ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಭಾನುವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಬೆಂಗಳೂರಿನ ಹೆಸರಾಂತ ಆಯುರ್ವೇದ ಸಂಸ್ಥೆಗಳಾದ ಉಪಾಧ್ಯ ಆಯುರ್ವೇದ ಕಂಪನಿ ಮತ್ತು ಉಪಾಧ್ಯ ಹೆಲ್ತ್ ಕೇರ್ ಇವರುಗಳ ಸಹ ಭಾಗಿತ್ವದಲ್ಲಿ ಶ್ರೀ ಕೃಷ್ಣ ಮಠದ ಧನ್ವಂತರಿ ಚಿಕಿತ್ಸಾಲಯದ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಉಚಿತವಾದ ಆಯುರ್ವೇದ ತಪಾಸಣಾ ಶಿಬಿರ ನಡೆಯಿತು.ಪೂಜ್ಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉಪಾಧ್ಯ ಕಂಪನಿಯ ಮುಖ್ಯಸ್ಥರಾದ ರಾಮಚಂದ್ರ ಉಪಾಧ್ಯ ಸ್ವಾಗತ ಕೋರಿದರು. ಡಾ. ಶ್ಯಾಮ ಉಪಾಧ್ಯ ಪ್ರಸ್ತಾವನೆಗೈದರು. ರವೀಂದ್ರ ಆಚಾರ್ಯ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.ಪುತ್ತಿಗೆ ಕಿರಿಯ ಶ್ರೀಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಶಿಬಿರದ ಸ್ಥಳಕ್ಕಾಗಮಿಸಿ ವ್ಯವಸ್ಥೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಶಿಬಿರದಲ್ಲಿ ಡಾ.ಬಿ.ವಿ.ಶೇಷಾದ್ರಿ, ಡಾ.ಗೋಪಾಲಕೃಷ್ಣ, ಡಾ.ರಜನೀಶ್ ಗಿರಿ, ಡಾ.ಸ್ಮಿತಾ, ಡಾ.ಲಕ್ಷ್ಮೀಪ್ರಕಾಶ್, ಡಾ.ವಿಠ್ಠಲಾಚಾರ್ಯ, ಡಾ.ಲಕ್ಷ್ಮಿಪ್ರಸಾದ್, ಡಾ.ಶ್ಯಾಮ್ ಸುಂದರ್ ಉಪಾಧ್ಯ, ಡಾ. ಕಿಶನ್, ಡಾ. ಗೀತಾ, ಡಾ. ಸತೀಶ್ ರಾವ್ ಅವರು ಭಾಗವಹಿಸಿ ಆಗಮಿಸಿದ ನೂರಾರು ಮಂದಿಯನ್ನು ತಪಾಸಣೆಗೈದು ಅನೇಕ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದಿಂದ ಹಂಚಿಕೊಂಡ ಈ ಉಚಿತ ಶಿಬಿರದಲ್ಲಿ ತಪಾಸಣೆಗಳಿಗಾಗಿ ಸಾರ್ವಜನಿಕರು ಬೆಳಗ್ಗೆಯಿಂದಲೇ ಕಾದು ನಿಂತಿದ್ದು ಕಂಡು ಬಂದು ಪರ್ಯಾಯ ಮಠದಿಂದ ನಡೆದ ಈ ಶಿಬಿರ ಹೆಚ್ಚು ಮೆಚ್ಚುಗೆಗೆ ಪಾತ್ರವಾಯಿತು.