ಆಯುರ್ವೇದಿಕ್ ಪದ್ಧತಿ ವಿಜ್ಞಾನಗಳ ತಾಯಿ ಬೇರಿದ್ದಂತೆ

| Published : Nov 12 2025, 02:00 AM IST

ಆಯುರ್ವೇದಿಕ್ ಪದ್ಧತಿ ವಿಜ್ಞಾನಗಳ ತಾಯಿ ಬೇರಿದ್ದಂತೆ
Share this Article
  • FB
  • TW
  • Linkdin
  • Email

ಸಾರಾಂಶ

2025-26 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಆಯುರ್ ಪ್ರವೇಶಿಕಾ ಸಮಾರಂಭ ಉದ್ದೇಸಿಸಿ ಎಂ.ಸಿ.ರಘುಚಂದನ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆಯುರ್ವೇದಿಕ್ ಪದ್ಧತಿ ಎಲ್ಲಾ ವಿಜ್ಞಾನಗಳ ತಾಯಿ ಬೇರಿದ್ದಂತೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ತಿಳಿಸಿದರು.ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಪ್ರಕೃತಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 2025-26ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆಯುರ್ ಪ್ರವೇಶಿಕಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಐದು ಸಾವಿರ ವರ್ಷಗಳ ಇತಿಹಾಸವಿರುವ ಆಯುರ್ವೇದ ಪದ್ಧತಿ ಮನುಷ್ಯನ ಜೀವನದಲ್ಲಿಯೂ ವಿಜ್ಞಾನದ ಅರಿವು ಮೂಡಿಸಲಿದೆ. ಬೇರೆ ಬೇರೆ ಪದ್ಧತಿಯಲ್ಲಿ ಚಿಕಿತ್ಸೆ ಪಡೆದರೂ ಕೊನೆಗೆ ಆಯುರ್ವೇದಿಕ್ ಪದ್ಧತಿಗೆ ಬರಬೇಕು. ಹಾಗಾಗಿ ಈ ಪದ್ಧತಿಗೆ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು.

43 ವರ್ಷಗಳ ಹಿಂದೆ ಆರಂಭಗೊಂಡ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕೆಂಬ ಧ್ಯೇಯವಿಟ್ಟುಕೊಂಡಿದೆ. ಹಣ ಗಳಿಕೆ ಮುಖ್ಯವಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್‍ರವರ ಹೆಸರನ್ನಿಟ್ಟುಕೊಂಡು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇವೆ. ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ದೇಶ, ಹೊರದೇಶಗಳಲ್ಲಿಯೂ ಇಲ್ಲಿ ಶಿಕ್ಷಣ ಪಡೆದವರಲ್ಲಿ ಕೆಲವರು ನೌಕರಿಯಲ್ಲಿದ್ದಾರೆನ್ನುವುದು ನಮಗೆ ಹೆಮ್ಮೆಯೆನಿಸುತ್ತದೆ ಎಂದರು.

ಕರ್ನಾಟಕವಲ್ಲದೆ ಮಹಾರಾಷ್ಟ್ರ, ಆಂಧ್ರದಿಂದಲೂ ಮಕ್ಕಳು ನಮ್ಮ ಸಂಸ್ಥೆಗೆ ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಪೋಷಕರುಗಳಿಗೆ ಭರವಸೆ ನೀಡಿದ ಎಂ.ಸಿ.ರಘುಚಂದನ್ ಪಿ.ಯು.ಸಿ. ಪದವಿ, ನರ್ಸಿಂಗ್, ಬಿ.ಇ.ಡಿ. ಕಾಲೇಜು ಜೊತೆಗೆ ಪ್ರಕೃತಿ ಆಯುರ್ವೇದಿಕ್ ಕಾಲೇಜು ಕೂಡ ನಮ್ಮ ಸಂಸ್ಥೆಯಲ್ಲಿದೆ ಎಂದರು.

ಪ್ರಕೃತಿ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಎಸ್.ಬಿ.ನವಾಜ್, ಡೀನ್ ಅಕಾಡೆಮಿಕ್‍ನ ಡಾ.ಬಿ.ಸಿ.ಅನಂತರಾಮು, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಜೆ.ಶಿವಕುಮಾರ್, ಆದ್ಯಾ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಕೆ.ಮೊಹಮದ್ ಮುತಾಹರ್, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಕೆ.ಪಿ.ನಾಗಭೂಷಣ್‍ಶೆಟ್ಟಿ, ಎಸ್.ಎಲ್.ವಿ.ಶಾಲೆ ಮತ್ತು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಂ.ಮಹಾಂತೇಶ್, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.