ಸಾರಾಂಶ
ವಿಜಯಪುರ: ಆರ್‌ಕೆಎಂ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಿಂದ ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಆಯುರ್ವೇದ ಎಕ್ಸ್‌ಪೋ ನಡೆಸಲಾಯಿತು. ಆರ್‌ಕೆಎಂ ಫಾರ್ಮಸಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಔಷಧೀಯ ಶಾಂಪು, ಸಾಬೂನು, ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿದರು. ಜೊತೆಗೆ ದೈನಂದಿನ ಆಹಾರ ಪದಾರ್ಥಗಳು ಆರೋಗ್ಯ ಕಾಪಾಡಲು ಹೇಗೆ ಸಹಾಯ ಮಾಡುತ್ತವೆ ಎಂಬ ವಿಷಯವನ್ನು ಪೋಸ್ಟರ್‌ಗಳ ಪ್ರದರ್ಶನ ಮಾಡಲಾಯಿತು
ವಿಜಯಪುರ: ಆರ್‌ಕೆಎಂ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಿಂದ ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಆಯುರ್ವೇದ ಎಕ್ಸ್‌ಪೋ ನಡೆಸಲಾಯಿತು. ಆರ್‌ಕೆಎಂ ಫಾರ್ಮಸಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಔಷಧೀಯ ಶಾಂಪು, ಸಾಬೂನು, ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿದರು. ಜೊತೆಗೆ ದೈನಂದಿನ ಆಹಾರ ಪದಾರ್ಥಗಳು ಆರೋಗ್ಯ ಕಾಪಾಡಲು ಹೇಗೆ ಸಹಾಯ ಮಾಡುತ್ತವೆ ಎಂಬ ವಿಷಯವನ್ನು ಪೋಸ್ಟರ್‌ಗಳ ಪ್ರದರ್ಶನ ಮಾಡಲಾಯಿತು. ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಯುರ್ವೇದದ ಜ್ಞಾನವನ್ನು ನವೀನ ಉತ್ಪನ್ನಗಳ ಮೂಲಕ ಹಾಗೂ ಶಿಕ್ಷಣಾತ್ಮಕ ಪ್ರದರ್ಶನಗಳ ಮೂಲಕ ಹರಡುವ ವಿದ್ಯಾಲಯದ ಪ್ರಯತ್ನವನ್ನು ಎಲ್ಲರೂ ಮೆಚ್ಚಿದರು.
ಕಾಲೇಜಿನ ನಿರ್ವಹಣಾ ಮಂಡಳಿ ಮತ್ತು ಅಧ್ಯಾಪಕರು, ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿ, ಸಮಾಜದ ಹಿತಕ್ಕಾಗಿ ಆಯುರ್ವೇದವನ್ನು ಉತ್ತೇಜಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಎಕ್ಸಪೋ ಉದ್ಘಾಟಿಸಿದರು. ಡಾ.ಮೃನಾಲ ರುದ್ರಗೌಡರ, ಡಾ.ರಾಜಶ್ರೀ ವಾಟರಕರ, ಡಾ.ಪುಷ್ಪಾ ರುದ್ರಗೌಡರ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.