ಸಾರಾಂಶ
ಆನಂದಪುರ ಸಮೀಪದ ದಾಸಕೊಪ್ಪ ಗ್ರಾಮದ ಹರಿ ಹರೇಶ್ವರ ದೇವಾಲಯದ 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಆನಂದಪುರ
ದೇವಸ್ಥಾನಗಳಲ್ಲಿ ದೇವರ ಆರಾಧನೆ ಹಾಗೂ ಉತ್ಸವಗಳು ನಡೆಸುವುದರಿಂದ ಗ್ರಾಮದ ಜನರು ಆರೋಗ್ಯವಂತರಾಗಿರಲು ಸಾಧ್ಯ ಎಂದು ಶ್ರೀಧರ್ ಭಟ್ ಕೆಂಜಿಗಾಪುರ ತಿಳಿಸಿದರು.ದಾಸಕೊಪ್ಪ ಗ್ರಾಮದ ಹರಿಹರೇಶ್ವರ ದೇವಾಲಯದ 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಥೋತ್ಸವ ನೆರವೇರಿಸಿ ಮಾತನಾಡಿ, ಯಾವುದೇ ಒಂದು ಗ್ರಾಮ ಹಾಗೂ ಗ್ರಾಮದ ಜನರು ಅಭಿವೃದ್ಧಿಯಾಗಬೇಕಾದರೆ ಗ್ರಾಮದಲ್ಲಿರುವ ದೇವರ ಆರಾಧನೆ ಉತ್ಸವಗಳು ಸದಾ ನಡೆಯುತ್ತಿರಬೇಕು. ಅಲ್ಲದೆ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ಹಾಗೂ ದೇವರ ಸ್ಮರಣೆ ಭಜನಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿದರೆ ಮಾನಸಿಕ ಒತ್ತಡದಿಂದ ದೂರವಾಗಿ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಥೋತ್ಸವ ಕಾರ್ಯಕ್ರಮ ಕೆಂಜಿಗಾಪುರದ ಶ್ರೀಧರ ಭಟ್ ರವರ ಆಚಾರತ್ವದಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಜೇಂದ್ರ ಯಾದವ್. ಮಂಜುನಾಥ್, ನಿತ್ಯಾನಂದ, ಗಂಗಾಧರ್, ಗಣೇಶ್, ಅಶೋಕ, ಶಿವಮೂರ್ತಿ ಮಮತಾ, ಕಲ್ಪನಾ, ನೂತನ, ಲೀಲಮ್ಮ, ಸರಸ್ವತಿ, ಭಾಗ್ಯಮ್ಮ ಪ್ರಮುಖರು ಉಪಸ್ಥಿತರಿದ್ದರು. ರಥೋತ್ಸವದ ನಂತರ ಆಗಮಿಸಿದಂತಹ ಭಕ್ತಾದಿಗಳಿಗೆ ಸಾಮೂಹಿಕ ಅನ್ನಪ್ರಸಾದ್ ಕಾರ್ಯಕ್ರಮ ನೆರವೇರಿತು.