ಸಾರಾಂಶ
ಮೈಸೂರಿನಲ್ಲಿ ಹಸಿರಿನ ವಾತಾವರಣ ಹೆಚ್ಚಾದಷ್ಟು ಉತ್ತಮ ಆರೊಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಪರಿಸರ ಕಾಳಜಿಯುಳ್ಳ ಚಟುವಟಿಕೆಯಲ್ಲಿ ಯುವಪೀಳಿಗೆ ಪಾಲ್ಗೊಳ್ಳಲು ಗಮನವಹಿಸಬೇಕು, ನೈಸರ್ಗಿಕ ಆಯುರ್ವೇದ ಗುಣಗಳಿರುವ ಆಹಾರಗಳನ್ನ ಸೇವಿಸಿದಷ್ಟು ಮನುಷ್ಯ ಆಯುಷ್ಯವಾಗಿ ಬಾಳುತ್ತಾನೆ. ಹೀಗಾಗಿ ಮನೆಗೊಂದು ಗಿಡ ಅಭಿಯಾನ ಹೆಚ್ಚು ಉಪಯುಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಹಸಿರುಲೋಕ ವತಿಯಿಂದ ನ್ಯಾಯಾಲಯದ ಮುಂಭಾಗದ ಚಾಮರಾಜಪುರಂ ಮನುವನ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಿದ್ದ ಮನೆಗೊಂದು ಗಿಡ- ಆಯುರ್ವೇದ ಸಸಿಗಳ ವಿತರಣೆ ಅಭಿಯಾನಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ ನೀಡಿದರು.ನಂತರ ಅವರು ಮಾತನಾಡಿ, ಮೈಸೂರಿನಲ್ಲಿ ಹಸಿರಿನ ವಾತಾವರಣ ಹೆಚ್ಚಾದಷ್ಟು ಉತ್ತಮ ಆರೊಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಪರಿಸರ ಕಾಳಜಿಯುಳ್ಳ ಚಟುವಟಿಕೆಯಲ್ಲಿ ಯುವಪೀಳಿಗೆ ಪಾಲ್ಗೊಳ್ಳಲು ಗಮನವಹಿಸಬೇಕು, ನೈಸರ್ಗಿಕ ಆಯುರ್ವೇದ ಗುಣಗಳಿರುವ ಆಹಾರಗಳನ್ನ ಸೇವಿಸಿದಷ್ಟು ಮನುಷ್ಯ ಆಯುಷ್ಯವಾಗಿ ಬಾಳುತ್ತಾನೆ. ಹೀಗಾಗಿ ಮನೆಗೊಂದು ಗಿಡ ಅಭಿಯಾನ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.
ಹಸಿರುಲೋಕ ಅಭಿಯಾನದ ಸಂಚಾಲಕ ಅಜಯ್ ಶಾಸ್ತ್ರಿ ಮಾತನಾಡಿ, ಆರೋಗ್ಯ ನಿರ್ವಹಣೆಯಲ್ಲಿ ಔಷಧಿಯಾಗಿ ಆಯುರ್ವೇದ ಸಸಿಗಳ ಪೋಷಣೆ ಹೆಚ್ಚು ಪರಿಣಾಮಕಾರಿಯಾಗಿದೆ. ಒಂದು ವರ್ಷ ಹಂತ ಹಂತವಾಗಿ 50 ಸಾವಿರ ಸಸಿಗಳ ವಿತರಣೆ ಮಾಡುವ ಗುರಿಯಿದೆ ಎಂದರು.ಆಯುರ್ವೇದ ಗಿಡಗಳಾದ ಅಮೃತಬಳ್ಳಿ, ಮೈಸೂರು ವೀಳ್ಯೆದೆಲೆ, ಅಲೋವೆರಾ, ಉತರಾನಿ, ಲಕ್ಕಿ, ಹಿಪ್ಪಳಿ, ನೀಲಬೇವು, ಆಡಸೋಗೆ, ರನಪಾಲ, ಇನ್ಸೂಲಿನ್, ಕರಿಬೇವು, ಕಾಡಶುಂಠಿ, ನಿಂಬೆ, ಪಪ್ಪಾಯಿ, ದಾಳಿಂಬೆ, ಸೀತಾಫಲ, ಟಿಂಚರ್, ದಾಸವಾಳ, ದೊಡ್ಡಿಪತ್ರೆ, ಕಾಡಕೊತ್ತಮುರಿ ಸೇರಿದಂತೆ 30 ತರಹದ ವಿವಿಧ ಜಾತಿಯ ಆಯುರ್ವೇದ ಸಸಿಗಳನ್ನ ವಿತರಿಸಲಾಯಿತು.
ಬಿಜೆಪಿ ಮುಖಂಡರಾದ ಮೈ.ವಿ. ರವಿಶಂಕರ್, ಮಾ. ಮೋಹನ್, ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯೆ ಸೌಮ್ಯ ಉಮೇಶ್, ಚಂದ್ರಶೇಖರ್, ಜೀವಧಾರ ಗಿರೀಶ್, ರಾಕೇಶ್ ಗೌಡ, ವಿಕ್ರಂ ಅಯ್ಯಂಗಾರ್, ಪ್ರದೀಪ್, ಪ್ರಶಾಂತ್, ರಾಜಣ್ಣ, ಸಂದೀಪ್, ಮಹೇಶ್, ಅರುಣ್, ರಾಘವೇಂದ್ರ, ಚಕ್ರಪಾಣಿ, ಸಂತೋಷ್, ಬೈರತಿ ಲಿಂಗರಾಜು, ಸಚಿನ್, ಎಸ್.ಎನ್. ರಾಜೇಶ್, ಗಿರೀಶ್ ಗೌಡ ಮೊದಲಾದವರು ಇದ್ದರು.ಇಂದು ಜೆಎಸ್ಎಸ್ ಫಾರ್ಮಸಿ ಕಾಲೇಜಿನಲ್ಲಿ ಪದವೀಧರರ ಸ್ವಾಗತ ಕಾರ್ಯಕ್ರಮಮೈಸೂರು: ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಪದವೀಧರರ ಸ್ವಾಗತ ಕಾರ್ಯಕ್ರಮವು ಜು. 1 ರಂದು ಮಧ್ಯಾಹ್ನ 2.30ಕ್ಕೆ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ನಡೆಯಲಿದೆ.ಕಳೆದ ಸಾಲಿನ ವಿವಿಧ ವಿಭಾಗಗಳ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಜತೆಗೆ ಯುವ ಸಂಶೋಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಾಂಶುಪಾಲ ಡಾ.ಟಿ.ಎಂ. ಪ್ರಮೋದ್ಕುಮಾರ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು. ಉಪ ಪ್ರಾಂಶುಪಾಲ ಡಾ.ಜಿ.ವಿ. ಪೂಜಾರ್, ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಲ್. ಕೃಷ್ಣ, ಡಾ.ಬಿ.ಆರ್. ಪ್ರಶಾಂತ್ ಕುಮಾರ್ ಇದ್ದರು.