ಸಾರಾಂಶ
ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ರಾಜ್ಯದ ಮಹದೇವಪುರ ಮತಕ್ಷೇತ್ರದಲ್ಲಿ ಸಾವಿರಾರು ಮತಗಳು ಮತಗಳ್ಳತನವಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ನಮ್ಮ ವೋಟು, ನಮ್ಮ ಹಕ್ಕು, ನಮ್ಮ ಅಧಿಕಾರ.
ಗಜೇಂದ್ರಗಡ: ಮತದಾನದ ಹಕ್ಕನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಸಿದುಕೊಳ್ಳಲು ಹೊಂಚು ಹಾಕುತ್ತಿವೆ. ಈ ಕುರಿತು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ ತಿಳಿಸಿದರು.
ಸಮೀಪದ ಗೋಗೇರಿ ಗ್ರಾಮದಲ್ಲಿ ಶುಕ್ರವಾರ ನರೇಗಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಮತಗಳವು ವಿರುದ್ಧದ ಅಭಿಯಾನದಲ್ಲಿ ಸಹಿ ಮಾಡಿದ ಬಳಿಕ ಮಾತನಾಡಿದರು.ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ರಾಜ್ಯದ ಮಹದೇವಪುರ ಮತಕ್ಷೇತ್ರದಲ್ಲಿ ಸಾವಿರಾರು ಮತಗಳು ಮತಗಳ್ಳತನವಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ನಮ್ಮ ವೋಟು, ನಮ್ಮ ಹಕ್ಕು, ನಮ್ಮ ಅಧಿಕಾರ. ಅದು ನಮ್ಮ ಕೈಯಲ್ಲೇ ಇರಬೇಕು ಎಂದು ತಾಲೂಕಿನ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸುವ ಮೂಲಕ ಸಹಿ ಸಂಗ್ರಹಣಾ ಅಭಿಯಾನಕ್ಕೆ ಮುಂದಾಗಿದ್ದೇವೆ ಎಂದರು.ಬಿಜೆಪಿ ಅವರಿಗೆ ಅಭಿವೃದ್ಧಿಗೆ ಕಾರ್ಯಗಳ ಬಗ್ಗೆ ಆಸಕ್ತಿಯಿಲ್ಲ. ಹೀಗಾಗಿ ನಾಡಹಬ್ಬದ ಉದ್ಘಾಟನೆ, ಬುರಡೆ ಕೇಸ್‌ನಂತಹ ವಿಷಯಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಸ್ಪಷ್ಟವಾದ ಬಹುಮತವಿಲ್ಲ. ಇನ್ನಾದರೂ ಬಿಜೆಪಿಗರು ಜನಪರ ಕೆಲಸಗಳಿಗೆ ಮನ್ನಣೆ ನೀಡಲು ಮುಂದಾಗಬೇಕು ಎಂದರು.
ಮುಖಂಡ ಮಲ್ಲಿಕಾರ್ಜುನ ಗಾರಗಿ ಮಾತನಾಡಿ, ಜಿಎಸ್‌ಟಿ ಮೂಲಕ ಯದ್ವಾತದ್ವಾ ಜನರಿಂದ ಹಣವನ್ನು ಲೂಟಿ ಮಾಡಿದ ಕೇಂದ್ರ ಸರ್ಕಾರದ ದುರಾಡಳಿತದಿಂದ ಅದೇಷ್ಟೋ ಸಣ್ಣಪುಟ್ಟ ಕಂಪನಿಗಳು ಬಂದ್ ಆಗಿವೆ. ಆದರೆ ಈಗ ಜಿಎಸ್‌ಟಿ ಕಡಿಮೆ ಮಾಡಿದ್ದೇವೆ ಎಂದು ಒಣಪ್ರಚಾರ ಕೈಗೊಳ್ಳುತ್ತಿರುವ ಮೋದಿ ಸರ್ಕಾರದ ನೀತಿಗಳು ಅಭಿವೃದ್ಧಿ ಪರವಾಗಿಲ್ಲ. ಏಕೆಂದರೆ ಸ್ಮಾರ್ಟ್ ಸಿಟಿ ನಿರ್ಮಾಣ, ಉದ್ಯೋಗ ಸೃಷ್ಟಿ ಹಾಗೂ ರೈತದ ಆದಾಯ ದ್ವಿಗುಣ ಎಂಬ ಹೇಳಿಕೆಗಳು ಜಾರಿಗೆ ಬಂದಿಲ್ಲ. ಇತ್ತ ರುಪಾಯಿ ಮೌಲ್ಯದ ಬೆಲೆ ನಾಗಾಲೋಟಕ್ಕೆ ಏರಿಸುತ್ತಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ದೂರಿದರು.ಮುಖಂಡರಾದ ಕೆ.ಎಸ್. ಕೊಡತಗೇರಿ, ಇಮಾಮಸಾಬ ಬಾಗವಾನ, ಹನಮಪ್ಪ ಹೊರಪೇಟಿ, ಎಚ್.ಎಂ. ಭೋಸ್ಲೆ, ಸಂಬಾಜಿ ಗಾರಗಿ, ಮೌನೇಶಪ್ಪ ಭೊಸಲೆ, ಹಜರತ ಬಾಗವಾನ, ಅಲ್ಲಾಭಕ್ಷಿ ಭಾಗಮಾನ ಬಾರಿ ಇತರರು ಇದ್ದರು.