ಸಾರಾಂಶ
ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಷಯ ಮುಕ್ತ ಮಂಡ್ಯ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಅಧಿಕಾರಿಗಳಗೆ ರೋಗದ ತೀವ್ರತೆ ಬಗ್ಗೆ ಮಾಹಿತಿ. ಪ್ರತಿಜ್ಞಾವಿಧಿ ಬೋಧನೆ.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸ್ಮಿತಾರಾಮು ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕ್ಷಯ ರೋಗದ ಬಗ್ಗೆ ಅರಿವು ಹಾಗೂ ತಪಾಸಣೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ರವೀಂದ್ರ ಬಿ.ಗೌಡ ಮಾತನಾಡಿ, ಕ್ಷಯರೋಗ ಹರಡುವ ಲಕ್ಷಣಗಳು ಪರೀಕ್ಷೆ ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಿದರು. 100 ದಿನಗಳ ಕ್ಷಯ ರೋಗದ ಅಭಿಯಾನದ ಬಗ್ಗೆ ವಿವರಿಸಿ ಸಿಬ್ಬಂದಿಗೆ ರೋಗಲಕ್ಷಣಗಳ ಕುರಿತು ಮಾಹಿತಿ ನೀಡಿ ತಪಾಸಣೆ ನಡೆಸಲಾಯಿತು.
ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಷಯ ಮುಕ್ತ ಮಂಡ್ಯ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ರೋಗದ ತೀವ್ರತೆ ಬಗ್ಗೆ ತಿಳಿಸಲಾಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು.ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಸೋಮಶೇಖರ ಮತ್ತು ತಾಲೂಕು ಕಚೇರಿ ಅಧಿಕಾರಿಗಳು ಸಿಬ್ಬಂದಿ, ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮೇಗೌಡ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಮಣಿ, ಎಸ್ ಟಿಎಸ್ ಕೆಂಪೇಗೌಡ, ಎಸ್ಟಿಎಲ್ಸಿ ಅರುಣ್ ಕುಮಾರ್ ಹಾಜರಿದ್ದರು.
ನಾಳೆ ಉಚಿತ ಸ್ತ್ರೀರೋಗ ತಪಾಸಣಾ ಶಿಬಿರಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಗ್ರಾಮದಲ್ಲಿರುವ ರಾಧಾ ಪಾಲಿಕ್ಲಿನಿಕ್ ಮತ್ತು ಸುಗಂಧಿನಿ ಮೆಡಿಕಲ್ಸ್ ವತಿಯಿಂದ ಫೆ.21ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಸ್ತ್ರೀರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಶಿಬಿರದಲ್ಲಿ ಪಾಲ್ಗೊಂಡು ಮಹಿಳೆಯರ ಆರೋಗ್ಯ ತಪಾಸಣೆ ನಡೆಸುವರು.ಉಚಿತ ಪ್ಯಾಪ್ ಸ್ಮಿಯರ್, ಗರ್ಭಿಣಿಯರ ಸಮಾಲೋಚನೆ, ಪ್ರಸವಪೂರ್ವ ತಪಾಸಣೆ, ಪದೇ ಪದೇ ಗರ್ಭಪಾತವಾಗುತ್ತಿರುವುದು, ಗರ್ಭಾವಸ್ಥೆಯ ವೈಪರೀತ್ಯಗಳು, ಅಸಹಜ ಗರ್ಭಾಶಯದ ರಕ್ತಸ್ರಾವ, ಮುಟ್ಟಿನ ಸಮಸ್ಯೆ, ಗರ್ಭಕೋಶದ ಗಡ್ಡೆಗಳು, ಅಂಡಾಣು ಸಿಸ್‌ಟ್, ಮಹಿಳೆಯರ ಲೈಂಗಿಕ ಸಮಸ್ಯೆ, ಥೈರಾಯ್ಡ್ ತೊಂದರೆ, ಕೊಳಹೊಟ್ಟೆ ನೋವಿನ ಸಮಸ್ಯೆ, ಮೂತ್ರದ ಸಮಸ್ಯೆ ಮತ್ತು ಸೋಂಕುಗಳು, ಯೋನಿಯಲ್ಲಿನ ಬದಲಾವಣೆ, ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಿದ್ದಾರೆ. ನೋಂದಣಿಗೆ 7019066445, 9900552068 ಸಂಪರ್ಕಿಸುವಂತೆ ಕೋರಿದೆ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಲಿಂಗೇಗೌಡ ನೇಮಕ
ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದ ಮುಖಂಡ ಸಿದ್ದಲಿಂಗೇಗೌಡ ಅವರನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಸಮಿತಿ ಅನುವೋದನೆ ಮೇರೆಗೆ ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಆದೇಶಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಚಿನಕುರಳಿ ಸಿದ್ದಲಿಂಗೇಗೌಡ ಅವರು ಸ್ಥಳೀಯ ನಾಯಕರಗಳ ಸಹಕಾರದೊಂದಿಗೆ ಪಕ್ಷದ ಸಂಘಟನೆಗೆ ಶ್ರಮಿಸಬೇಕೆಂದು ತಿಳಿಸಿದ್ದಾರೆ.