ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಆಯೋಧ್ಯೆ ಬಲಿದಾನ ದಿವಸ್ ಅಂಗವಾಗಿ ವಿಹಿಂಪ ಹಾಗೂ ಬಜರಂಗದಳದಿಂದ ರಕ್ತದಾನ ಶಿಬಿರ ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಹಮ್ಮಿಕೊಳ್ಳುವ ಮೂಲಕ ಹೋರಾಟದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಜರಂಗದಳ ಮುಖಂಡ ಬಾಲಾಜಿ ಮಾತನಾಡಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪುಣ್ಯಭೂಮಿ ರಕ್ಷಣೆಗೆ ಇದೇ ದಿನ ೧೯೯೨ ರಲ್ಲಿ ಹೋರಾಡಿದ ಹಲವಾರು ಮಂದಿ ತಮ್ಮ ಪ್ರಾಣ ತೆತ್ತಿದ್ದರು ಎಂದು ತಿಳಿಸಿದರು.ರಾಮನೇ ಇಲ್ಲ ಎಂದವರಿಗೆ ಉತ್ತರ
ಮರ್ಯಾದ ಪುರುಷೋತ್ತಮ ಹುಟ್ಟಿದ ಭೂಮಿಯಾದ ಆಯೋಧ್ಯೆಯಲ್ಲಿ ರಾಮ ಹುಟ್ಟಿದ ಎಂಬುದನ್ನು ಕೋರ್ಟುಗಳಲ್ಲಿ ನಿರ್ಧರಿಸಬೇಕಾಯಿತು ಎಂದ ಅವರು ಪುರಾತತ್ವ ಇಲಾಖೆಯ ದಾಖಲೆಗಳು ಅಲ್ಲಿ ರಾಮಮಂದಿರವಿತ್ತು ಎಂಬುದನ್ನು ಸಾಕ್ಷೀಕರಿಸುವ ಮೂಲಕ ದೇಶದಲ್ಲಿ ರಾಮನೇ ಇಲ್ಲ ಎನ್ನುವವರಿಗೆ ಉತ್ತರ ಸಿಕ್ಕಂತಾಗಿದೆ ಎಂದರು.ಹಲವರ ಪ್ರಾಣಾರ್ಪಣೆಯಿಂದಲೇ ಇಂದು ಅಯೋಧ್ಯ ರಾಮನ ಜನ್ಮಭೂಮಿ ಎಂದು ಇಂದು ಮಾನ್ಯತೆ ಪಡೆದುಕೊಂಡಿದೆ, ಅಲ್ಲಿ ರಾಮನ ಬೃಹತ್ ದೇವಾಲಯ ನಿರ್ಮಾಣವಾಗಿದ್ದು, ಇದು ರಾಮಭಕ್ತರಿಗೆ ಸಿಕ್ಕ ಗೆಲುವು ಎಂದು ತಿಳಿಸಿದರು.ರಾಮಭಕ್ತರಿಗೆ ಸಿಕ್ಕ ಗೆಲುವುಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ರಾಮಮಂದಿರ ನಿರ್ಮಾಣ ನಮ್ಮ ಧ್ಯೇಯ ಎಂದ ಅನೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು, ಇಂದು ವಿವಾದಿತ ಜಾಗವನ್ನು ರಾಮನದ್ದೆ ಎಂದು ಹೇಳಿದ್ದಲ್ಲದೇ ಅಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ದೇಶಕ್ಕೆ ಸಮರ್ಪಣೆಯಾಗಿರುವುದು ರಾಮಭಕ್ತರಿಗೆ ಸಿಕ್ಕ ಗೆಲುವು ಎಂದು ತಿಳಿಸಿದರು.ವಿಹಿಂಪ ಕೋಲಾರ ವಿಭಾಗದ ಸಂಘಟನಾ ಉಪಾಧ್ಯಕ್ಷ ಸಾಗರ್ ಮಾತನಾಡಿ, ಇಂದು ಹಿಂದೂಗಳ ಆರಾಧ್ಯದೈವ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣವಾಗುತ್ತಿದ್ದು, ಇದು ನೂರಾರು ವರ್ಷಗಳ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಬಜರಂಗದಳ ಬಾಲಾಜಿ,ಬಾಬು, ಶ್ರೀಧರ್, ವಿಶ್ವನಾಥ್, ರಾಜು, ಸಾಯಿಸುಮನ್, ಸಾಯಿಮೌಳಿ, ತೇಜಸ್, ಚಿಕ್ಕ,ವಿಶಾಖ, ತುಳಸಿರಾಮ್ ಇದ್ದರು.
;Resize=(128,128))
;Resize=(128,128))