ಸಾರಾಂಶ
ಪ್ರೌಢಾವಸ್ಥೆ ಹಂತದ ಬಾಲಕಿಯರ ಸಮಸ್ಯೆ ಆಲಿಸಿ, ಸಲಹೆ ಸೂಚನೆ ನೀಡಿದ ಡಾ. ಅಪೂರ್ವ ಅನುಪ ಹಂಚಿನಾಳ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್ ವತಿಯಿಂದ ಪ್ರೌಢಾವಸ್ಥೆ ಹಂತದ ಬಾಲಕಿಯರಿಗೆ ವೈಯಕ್ತಿಕ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಈಚೆಗೆ ನಡೆಯಿತು.ಸ್ಥಳೀಯ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಅಪೂರ್ವ ಅನುಪ ಹಂಚಿನಾಳ ಉಪನ್ಯಾಸ ನೀಡಿ ೨೦೦ಕ್ಕೂ ಅಧಿಕ ಪ್ರೌಢಾವಸ್ಥೆಯ ಹಂತದ ಬಾಲಕಿಯರ ಸಮಸ್ಯೆಗಳನ್ನು ಆಲಿಸಿ, ಸಲಹೆ ಸೂಚನೆ ನೀಡಿ, ಆ ಸಂದರ್ಭದಲ್ಲಿ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಎಂ.ಎಸ್. ಕದ್ದಿಮನಿ ಲಯನ್ಸ್ ಕ್ಲಬ್ ನ ಸೇವಾ ಕಾರ್ಯ ಶ್ಲಾಘಿಸಿದರು. ಎಂಜೆಎಫ್ ರಮೇಶ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ನವಚೇತನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮತ್ತು ಸ್ಥಳಾವಕಾಶ ಕಲ್ಪಿಸಿಕೊಟ್ಟ ಗಿರಿಮಲ್ಲೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಸಂಗಪ್ಪ ಹಿಡಕಲ್, ಕಾರ್ಯದರ್ಶಿ ಡಾ.ಎಂ.ಎಸ್. ಕದ್ದಿಮನಿ ಮತ್ತು ಮಕ್ಕಳಿಗೆ ಉಪನ್ಯಾಸ ನೀಡಿದ ಡಾ.ಅಪೂರ್ವ ಹಂಚಿನಾಳ, ಪತ್ರಕರ್ತ ನಾರನಗೌಡ ಉತ್ತಂಗಿ ಅವರನ್ನು ಸನ್ಮಾನಿಸಲಾಯಿತು.ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ವಿದ್ಯಾ ದಿನ್ನಿಮನಿ, ಖಜಾಂಚಿ ಪ್ರಶಾಂತ ಅಂಗಡಿ, ಸದಸ್ಯರಾದ ಡಾ.ವಿಶ್ವನಾಥ ಗುಂಡಾ, ಸೋಮಶೇಖರ ಸಂಶಿ, ಡಾ.ಕಿರಣ ಸಣ್ಣಕ್ಕಿ, ಸಂಜೀವ ಶಿರೋಳ, ಅಶ್ವಿನಿ ಕೋಳಿಗುಡ್ಡ, ಡಾ.ಉಮಾ ಗುಂಡಾ, ಶೈಲಾ ಶೆಟ್ಟರ್, ಪೂಜಾ ಅಂಗಡಿ, ವಿದ್ಯಾ ಶಿರೋಳ, ಶಿಕ್ಷಕಿಯರಾದ ಅನ್ನಪೂರ್ಣ ಬಡಿಗೇರ, ಮಲ್ಲಮ್ಮ ಲೋಕುರಿ ಇತರರಿದ್ದರು.
ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೨೦೦ಕ್ಕೂ ಅಧಿಕ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಜೆಸಿ ಶಾಲೆಯ ವಿದ್ಯಾರ್ಥಿನಿಯರಾದ ಭವಾನಿ ಜಾಧವ, ಮಹಾಲಕ್ಷ್ಮಿ ಗುಳದಳ್ಳಿ, ವರ್ಷಿಣಿ ಸಗರಿ, ದಾನೇಶ್ವರಿ ಹಳ್ಳಿ ಪ್ರಾರ್ಥಿಸಿದರು. ನಾರನಗೌಡ ಉತ್ತಂಗಿ ನಿರೂಪಿಸಿ, ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))