41ನೇ ರಾಷ್ಟ್ರೀಯ ನೇತ್ರದಾನ್ ಪಾಕ್ಷಿಕ್ ಆಚರಣೆಯ ಪ್ರಯುಕ್ತ ಇಲ್ಲಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ವತಿಯಿಂದ ‘ನೇತ್ರದಾನ್ ಅರಿವು’ ಜಾಥಾವನ್ನು ಆಯೋಜಿಸಲಾಗಿತ್ತು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಜಾಥಾಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

41ನೇ ರಾಷ್ಟ್ರೀಯ ನೇತ್ರದಾನ್ ಪಾಕ್ಷಿಕ್ ಆಚರಣೆಯ ಪ್ರಯುಕ್ತ ಇಲ್ಲಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ವತಿಯಿಂದ ‘ನೇತ್ರದಾನ್ ಅರಿವು’ ಜಾಥಾವನ್ನು ಆಯೋಜಿಸಲಾಗಿತ್ತು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಜಾಥಾಕ್ಕೆ ಚಾಲನೆ ನೀಡಿದರು.ಮೂಡನಂಬಿಕೆ, ಅಜ್ಞಾನದಿಂದ ನೇತ್ರದಾನ ಮಾಡಲು ಜನರು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಆದ್ಯತೆಯಾಗಬೇಕಾಗಿದೆ ಎಂದವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು, ಶೈಕ್ಷಣಿಕವಾಗಿ ಉಡುಪಿ ಜಿಲ್ಲೆಯು ಮಂಚೂಣಿಯಲ್ಲಿದೆ, ಅದೇ ರೀತಿ ಅಂಗಾಂಗ ದಾನದಲ್ಲಿಯೂ ನಾವು ಮಂಚೂಣಿಯಲ್ಲಿರಬೇಕು ಎಂದರು.ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಪೂರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ಲತಾ ನಾಯಕ್ ಶುಭ ಹಾರೈಸಿದರು. ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ನೇತ್ರತಜ್ಞೆ ಡಾ. ಅಪರ್ಣಾ ನಾಯಕ್ ಇದ್ದರು.ನೇತ್ರದಾನದ ವಾಗ್ದಾನ ನಡೆಸಿದ ದಾನಿಗಳಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಾಯಿತು. ಉಡುಪಿಯ ಹಿರಿಯ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ನೇತ್ರದಾನದ ಪ್ರಮಾಣ ವಚನ ನಡೆಸಿಕೊಟ್ಟರು.ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕಿಯ ನಿರ್ದೇಶ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಬಾಲಕೃಷ್ಣ ಮದ್ದೂಡಿ ನಿರೂಪಿಸಿದರು. ಪ್ರಸಾದ್ ನೇತ್ರಾಲಯದ ಮಖ್ಯ ಆಡಳಿತಾಧಿಕಾರಿ ಮಧ್ವವಲ್ಲಭ ಆಚಾರ್ಯ ವಂದಿಸಿದರು.