25 ಮಿಲಿಯನ್ ಮಂದಿಗೆ ಮಧುಮೇಹ: ಶ್ರೀನಿವಾಸಲು

| Published : May 19 2024, 01:45 AM IST

ಸಾರಾಂಶ

ಸ್ತುತ ದಿನಗಳಲ್ಲಿ ಯಾವುದು ಅಗತ್ಯವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ದೇಶದಲ್ಲಿ ಸುಮಾರು 25 ಮಿಲಿಯನ್ ಮಧುಮೇಹಿಗಳು ಇದ್ದಾರೆ. ದೇಶದ ಶೇ. 20ರಷ್ಟು ಮಂದಿ ಬೊಜ್ಜಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಇಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚು ಕಾಡುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಜನಸಂಖ್ಯೆಯಲ್ಲಿ 25 ಮಿಲಿಯನ್ ಅಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಆಯುಷ್ ಇಲಾಖೆ ಆಯುಕ್ತ ಶ್ರೀನಿವಾಸಲು ಹೇಳಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ- 3181 ಆಯೋಜಿಸಿದ್ದ ರೋಟರಿ ಜಿ20 ಯೋಗ ಸಮಿತ್ ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಯಾವುದು ಅಗತ್ಯವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ದೇಶದಲ್ಲಿ ಸುಮಾರು 25 ಮಿಲಿಯನ್ ಮಧುಮೇಹಿಗಳು ಇದ್ದಾರೆ. ದೇಶದ ಶೇ. 20ರಷ್ಟು ಮಂದಿ ಬೊಜ್ಜಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಇಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚು ಕಾಡುತ್ತಿದೆ ಎಂದರು.

ಕೂಡಲೇ ನಾವು ಕೂಡಲೇ ಪರಿಹಾರ ಕ್ರಮಗಳನ್ನು ಹೆಚ್ಚಿಸಬೇಕು. ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಆಯುರ್ವೇದ ಮತ್ತು ಯೋಗ ಸಮಾಜದ ಮುನ್ನೆಲೆ ತರಬೇಕು. ಪಾಶ್ಚಿಮಾತ್ಯ ಆಹಾರ ಮತ್ತು ಜೀವನ ಶೈಲಿಯು ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತಿದೆ ಎಂದರು.

ಆಯುರ್ವೇದ, ಯೋಗ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ ಮುಂತಾದವನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ನಾವು ಇದರಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ರಕ್ಷಣೆಗಾಗಿ ಸಾಕಷ್ಟು ಖರ್ಚು ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದು ದೇಶದ ಆರ್ಥಿಕತೆಯನ್ನು ಅಪಾಯಕ್ಕೆ ದೂಡತ್ತದೆ ಎಂದು ಅವರು ಹೇಳಿದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ನಾವು ಯೋಗವನ್ನು ಹೆಚ್ಚು ಅವಲಂಬಿಸಬೇಕು. ಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದಾಗಿ ಅವರು ಹೇಳಿದರು.

ಜಿ20 ಸಮಿತ್ ನ ಸಂಚಾಲಕ ಡಾ. ಬಸವರಾಜು ಮಾತನಾಡಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆನ್ ಲೈನ್ಮೂಲಕ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಯೋಗ ಅನುಸಂಧಾನ ಸಂಸ್ಥಾನ ವಿವಿಯ ಕುಲಪತಿ ಪದ್ಮಶ್ರೀ ಡಾ.ಎಚ್.ಆರ್. ನಾಗೇಂದ್ರ, ಜಿಎಸ್ಎಸ್ಫೌಂಡೇಷನ್ ನ ಶ್ರೀಹರಿ ಮೊದಲಾದವರು ಇದ್ದರು.