ ಗಮನಕ್ಕೆ ತರುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಮಾತನಾಡಿ ಜಿಲ್ಲೆಯಲ್ಲಿ ೧೮೨ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ೯೮ ಪ್ರಕರಣಗಳು ಬಾಲ್ಯ ವಿವಾಹದ ಪ್ರಕರಣಗಳು ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ಮಕ್ಕಳ ಜೊತೆಯಲ್ಲಿ ಪೋ?ಕರು ಸೂಕ್ಷ್ಮತೆಯಿಂದ ಇದ್ದು, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಗಳನ್ನು ತಡೆಯಬಹುದಾಗಿದೆ.ಎಲ್ಲರೂ ಕೈ ಜೋಡಿಸುವ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿಸೋಣ .ಪೋಕ್ಸೋ ಕಾಯ್ದೆ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಅವರು ತಿಳಿಸಿದರು.ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಸಿ.ವಿ ಸ್ನೇಹ ಮಾತನಾಡಿ, ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ೧೦೯೮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಗೌಪ್ಯತೆ ಕಾಪಾಡಿಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಲಾಗುವುದು ಇದರ ಬಗ್ಗೆ ಪ್ರತಿಯೊಂದು ಮಗುವಿಗೆ ಇದರ ಬಗ್ಗೆ ಅರಿವು ಇರಬೇಕು. ಮಕ್ಕಳು ಸಾಮಾಜಿಕ ಜಾಲತಾಣಗಳ ಬಗ್ಗೆ ಪೋ?ಕರು ಎಚ್ಚರ ವಹಿಸುವುದು ಅಗತ್ಯ ಎಂದರು. ಮಕ್ಕಳ ನಡವಳಿಕೆಯನ್ನು ಪೋ?ಕರು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಪೋಸ್ಕೋ ಖಾಯಿದೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು, ಕಾನೂನಿನ ಅರಿವು ಇದ್ದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರುಜಿಲ್ಲಾಧಿಕಾರಿ ಕೆ. ಎಸ್ ಲತಾ ಕುಮಾರಿ ಅವರು ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣ ಗಮನಿಸಿದರೆ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಬೇಕು ಪೋ?ಕರು, ಶಿಕ್ಷಕರರು ಕಾಳಜಿ ವಹಿಸುವುದು ತುಂಬಾ ಮುಖ್ಯ ಎಂದರು.ಮಕ್ಕಳ ಉತ್ತರ ಭವಿಷ್ಯಕ್ಕೆ ಯಶಸ್ಸು ತುಂಬಾ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಯಾವುದೇ ಸಮಯ ಸಂಧರ್ಭದಲ್ಲಿ ತಮ್ಮ ಸಮಸ್ಯೆಗಾಗಿ ೧೦೯೮ ಮಕ್ಕಳ ಸಹಾಯವಾಣಿ ಸಹಕಾರಿಯಾಗಿರುತ್ತದೆ. ದಯವಿಟ್ಟು ಪ್ರತಿಯೊಂದು ಮಕ್ಕಳಿಗೂ ಇದರ ಬಗ್ಗೆ ಮಾಹಿತಿಯನ್ನು ತಿಳಿಸಬೇಕು ಎಂದು ತಿಳಿಸಿದರು. ಮಕ್ಕಳ ರಕ್ಷಣೆ ಎಂಬುವುದು ಪೋಷಕರು, ಶಿಕ್ಷಕರು ಮಾತ್ರವಲ್ಲ ಮಕ್ಕಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ, ಪ್ರತಿ ಮಕ್ಕಳನ್ನು ನಮ್ಮ ಮಕ್ಕಳಂತೆ ಸಂರಕ್ಷಣೆ ನೀಡಬೇಕು ಮಕ್ಕಳು ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಗಳಿಂದ ದೂರವಿರಬೇಕು ಎಂದರು. ಮಕ್ಕಳಿಂದ ಶಾಲೆ ಬಿಡಿಸುವುದನ್ನು ಪೋಷಕರು ಮಾಡಬಾರದು ಮಕ್ಕಳಿಗೆ ತಿಳಿ ಹೇಳಬೇಕು ಹಾಗೂ ಮುಖ್ಯವಾಗಿ ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನ ದೂರ ಇಡುವುದು ಪ್ರತಿಯೊಬ್ಬ ಪೋಷಕರು ಕರ್ತವ್ಯ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಆರ್ ಪೂರ್ಣಿಮಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಧರಣಿ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.