ಸಾರಾಂಶ
ಮಾಜಿ ಸಚಿವ ಸಿ.ಟಿ.ರವಿ ಮಂಗಳವಾರ ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ನಡೆದ ಮಂಡಲೋತ್ಸವದಲ್ಲಿ, ಶ್ರೀರಾಮನ ಉತ್ಸವ ಮೂರ್ತಿಯ ಬೆಳ್ಳಿ ಪಲ್ಕಕ್ಕಿಗೆ ಹೆಗಲು ಕೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿಕರ್ನಾಟಕದ ಮಾಜಿ ಸಚಿವ ಸಿ.ಟಿ.ರವಿ ಅವರು ಮಂಗಳವಾರ ಅಯೋಧ್ಯೆಗೆ ತೆರಳಿದ್ದು, ಅಲ್ಲಿ ರಾಮಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ, ಶ್ರೀರಾಮನ ಉತ್ಸವ ಮೂರ್ತಿಯ ಬೆಳ್ಳಿ ಪಲ್ಕಕ್ಕಿಗೆ ಹೆಗಲು ಕೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದರು. ಅವರು ಮಂಗಳವಾರದ ಕಲಶಾರಾಧನೆ ಕಲಶಾಭಿಷೇಕದ ಸೇವಾರ್ಥಿಯಾಗಿದ್ದರು.ವಿಧಿಪೂರ್ವಕ ಸಂಕಲ್ಪ ನೆರವೇರಿಸಿ ಪೇಜಾವರ ಶ್ರೀಗಳ ಮೂಲಕ ಬಾಲರಾಮನಿಗೆ ಕಲಶಾಭಿಷೇಕವನ್ನು ನೆರವೇರಿಸಿ, ಶ್ರೀಗಳಿಂದ ರಜತ ಕಲಶಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ರವಿ ಅವರ ಪತ್ನಿ, ಕುಟುಂಬಸ್ಥರು ಉಪಸ್ಥಿತರಿದ್ದರು. ಇದೇ ದಿನ ಧಾರ್ಮಿಕ ಸೇವಾ ಧುರೀಣರಾದ ಬೆಂಗಳೂರಿನ ಕೆ.ಆರ್.ನಗರದ ನಾಗರಾಜ ಪುರಾಣಿಕರೂ ಕಲಶಾಭಿಷೇಕ ಸೇವಾರ್ಥಿಯಾಗಿದ್ದರು.* ಸದ್ಗುರು ಭೇಟಿಸೋಮವಾರ ಈಶಾ ಫೌಂಡಶನ್‌ನ ಸಂಸ್ಥಾಪಕ ಸದ್ಗುರು ಶ್ರೀ ಜಗದೀಶ್ ವಾಸುದೇವ್ ಅವರು ಅಯೋಧ್ಯೆಗೆ ಆಗಮಿಸಿದ್ದು, ರಾಮನ ದರ್ಶನ ಪಡೆದು, ಪೇಜಾವರ ಶ್ರೀಗಳನ್ನು ಭೇಟಿಯಾದರು.