ದಧಿಚಿ ನೇತ್ರದಾನದ ಬಗ್ಗೆ ಅರಿವು ಕಾರ್ಯಕ್ರಮ: ಕೆ.ಪಿ.ಸುರೇಶ್ ಕುಮಾರ್

| Published : Sep 02 2025, 01:00 AM IST

ದಧಿಚಿ ನೇತ್ರದಾನದ ಬಗ್ಗೆ ಅರಿವು ಕಾರ್ಯಕ್ರಮ: ಕೆ.ಪಿ.ಸುರೇಶ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಕಳೆದ 2 ವರ್ಷದಿಂದ ದಧಿಚಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ವಿಶ್ವ ಹಿಂದೂಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ತಿಳಿಸಿದರು.

- ವಿಶ್ವ ಹಿಂದೂಪರಿಷತ್ ಆಶ್ರಯದಲ್ಲಿ ದಧಿಚಿ ನೇತ್ರದಾನದ ಬಗ್ಗೆ ಅರಿವು, ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಕಳೆದ 2 ವರ್ಷದಿಂದ ದಧಿಚಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ವಿಶ್ವ ಹಿಂದೂಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ತಿಳಿಸಿದರು.ಸೋಮವಾರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಿಂದೂ ಮಹಾ ಗಣಪತಿ ಸಮಿತಿ, ವಿಶ್ವ ಹಿಂದೂ ಪರಿಷತ್ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ದಧಿಚಿ ನೇತ್ರದಾನದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಾಣದಲ್ಲಿ ದಧಿಚಿ ಎಂಬ ಋಷಿಮುನಿಗಳೊಬ್ಬರು ರಾಕ್ಷಸರ ಸಂಹಾರಕ್ಕಾಗಿ ತಮ್ಮ ದೇಹ ತ್ಯಾಗ ಮಾಡಿ ತಮ್ಮ ಬೆನ್ನು ಮೂಳೆಯನ್ನು ಆಯುಧವಾಗಿ ಬಳಸಲು ದಾನವಾಗಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಆದರ್ಶವನ್ನು ಇಟ್ಟುಕೊಂಡು ನಮ್ಮ ನಂತರ ನಮ್ಮ ಎರಡು ಕಣ್ಣುಗಳನ್ನು ದಾನವಾಗಿ ನೀಡಬೇಕು. ಇದರಿಂದ ಇನ್ನೊಬ್ಬರ ಬಾಳು ಬೆಳಕಾಗುತ್ತದೆ. ಈಗಾಗಲೇ ವಿಶ್ವ ಹಿಂದೂ ಪರಿಷತ್ 1 ಸಾವಿರ ಜನರಿಗೆ ದಧಿಚಿ ನೇತ್ರ ದಾನದ ಬಗ್ಗೆ ಸ್ಲೈಡ್ ಶೋ ಮೂಲಕ ಮಾಹಿತಿ ನೀಡಿದ್ದೇವೆ ಎಂದರು.ಸರ್ಕಾರಿ ಆಸ್ಪತ್ರೆ ಅರಿವಳಿಕೆ ತಜ್ಞ ಡಾ.ವೀರಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, 18 ರಿಂದ 60 ವರ್ಷವರೆಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು. ಒಮ್ಮೆ ರಕ್ತದಾನ ಮಾಡಿದವರು 3 ರಿಂದ 4 ತಿಂಗಳ ನಂತರ ಮತ್ತೆ ರಕ್ತದಾನ ಮಾಡಬಹುದು. ಸುಗರ್, ಬಿಪಿ, ಕ್ಯಾನ್ಸರ್ ರೋಗಿಗಳು, ಜ್ವರ ಇದ್ದವರು, ಗರ್ಬಿಣಿಯರು ರಕ್ತದಾನ ಮಾಡಬಾರದು. ರಕ್ತ ದಾನ ಮಾಡಿದ 48 ಗಂಟೆ ಒಳಗೆ ಮತ್ತೆ ರಕ್ತ ಉತ್ಪತ್ತಿ ಯಾಗಲಿದೆ ಎಂದರು.ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ವೈದ್ಯಾಧಿಕಾರಿ ಡಾ.ಅಪ್ರೋಜ್ ಮಹಮ್ಮದ್ ಮಾತನಾಡಿ, ಯಾವುದೇ ಕಾಯಿಲೆ ಇದ್ದವರು ರಕ್ತದಾನ ಮಾಡಬಾರದು.ಒ ಪಾಸಿಟೀವ್ ರಕ್ತ ಎಲ್ಲಾ ಕಡೆ ಸಿಗುತ್ತದೆ. ಆದರೆ ಎ ನೇಗಟೀವ್, ಎಬಿ ನೆಗಟೀವ್ ರಕ್ತ ಸಿಗುವುದಿಲ್ಲ. ಆದ್ದರಿಂದ 40 ವರ್ಷದ ಒಳಗಿನ ಆರೋಗ್ಯವಂತರನ್ನು ರಕ್ತದಾನ ಮಾಡುವಂತ ಪ್ರೇರೇಪಿಸಬೇಕು. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೀಡಲು ಬ್ಲಡ್ ಸ್ಟೋರೇಜ್ ಮಾಡಿಕೊಂಡಿರುತ್ತೇವೆ. ಅಲ್ಲದೆ ರಕ್ತ ದಾನ ಮಾಡಿದವರ ರಕ್ತವನ್ನು ಪರೀಕ್ಷೆ ನಡೆಸಿ ಯಾವುದಾದರೂ ಖಾಯಿಲೆ ಇದ್ದರೆ ಪತ್ತೆ ಹಚ್ಚುತ್ತೇವೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ತಾಂತ್ರಿಕತೆ ಎಷ್ಟೇ ಮುಂದುವರಿದ್ದರೂ ಕೃತಕ ರಕ್ತ ತಯಾರಿಸಲು ಸಾಧ್ಯವಿಲ್ಲ. ಪ್ರಸ್ತುತ ರಕ್ತ ಶೇಖರಣೆ ಕಡಿಮೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಶೇಖರಣೆ ಇರುವ ರಕ್ತವನ್ನು ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೀಡಿದ್ದೇವೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ದಾನ ಶಿಬಿರ ಏರ್ಪಡಿಸಿದರೆ ಅನುಕೂಲವಾಗಲಿದೆ ಎಂದರು. ವಿಶ್ವ ಹಿಂದೂ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಅಶ್ವನ್ ಉದ್ಘಾಟಿಸಿದರು. ಅತಿಥಿಗಳಾಗಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಲಿಂಗರಾಜು, ಡಾ.ವಿನಯ್ ಇದ್ದರು. ವಿಶ್ವ ಹಿಂದೂ ಪರಿಷತ್ ನ ಮುಖಂಡ ಕಾರ್ತಿಕ್ ಸ್ವಾಗತಿಸಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಕಾರ್ಯಕ್ರಮ ನಿರೂಪಿಸಿದರು.