ಸಾರಾಂಶ
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಪೂಜಾ ಕಾರ್ಯಕ್ರಮಗಳು ನಡೆಯಿತು.
ಕುಶಾಲನಗರ: ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಮತ್ತು ದೇವಾಲಯ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು.
ಗುರುವಾರ ಬೆಳಗ್ಗೆ ಗಣಪತಿ ಹೋಮ ಹಾಗೂ ಸಂಜೆ 5 ಗಂಟೆ ಯಿಂದ ಪ್ರೇತ ಬಾಧೆ ಉಚ್ಚಾಟನೆ ಕಾರ್ಯಕ್ರಮಗಳು ಜರುಗಿದವು.7ರ ಬೆಳಗ್ಗೆ ಪ್ರಾಯಶ್ಚಿತ್ತ ಪರಿಹಾರ ಪೂಜೆ ಮತ್ತು ಸಂಕೋಚ (ಬಾಲಾಲಯ) ಪೂಜೆ , ಹಾಗೂ ಮುಷ್ಟಿ ಕಾಣಿಕೆ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷರಾದ ಗಣಪತಿ ತಿಳಿಸಿದ್ದಾರೆ.