ನಗರದ ಹೊಟೇಲ್ ರೆಡ್‌ಬ್ರಿಕ್ಸ್‌ನಲ್ಲಿ ಒಂದು ದಿನದ ಅರಿವು ಕಾರ್ಯಾಗಾರ ಎಂಎಸ್‌ಎಂಇ ಉದ್ದಿಮೆದಾರರಿಗೆ ನಡೆಯಿತು.
ಮಡಿಕೇರಿ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ ನಿರ್ದೇಶನಾಲಯ, ಕೆ.ಸಿ.ಟಿ.ಯು. ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ನಂತರ ನಷ್ಟಕ್ಕೆ ಒಳಗಾದ ಉದ್ಯಮಗಳ ಮರು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ರ್ಯಾಂಪ್ ಯೋಜನೆಯಡಿಯಲ್ಲಿ ಟ್ರೇಡ್ ರಿಸೀವೇಬಲ್ ಡಿಸ್ಕೌಂಟ್ ಸಿಸ್ಟಮ್(ಟ್ರೇಡ್ಸ್) ಯೋಜನೆ ಕುರಿತು ನಗರದ ಹೊಟೇಲ್ ರೆಡ್ ಬ್ರಿಕ್ಸ್ ಇನ್‍ನಲ್ಲಿ ಒಂದು ದಿನದ ಅರಿವು ಕಾರ್ಯಾಗಾರವನ್ನು ಎಂಎಸ್‍ಎಂಇ ಉದ್ದಿಮೆದಾರರಿಗೆ ನಡೆಯಿತು. ಬೆಂಗಳೂರು ಟೆಕ್ಸಾಕ್‍ನ ಸಿಇಒ ಸಿದ್ದರಾಜು ಉದ್ಘಾಟಿಸಿ ರ್ಯಾಂಪ್ ಯೋಜನೆಯಡಿಯಲ್ಲಿರುವ ವಿವಿಧ ಕಾರ್ಯಕ್ರಮಗಳ ಸಂಕ್ಷಿಪ್ತವಾಗಿ ಮಾಹಿತಿಯನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಛೇಂಬರ್ ಆಫ್ ಕಾಮರ್ಸ್‍ನ ನಾಗೇಂದ್ರ ಪ್ರಸಾದ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಉದ್ದಿಮೆದಾರರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಹನುಮಂತರಾಯ ಕೆ ಮಂಗಳೂರು ಎಂಎಸ್‍ಎಂಇ ಸಹಾಯಕ ನಿರ್ದೇಶಕರಾದ ಸುಂದರ ಸೆರಿಗಾರ್ ಎಂ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್.ಪಿ, ಕೂಡಿಗೆ ಆರ್‍ಎಸ್‍ಇಟಿಐ ನಿರ್ದೇಶಕರಾದ ಪ್ರಕಾಶ್ ಕುಮಾರ್.ಕೆ., ಎ.ಜಿ.ಎಂ, ಕೆ.ಎಸ್.ಎಫ್.ಸಿ, ರವಿ ಅವರು ಉಪಸ್ಥಿತರಿದ್ದರು.ನಿವೃತ್ತ ಐಆಒ ಆರ್.ಕೆ. ಬಾಲಚಂದ್ರ ಅವರು ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಉದ್ದಿಮೆದಾರರಿಗೆ ವಿವರವಾದ ತಾಂತ್ರಿಕ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸ್ವಾಗತ ಭಾಷಣ ಹಾಗೂ ವಂದನಾರ್ಪಣೆಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ರಘು ಸಿ.ಎನ್ ಅವರು ನೆರವೇರಿಸಿದರು.