ಶಾಲಾ ಶಿಕ್ಷಣ ಮೀರಿ ಅರಿವು ಹೆಚ್ಚಿಸಿಕೊಳ್ಳಬೇಕು

| Published : Nov 17 2024, 01:15 AM IST

ಶಾಲಾ ಶಿಕ್ಷಣ ಮೀರಿ ಅರಿವು ಹೆಚ್ಚಿಸಿಕೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಶಿಕ್ಷಣದ ಆಚೆಗೆ ವಿದ್ಯಾರ್ಥಿಗಳು ಮತ್ತು ಸಮುದಾಯ, ಸಮಾಜ ಸೇವೆ ಪರಿಸರ ಕಾಳಜಿ ಸಹಬಾಳ್ವೆಯ ಜೀವನ, ಮಾನವೀಯ ಮೌಲ್ಯಗಳ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಹಾಮಂತ್ರಿ ಕಾಸರಗೋಡು ತಿಮ್ಮಣ್ಣನಾಯ್ಕ ವಂಶಸ್ಥ , ಹೊಗೆಒಡ್ಡಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಅನಂತನಾಯ್ಕ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಶಾಲಾ ಶಿಕ್ಷಣದ ಆಚೆಗೆ ವಿದ್ಯಾರ್ಥಿಗಳು ಮತ್ತು ಸಮುದಾಯ, ಸಮಾಜ ಸೇವೆ ಪರಿಸರ ಕಾಳಜಿ ಸಹಬಾಳ್ವೆಯ ಜೀವನ, ಮಾನವೀಯ ಮೌಲ್ಯಗಳ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಹಾಮಂತ್ರಿ ಕಾಸರಗೋಡು ತಿಮ್ಮಣ್ಣನಾಯ್ಕ ವಂಶಸ್ಥ , ಹೊಗೆಒಡ್ಡಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಅನಂತನಾಯ್ಕ ಹೇಳಿದರು.

ಅವರು ಗುರುವಾರ ಸುಳ್ಳೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅರಿವು ಗ್ರಂಥಾಲಯ ಮತ್ತು ಕೌಶಲ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ,

ಇಂದಿನ ಶಾಲಾ ಚಟುವಟಿಕೆಗಳ ಆಚೆ ಮಕ್ಕಳ ಅರಿವು, ಕೌಶಲ್ಯಮತ್ತು ಅನ್ವೇಷಣೆ ಮನೋಭಾವವನ್ನು ಬೆಳೆಸುವ ಅವಶ್ಯಕತೆ ಇದೆ. ಸರ್ಕಾರಿ ಕೆಲಸ ಎಂದರೆ ಹಾಜರಾತಿ , ಗಂಟೆಗಳ ಲೆಕ್ಕದಲ್ಲಿ ಕರ್ತವ್ಯ ನಿರ್ವಹಣೆ, ಸಂಬಳ ಗಳಿಕೆ ಎಂಬ ವ್ಯವಸ್ಥೆಯೇ ಗಟ್ಟಿಯಾಗಿರುವ ಕಾಲದಲ್ಲಿ ಸುಳ್ಳೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರವಿಚಂದ್ರ ಅದಕ್ಕೆ ಹೊರತಾಗಿ ಮಕ್ಕಳು ಹಾಗೂ ಪೋಷಕರಲ್ಲಿ ಓದುವ ಆಸಕ್ತಿ ಬೆಳೆಸಲು ಮುಂದಾಗಿದ್ದಾರೆ ಎಂದರು.ಸುಳ್ಳೂರು ಮತ್ತು ಸುತ್ತಮುತ್ತಲ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡಿದ ರಾಮನಗರದ ನವಚೇತನ ಸಂಸ್ಥೆಯ ಮಂಜುನಾಥ್ ಅವರು ನೋಟ್ಸ್, ಹೋಂವರ್ಕಗಳ ಆಚೆ ಮಕ್ಕಳ ಬದುಕಿಗೆ ಅಗತ್ಯವಾದ ಜೀವನ ಕೌಶಲ್ಯ ಕೇಂದ್ರದ ಆಲೋಚನೆಯೇ ವಿನೂತನವಾದದ್ದು. ಮುಖ್ಯ ಶಿಕ್ಷಕರಾದ ರವಿಚಂದ್ರ ಅವರ ಈ ವಿಶಿಷ್ಟ ಪ್ರಯತ್ನ ಸಫಲವಾಗಿ, ರಾಜ್ಯಾದ್ಯಂತ ಪಸರಿಸಲಿ ಎಂದು ಹಾರೈಸಿ, ಅವರ ಜೊತೆ ನಾವು ಸಹ ಕೈಜೋಡಿಸುತ್ತೇವೆ ಎಂದರು.

ಮುಖ್ಯ ಶಿಕ್ಷಕ ರವಿಚಂದ್ರ ಮಾತನಾಡಿ, ಆಸಕ್ತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಪಾರಂಪರಿಕ ಕರಕುಶಲ ಕಲೆಗಳ ತರಬೇತಿ, ಜೀವನ ಕೌಶಲ್ಯ ತರಬೇತಿಯ ಉದ್ದೇಶದಿಂದ ಅರಿವು ಗ್ರಂಥಾಲಯ ಮತ್ತು ಕೌಶಲಾಭಿವೃದ್ಧಿ ಕೇಂದ್ರವನ್ನ ಸ್ಥಾಪಿಸಲಾಗಿದೆ. ಇದು ಗ್ರಾಮೀಣ ಭಾಗದ ಯುವ ಜನತೆಗೆ ಉನ್ನತ ವ್ಯಾಸಂಗಕ್ಕೆ ಸಹಾಯಕವಾಗುತ್ತದೆ ಎಂದರು. ಶಾಲಾ ಮಕ್ಕಳಿಂದ ಕಥಾ ವಾಚನ, ಕವನ ವಾಚನ, ನೃತ್ಯ ಪ್ರದರ್ಶನ ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಬೀರನ್ ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರಾಮನಗರದ ಗಂಧದ ಗುಡಿ ಸಂಸ್ಥೆಯ ರಘುನಂದನ್, ದೇವರಾಜ್, ಲಕ್ಷ್ಮೀ ನಾರಾಯಣ ಹೆಗಡೆ, ರಾಜೇಶ್, ಹಿರಿಯ ಶಿಕ್ಷಕ ಪರಶುರಾಮಪ್ಪ, ಹಸೆ ಚಿತ್ತಾರ ಕಲಾವಿದೆ ಉಷಾ, ಶಿಕ್ಷಕಿ ದಿವ್ಯ, ಜನಾರ್ಧನ, ಗಜಾನನ, ಹಾಗೂ ವಿವಿಧ ಶಾಲಾ ಶಿಕ್ಷಕರು, ಪಾಲಕರು , ಪಾಲ್ಗೊಂಡಿದ್ದರು.