ರಾಷ್ಟ್ರೀಯ ಡೆಂಘೇ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

| Published : May 18 2024, 12:31 AM IST

ರಾಷ್ಟ್ರೀಯ ಡೆಂಘೇ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾವನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ನಗರದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ ನಡೆಸಲಾಯಿತು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರ ನಿಯಂತ್ರಿಸೋಣ ಧ್ಯೇಯ ವಾಕ್ಯದೊಂದಿಗೆ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು.

ಜಿಲ್ಲಾಧಿಕಾರಿ ಕಾರ್ಯಲಯದಿಂದ ಆರಂಭಗೊಂಡ ಜಾಥಾವು ಟಿಪ್ಪು ಸುಲ್ತಾನರಸ್ತೆ ಮೂಲಕ ನಗರಸಭೆ ಕಾರ್ಯಾಲಯು ಮುಂಭಾಗದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ ಏಕಮೀನಾರ ಮಾರ್ಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಜಾಥಾ ಮುಕ್ತಾಯಗೊಳಿಸಲಾಯಿತು.

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಚಂದ್ರಶೇಖರಯ್ಯ ಮಾತನಾಡಿ, ಪ್ರಸಕ್ತ 2024 ವರ್ಷದಲ್ಲಿ ಡೆಂಘೀ ಕಾರ್ಯಚಟುವಟಿಕೆ ಅಡಿಯಲ್ಲಿ 543 ರಕ್ತದ ಮಾದರಿ ಸಂಗ್ರಹಿಸಲಾಗಿದ್ದು ಇದರಲ್ಲಿ 22 ಖಚಿತ ಪ್ರಕರಣ ವರದಿಯಾಗಿರುತ್ತವೆ. ಕಳೆದ ವರ್ಷಕ್ಕೆ ಅಂದರೆ 2023ನೇ ಸಾಲಿನಲ್ಲಿ ಒಟ್ಟು 2186 ರಕ್ತದ ಮಾದರಿ ಸಂಗ್ರಹಿಸಲಾಗಿದ್ದು ಇದರಲ್ಲಿ 78 ಖಚಿತ ಪ್ರಕರಣ ವರದಿಯಾಗಿರುತ್ತವೆ ಎಂದು ತಿಳಿಸಿದರು.

ಈ ವೇಳೆ ಡಿಎಚ್ಒ ಡಾ.ಸುರೇಂದ್ರಬಾಬು, ವಿವಿಧ ವಿಭಾಗಗಳ ಅಧಿಕಾರಿ ಡಾ. ಚಂದ್ರಶೇಖರಯ್ಯ, ಡಾ.ವೆಂಕಟೇಶ ವೈ ನಾಯಕ, ಎಂ.ಡಿ.ಶಾಕೀರ್, ಡಾ.ಶಿವಕುಮಾರ, ಡಾ.ಯಶೋಧ, ಡಾ.ಪ್ರಜ್ವಲ್,ಡಾ.ಜಯಂತಿ, ಡಾ.ಬಾಬುರಾವ್, ರಾಜೇಂದ್ರ ಶಿವಾಳ್ಳೆ, ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಇದ್ದರು.