ಬೆಳಗಾಲಪೇಟೆಯಿಂದ ಧರ್ಮಸ್ಥಳಕ್ಕೆ ಜಾಗೃತಿ ಜಾಥಾ

| Published : Aug 25 2025, 01:00 AM IST

ಸಾರಾಂಶ

ಸನಾತನ ಹಿಂದೂ ಧರ್ಮದ ಜಾಗೃತಿ ಅಭಿಯಾನ ಸಂಘಟನೆಯಿಂದ ಹಾನಗಲ್ಲ ತಾಲೂಕಿನ 150 ಕಾರ್ಯಕರ್ತರು 30 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಬೆಳಗಾಲಪೇಟೆಯಿಂದ ಜಾಗೃತಿ ಜಾಥಾ ಕೈಗೊಂಡರು.

ಹಾನಗಲ್ಲ: ಸನಾತನ ಹಿಂದೂ ಧರ್ಮದ ಜಾಗೃತಿ ಅಭಿಯಾನ ಸಂಘಟನೆಯಿಂದ ಹಾನಗಲ್ಲ ತಾಲೂಕಿನ 150 ಕಾರ್ಯಕರ್ತರು 30 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಜಾಗೃತಿ ಜಾಥಾ ಕೈಗೊಂಡರು.

ಭಾನುವಾರ ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಿಂದ ಆರಂಭವಾದ ಜಾಗೃತಿ ಜಾಥಾ ಆಡೂರು, ಬಾಳಂಬೀಡ, ಅಕ್ಕಿಆಲೂರು, ಹಾನಗಲ್ಲ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಸಿದ್ದಲಿಂಗಪ್ಪ ಕಮಡೊಳ್ಳಿ, ಧರ್ಮಸ್ಥಳದ ಅಪಕೀರ್ತಿಗೆ ಯತ್ನಿಸುತ್ತಿರುವ ಹಿಂದೂ ಧರ್ಮವಿರೋಧಿ ವಿಚಾರಧಾರೆಯವರು ನಡೆಸಿದ ಹುನ್ನಾರ ವಿಫಲವಾಗಿದೆ. ಈಗ ಹಿಂದೂಗಳು ಎಚ್ಚೆತ್ತುಕೊಳ್ಳುವ ಕಾಲ. ಹಾನಗಲ್ಲ ತಾಲೂಕಿನಿಂದ ಯುವಕರು ಹಿರಿಯರು ಒಳಗೊಂಡು 150 ಜನ ಧರ್ಮಸ್ಥಳಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದು, ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತನಾಡಿ, ಅವರಿಗೆ ಬೆಂಬಲ ನೀಡುವುದಕ್ಕಾಗಿ ತೆರಳುತ್ತಿದ್ದೇವೆ ಎಂದರು.

ವಕೀಲ ಬಸನಗೌಡ ದಳವಾಯಿ, ಪುರಸಭೆ ಮಾಜಿ ಉಪಾಧ್ಯಕ್ಷ ಗಣೇಶ ಮೂಡ್ಲಿ, ವಿಶ್ವನಾಥ ಬಿಕ್ಷಾವರ್ತಿಮಠ, ಬಸವರಾಜ ಹಾದಿಮನಿ, ನಾಗಣ್ಣ ಶಿವಣ್ಣನವರ, ಸಿದ್ದಲಿಂಗಪ್ಪ ತುಪ್ಪದ, ಮಹೇಶ ಹಿರೇಮಠ, ಜಯಲಿಂಗಪ್ಪ ಹಳಕೊಪ್ಪ, ಪರಶುರಾಮ ಬಾರ್ಕಿ, ರಾಮೂ ಯಳ್ಳೂರ, ಹರೀಶ ಹಾನಗಲ್ಲ ಈ ಜಾಥಾದಲ್ಲಿದ್ದರು.