ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಹಿಂದೂಗಳ ಅಸ್ಮಿತೆಯ ಪ್ರತೀಕ ಹಾಗೂ ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯವಾದ ಮುಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಮಂದಿರ ನಿರ್ಮಾಣದ ಹಿಂದೆ ಐದು ಶತಮಾನಗಳ ಹೋರಾಟ ಹಾಗೂ ಕೋಟ್ಯಂತರ ಕರಸೇವಕರ ಬಲಿದಾನದ ಫಲವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಗೋ ರಕ್ಷಾ ಪ್ರಮುಖರಾದ ಮಾರ್ಥಂಡ್ ಶಾಸ್ತ್ರಿ ತಿಳಿಸಿದರು.ಅವರು ನಗರದ ಕರುಣೇಶ್ವರ ಬಡಾವಣೆಯ ಜೈ ವೀರ ಹನುಮಾನ್ ಮಂದಿರದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಯೋಧ್ಯೆ, ವಿಶ್ವ ಹಿಂದೂ ಪರಿಷತ್ ಕಲಬುರಗಿ ಮಹಾನಗರ ಘಟಕದ ವತಿಯಿಂದ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಕಳಸದ ಶೋಭಾಯಾತ್ರೆಯಲ್ಲಿ ಭಾಗವಹಿಸಿ ತದನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೂರಾರು ವರ್ಷಗಳಿಂದಲೂ ಅಪಮಾನಗಳನ್ನು ನುಂಗಿ. ಅನೇಕ ಆಕ್ರಮಣಕಾರರು ದಾಳಿ ಮಾಡಿದರೂ, ಎದೆಗುಂದದೆ ಹೋರಾಟದಲ್ಲಿ ಧುಮುಕಿದ ಫಲವಾಗಿ ಇಂದು ಅಯೋಧ್ಯೆಯ ಪಾವನ ನಗರಿಯಲ್ಲಿ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ೧೮೨೮ರಲ್ಲಿ ಬಾಬರ್ನಿಂದ ದ್ವಂಸ ಪಟ್ಟಿರುವ ರಾಮ ಮಂದಿರ ಇಂದು ಪುನಹ ಜ.೨೨ರಂದು ತಲೆ ಎತ್ತಿ ನಿಲ್ಲಲಿದ್ದು, ಈ ಕಾಲಘಟ್ಟದಲ್ಲಿರುವ ನಾವು ನೀವೆಲ್ಲರೂ ಪುಣ್ಯ ಮಾಡಿದ್ದೇವೆ ಎಂದರು.೪೭೨ ವರ್ಷಗಳ ಸುದೀರ್ಘ ಸಂಘರ್ಷ, ಹಲವು ಯುದ್ಧಗಳು, ೩ ಲಕ್ಷಕ್ಕೂ ಅಧಿಕ ಕರಸೇವಕರ ಬಲಿದಾನ, ೫ ಶತಮಾನಗಳ ಅವಧಿ ನಡೆದ ಹೋರಾಟಗಳಿಗೆ ದೇಶದ ಸರ್ವೋಚ್ಚ ನ್ಯಾಯಾಲಯ ೨೦೧೯ರಲ್ಲಿ ತೀರ್ಪು ನೀಡಿದ್ದು, ಸಾವಿರಾರು ಹೋರಾಟಗಾರರ ಪರಿಶ್ರಮಕ್ಕೆ ಸಿಕ್ಕಂತಹ ಜಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ ಅಲ್ಲಂಪ್ರಭು ಸಂಸ್ಥಾನ ಮಠದ ತೋನಸಹಳ್ಳಿ ಪರಮ ಪೂಜ್ಯ ಮಲ್ಲಣಪ್ಪಾ ಮಹಾರಾಜರು, ಪಾಳಾ ಶ್ರೀಗಳು,ಬಾಲಯೋಗಿನಿ ಜಯಶ್ರೀ ಮಾತಾಜೀ ಸೇರಿದಂತೆ ವಿವಿಧ ಮಠಾಧೀಶರ ಆಶೀರ್ವಚನ ನೀಡಿದರು. ಇದಕ್ಕೂ ಮುನ್ನ ನಗರದ ಶ್ರೀ ರಾಮ ಮಂದಿರದಿಂದ ಕರುಣೇಶ್ವರ ಬಡಾವಣೆಯ ಜೈ ವೀರ ಹನುಮಾನ್ ಮಂದಿರವರೆಗೂ ಶೋಭಾಯಾತ್ರೆ ಜರುಗಿತು.ಕಾಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತದ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಸುರೇಶ್ ಹೆರೂರ್, ಸುಭಾಷ್ ಕಾಂಬಳೆ, ಲಿಂಗರಾಜಪ್ಪಾ ಅಪ್ಪಾ, ಶ್ರೀಮಂತ ನವಲದಿ, ಶಿವರಾಜ್ ಸಂಗೋಳಗಿ, ಅಶ್ವಿನ್ ಕುಮಾರ್, ಪ್ರದೀಪ್ ಪಾಟೀಲ್ ಸೇರಿದಂತೆ ಮಾತೃ ಶಕ್ತಿ ಪ್ರಖಂಡದ ಮುಖ್ಯಸ್ಥರು ಉಪಸ್ಥಿತರಿದ್ದರು.ಸುಮಂಗಲಾ ಚಕ್ರವರ್ತಿ ನಿರೂಪಿಸಿದರು.ವಿನಯ್ ಕುಲಕರ್ಣಿ ಓಂಕಾರ ಮತ್ತು ಯಂವೈದಿಕ ಮಂತ್ರ ಹೇಳಿದರು.